ಕರ್ನಾಟಕ

karnataka

ETV Bharat / sports

ನಾ ಕಂಡ ಅತ್ಯತ್ತಮ ನಾಯಕ ಇಯಾನ್ ಮಾರ್ಗನ್: ಮೋಯಿನ್ ಅಲಿ

ನನ್ನ ಆಟದ ಬಹಳಷ್ಟು ಮನ್ನಣೆ ಮಾರ್ಗನ್​ಗೆ ಹೋಗಬೇಕು. ಉಪ ನಾಯಕನಾಗಿ ಅವರು ನನಗೆ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಮೋಯಿನ್ ಅಲಿ ತಮ್ಮ ಪ್ರದರ್ಶನದ ಕ್ರೆಡಿಟ್ಅನ್ನು ತಂಡದ ನಾಯಕನಿಗೆ ನೀಡಿದ್ದಾರೆ.

By

Published : Sep 2, 2020, 12:50 PM IST

He's the best captain I've had: Moeen Ali credits Morgan for success with bat
ನಾ ಕಂಡ ಅತ್ಯತ್ತಮ ನಾಯಕ ಮಾರ್ಗನ್

ಮ್ಯಾಂಚೆಸ್ಟರ್: ಪಾಕ್ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ 61 ರನ್ ಗಳಿಸಿ ಬ್ಯಾಟಿಂಗ್​​ನಲ್ಲಿ ಯಶಸ್ಸು ಕಂಡ ಇಂಗ್ಲೆಂಡ್ ಆಲ್‌ರೌಂಡರ್ ಮೋಯಿನ್ ಅಲಿ ತಮ್ಮ ತಂಡದ ನಾಯಕ ಇಯಾನ್ ಮಾರ್ಗನ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನನ್ನ ಆಟದ ಬಹಳಷ್ಟು ಮನ್ನಣೆ ಮಾರ್ಗನ್​ಗೆ ಹೋಗಬೇಕು. ಉಪ ನಾಯಕನಾಗಿ ಅವರು ನನಗೆ ಜವಾಬ್ದಾರಿಯನ್ನು ನೀಡಿದ್ದಾರೆ. ನಾಯಕನಿಂದ ಆ ಬೆಂಬಲವನ್ನು ಪಡೆಯಲು, ಇದು ಅವರು ಅತ್ಯುತ್ತಮ ನಾಯಕನಾಗಲು ಒಂದು ಕಾರಣವಾಗಿದೆ. ಅವರು ನನಗೆ ಸಾಕಷ್ಟು ಆತ್ಮವಿಶ್ವಾಸವನ್ನು ನೀಡುತ್ತಾರೆ. ನಾನು ಹಲವು ಸಮಯದವರೆಗೆ ಉತ್ತಮವಾಗಿ ಆಡಿಲ್ಲ. ಆದರೂ ನನಗೆ ಬೆಂಬಲ ನೀಡಿದ್ರು ಎಂದು ಅಲಿ ಹೇಳಿದ್ದಾರೆ.

ಇಂಗ್ಲೆಂಡ್-ಪಾಕಿಸ್ತಾನ ಟಿ-20 ಸರಣಿ

ಅವರು ನನ್ನ ಬಳಿಗೆ ಬಂದು ನೀವು ತಂಡಕ್ಕೆ ಏನಾದರೂ ಮಾಹಿತಿ ನೀಡಲು ಬಯಸುವಿರಾ? ಇದು ನನಗೆ ಜವಾಬ್ದಾರಿಯುತ ಮತ್ತು ತಂಡದ ದೊಡ್ಡ ಭಾಗವಾಗಿದೆ. ನಾನು ಹೇಳುವುದನ್ನು ಮೊದಲು ಪಾಲಿಸಬೇಕು. ನಾನೇ ಮಾಡಲು ಸಾಧ್ಯವಾಗದಿದ್ದರೆ ಹುಡುಗರಿಗೆ ಸ್ಫೂರ್ತಿ ನೀಡಲು ಸಾಧ್ಯವಿಲ್ಲ. ಇದು ಹುಡುಗರಲ್ಲಿ ಮತ್ತು ತಂಡದಲ್ಲಿ ನನಗೆ ಸಾಕಷ್ಟು ವಿಶೇಷವೆನಿಸುತ್ತದೆ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಕೊನೆಯ 19 ಇನ್ನಿಂಗ್ಸ್‌ಗಳಲ್ಲಿ ಕೇವಲ ಐದು ಬಾರಿ ಎರಡಂಕಿ ಸ್ಕೋರ್‌ ಗಳಿಸಿರುವ ಮೋಯಿನ್ ಅಲಿ, ಪಾಕಿಸ್ತಾನ ವಿರುದ್ಧದ ಮೂರನೇ ಮತ್ತು ಅಂತಿಮ ಟಿ-20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.

ABOUT THE AUTHOR

...view details