ಕರ್ನಾಟಕ

karnataka

ETV Bharat / sports

45 ದಿನಗಳಲ್ಲಿ ಸತತ 6ನೇ ಚಿನ್ನಕ್ಕೆ ಮುತ್ತಿಕ್ಕಿದ ಹಿಮಾ ದಾಸ್..

ಜುಲೈನಲ್ಲಿ 19 ದಿನಗಳ ಅಂತರದಲ್ಲಿ 5 ಚಿನ್ನದ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದ ಹಿಮಾ ದಾಸ್​ ಇದೀಗ ಜೆಕ್​ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕಿ ಮಿಟಿಂಕ್​ ರೀಟರ್​ ಇವೆಂಟ್​ನಲ್ಲಿ 300 ಮೀಟರ್​ ಓಟದ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

Hima Das

By

Published : Aug 18, 2019, 5:58 PM IST

​ನವದೆಹಲಿ: ಭಾರತದ ಅಥ್ಲೆಟಿಕ್ಸ್​ನಲ್ಲಿ ಕ್ರಾಂತಿ ಮೂಡಿಸುತ್ತಿರುವ ಅಸ್ಸೋಂನ ಹಿಮಾದಾಸ ರನ್ನಿಂಗ್​ ವಿಭಾಗದಲ್ಲಿ ಚಿನ್ನದ ಬೇಟೆಯನ್ನು ಮುಂದುವರಿಸಿದ್ದಾರೆ.

ಜುಲೈನಲ್ಲಿ 19 ದಿನಗಳ ಅಂತರದಲ್ಲಿ 5 ಚಿನ್ನದ ಪದಕ ಗೆದ್ದು ಭಾರತ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದ ಹಿಮಾ ದಾಸ್​ ಇದೀಗ ಜೆಕ್​ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕಿ ಮಿಟಿಂಕ್​ ರೀಟರ್​ ಇವೆಂಟ್​ನಲ್ಲಿ 300 ಮೀಟರ್​ ಓಟದ ವಿಭಾದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇವರ ಜೊತೆಗೆ ಪುರುಷರ 300 ಮೀಟರ್​ ಓಟದಲ್ಲಿ ಮೊಹ್ಮದ್​ ಅನಾಸ್​ ಕೂಡ ಚಿನ್ನದ ಪದಕ ಪಡೆದಿದ್ದಾರೆ.

ಹಿಮಾದಾಸ್​

ಹಿಮಾ ದಾಸ್ ಪಡೆದ 6 ಚಿನ್ನದ ಪದಕಗಳ ವಿವಿರ

1) ಜುಲೈ 2ರಂದು ಪೊಲೆಂಡ್‍ನಲ್ಲಿ ನಡೆದಿದ್ದ ಪೊಜ್ನಾನ್ ಅಥ್ಲೆಟಿಕ್ಸ್ ಪ್ರಿಕ್ಸ್‌ನಲ್ಲಿ ಹಿಮಾದಾಸ್ 200 ಮೀಟರ್ ಓಟವನ್ನು 23.65 ಸೆಕೆಂಡ್‍ಗಳಲ್ಲಿ ತಲುಪಿ ಮೊದಲ ಚಿನ್ನದ ಪದಕ ಗೆದ್ದಿದ್ದರು.

2) ಜುಲೈ 8 ರಂದು ಕುಟ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ದೂರವನ್ನು 23.97 ಸೆಕೆಂಡ್‍ಗಳಲ್ಲಿ ಕ್ರಮಿಸಿ ಎರಡನೇ ಚಿನ್ನ ಪದಕವನ್ನು ಪಡೆದರು.

3) ಜುಲೈ 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲಾಡ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಸ್ಪರ್ಧೆಯನ್ನು 23.43 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ 3ನೇ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು.

4) ಜುಲೈ 18ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಓಟವನ್ನು 23.25 ಸೆಕೆಂಡ್‍ನಲ್ಲಿ ಪೂರ್ಣಗೊಳಿಸಿ 4ನೇ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.

5) ಜುಲೈ 20 ರಂದು ಜೆಕ್​ ಗಣರಾಜ್ಯದಲ್ಲಿ ನಡೆದ ಟ್ಯಾಬರ್ ಅಥ್ಲೀಟ್ ಮೀಟ್​ನಲ್ಲಿ 400 ಮೀಟರ್​ ಓಟವನ್ನು 52.09 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ತಮ್ಮ ಐದನೇ ಚಿನ್ನದ ಪದಕವನ್ನು ಗಳಸಿದ್ದರು.

6)ಜೆಕ್​ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕಿ ಮಿಟಿಂಕ್​ ರೀಟರ್​ ಇವೆಂಟ್​ನಲ್ಲಿ 300 ಮೀಟರ್​ ಓಟವನ್ನು 32.41 ಸೆಕೆಂಡ್​ಗಳಲ್ಲಿ ಪೂರ್ಣಗೊಳಿಸಿ 6ನೇ ಚಿನ್ನದ ಪಕದ ಪಡೆದಿದ್ದಾರೆ.

ABOUT THE AUTHOR

...view details