ನವದೆಹಲಿ:ದೇಶಾದ್ಯಂತ ರೌದ್ರಾವತಾರ ತಾಳುತ್ತಿರುವಕೋವಿಡ್-19 ಪಿಡುಗಿನ ವಿರುದ್ಧದ ಹೋರಾಟಕ್ಕಾಗಿ ಈ ಹಿಂದೆ ಕೈಜೋಡಿಸಿದ್ದ ಹಾಕಿ ಇಂಡಿಯಾ ಇದೀಗ ಮತ್ತಷ್ಟು ಆರ್ಥಿಕ ನೆರವು ನೀಡಿದೆ.
ಪಿಎಂ ಕೇರ್ಸ್ ನಿಧಿಗೆ 1 ಕೋಟಿ ರೂ ನೀಡಿದ ಹಾಕಿ ಇಂಡಿಯಾ
ಪಿಎಂ ಕೇರ್ಸ್ ನಿಧಿಗೆ ಎಲ್ಲೆಡೆಯಿಂದ ದೇಣಿಗೆ ಹರಿದು ಬರುತ್ತಿದ್ದು, ಈ ಹಿಂದೆ ಸಹಾಯ ಮಾಡಿದ್ದ ಹಾಕಿ ಇಂಡಿಯಾ ಇದೀಗ ಹೆಚ್ಚುವರಿ ಹಣ ಘೋಷಿಸಿದೆ.
Hockey India
ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ಹಾಕಿ ಇಂಡಿಯಾ ಪಿಎಂ-ಕೇರ್ಸ್ ನಿಧಿಗೆ ಇದೀಗ ಹೆಚ್ಚುವರಿಯಾಗಿ 75 ಲಕ್ಷ ರೂ ದೇಣಿಗೆ ನೀಡಿದೆ. ಏಪ್ರಿಲ್ 1ರಂದು 25 ಲಕ್ಷ ರೂ ನೀಡಿದ್ದು, ಇದೀಗ ಅದನ್ನು 1 ಕೋಟಿಗೆ ಹೆಚ್ಚಿಸಲು ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ.
ಹಾಕಿ ಇಂಡಿಯಾ ಅಧ್ಯಕ್ಷ ಮೊಹಮ್ಮದ್ ಮುಷ್ತಾಕ್ ಅಹ್ಮದ್ ಮಾತನಾಡಿ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ದೇಶ ಒಗ್ಗಟ್ಟಿನಿಂದ ಹೋರಾಟ ನಡೆಸಿದ್ದು, ಸರ್ಕಾರದೊಂದಿಗೆ ಕೈ ಜೋಡಿಸುವುದು ನಮ್ಮ ಕರ್ತವ್ಯ ಎಂದಿದ್ದಾರೆ.