ಕ್ಯಾನ್ಬೆರಾ:ಇಂಗ್ಲೆಂಡ್ ಮಹಿಳಾ ತಂಡದ ನಾಯಕಿ ದೀದರ್ ನೈಟ್ ಬುಧವಾರ ನಡೆದ ಟಿ-20 ವಿಶ್ವಕಪ್ನ ಥಾಯ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ದಾಖಲಿಸುವ ಮೂಲಕ ಮೂರೂ ಫಾರ್ಮೆಟ್ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಏಕೈಕ ಮಹಿಳಾ ಕ್ರಿಕೆಟರ್ ಹಾಗೂ ಇಂಗ್ಲೆಂಡ್ ತಂಡದ ಮೊದಲ ಕ್ರಿಕೆಟರ್ ಎಂಬ ದಾಖಲೆ ಬರೆದಿದ್ದಾರೆ.
29 ವರ್ಷದ ನೈಟ್, ಥಾಯ್ಲೆಂಡ್ ವಿರುದ್ಧ ಕೇವಲ 66 ಎಸೆತಗಳಲ್ಲಿ 13 ಬೌಂಡರಿ ಹಾಗೂ 3 ಸಿಕ್ಸರ್ಗಳ ಸಹಿತ 108 ರನ್ ಗಳಿಸಿದ್ದರು. ಈ ಮೂಲಕ ಏಕದಿನ, ಟೆಸ್ಟ್ ಹಾಗೂ ಟಿ-20 ಪಂದ್ಯಗಳಲ್ಲಿ ಶತಕ ಸಿಡಿಸಿದ ಮೊದಲ ಮಹಿಳಾ ಕ್ರಿಕೆಟರ್ ಎನಿಸಿಕೊಂಡರು.