ಅಡಿಲೇಡ್: ಆಸೀಸ್ ವೇಗಿಗಳ ದಾಳಿಗೆ ತರಗೆಲೆಗಳಂತೆ ಉದುರಿದ ಟೀಂ ಇಂಡಿಯಾ ಆಟಗಾರರು 36 ರನ್ ಗಳಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಕಲೆಹಾಕಿದ ಅತಿ ಕಡಿಮೆ ರನ್ ಎಂಬ ಕಳಪೆ ದಾಖಲೆ ಬರೆದಿದ್ದಾರೆ.
ವಿಶೇಷ ಎಂದರೆ ವಿರಾಟ್ ಕೊಹ್ಲಿ ನಾಯಕತ್ವದಲ್ಲೇ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಮತ್ತು ಅತಿ ಕಡಿಮೆ ರನ್ ಕಲೆಹಾಕಿದ ದಾಖಲೆ ಬರೆದಿದೆ. 2016ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದ್ದ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳು 759 ರನ್ ಕಲೆಹಾಕಿದ್ರು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡ ಪೇರಿಸಿದ ಹೆಚ್ಚು ರನ್ ಆಗಿದೆ.
ಆಂಗ್ಲರ ಬೆವರಿಳಿಸಿದ್ದ ಕನ್ನಡಿಗ ಕರುಣ್ ನಾಯರ್ ಅಜೇಯ 303 ರನ್ ಗಳಿಸಿದ್ರೆ, ಕೆ.ಎಲ್.ರಾಹುಲ್ 199 ರನ್ ಗಳಿಸಿದ್ರು. ಅಂದಿನ ಪಂದ್ಯದಲ್ಲಿ ಭಾರತ ತಂಡ ಇನ್ನಿಂಗ್ಸ್ ಮತ್ತು 75 ರನ್ಗಳಿಂದ ಗೆಲುವು ಸಾಧಿಸಿತ್ತು.
ಓದಿಬ್ಯಾಟಿಂಗ್ ವೇಳೆ ಗಾಯಗೊಂಡ ಶಮಿ: ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ
ಇಂದು ಮುಕ್ತಾಯವಾದ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿರುವ ಭಾರತೀಯ ಬ್ಯಾಟ್ಸ್ಮನ್ಗಳು ಕೇವಲ 36 ರನ್ ಗಳಿಸಿದ್ದಾರೆ. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಗಳಿಸಿದ ಅತಿ ಕಡಿಮೆ ರನ್ ಆಗಿದೆ. ವಿಶೇಷ ಅಂದರೆ ಈ ಎರಡೂ ಇನ್ನಿಂಗ್ಸ್ಗಳು ಮುಕ್ತಾಯವಾಗಿದ್ದು ಡಿಸೆಂಬರ್ 19ರಂದು ಮತ್ತು ಎರಡೂ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕ.