ನವದೆಹಲಿ :ಲಾಕ್ಡೌನ್ ಮುಗಿದ ಬಳಿಕ ಆರಂಭವಾಗುವ ತರಬೇತಿ ಅಥವಾ ಪಂದ್ಯಗಳ ವೇಳೆ ಪ್ರತ್ಯೇಕ ಬಾಟೆಲ್, ಟವೆಲ್ ಬಳಸಬೇಕು. ಮೊದಲಾಗಿ ಎಲ್ಲರೂ ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಬಳಸಬೇಕು ಎಂದು ಹಾಕಿ ಇಂಡಿಯಾ ತನ್ನ ಆಟಗಾರರಿಗೆ ಸೂಚನೆ ನೀಡಿದೆ.
ಕೊರೊನಾ ಭೀತಿಯಿಂದ ಈಗಾಗಲೇ ಎಲ್ಲಾ ಮಾದರಿಯ ಕ್ರೀಡಾಕೂಟಗಳು ಸ್ತಬ್ಧಗೊಂಡಿವೆ. ಒಲಿಂಪಿಕ್ಸ್, ಪ್ರೀಮಿಯರ್ ಲೀಗ್ ಹಾಗೂ ಐಪಿಎಲ್ನಂತಹ ಕ್ರೀಡಾಕೂಟಗಳು ಮುಂದೂಡಲ್ಪಟ್ಟಿವೆ.
ಇದೀಗ ಲಾಕ್ಡೌನ್ ಮುಗಿದ ನಂತರ ತರಬೇತಿಯಲ್ಲಿ ಪಾಲ್ಗೊಳ್ಳುವವರು 40x20ಮೀ ಸುತ್ತಳತೆಯಲ್ಲಿ 4 ರಿಂದ 6 ಆಟಗಾರರ ಗುಂಪಿನಲ್ಲಿ ತರಬೇತಿ ನೀಡಲಾಗುತ್ತದೆ. ಇದರಿಂದ ದೊಡ್ಡ ಪ್ರದೇಶದಲ್ಲಿ ಕಡಿಮೆ ಜನರು ಇರುವ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ತನ್ನ 20 ಪುಟಗಳ ಎಸ್ಒಪಿ ಮತ್ತು ಮಾರ್ಗ ಸೂಚಿಗಳನ್ನು ಅಸೋಸಿಯೇಷನ್ಗೆ ತಿಳಿಸಿದೆ.