ಕರ್ನಾಟಕ

karnataka

ETV Bharat / sports

ಪಂತ್​ ಪ್ರತಿಭಾವಂತ... ಅಂತಾರಾಷ್ಟ್ರೀಯ ಮಟ್ಟದಲ್ಲಿ​ ಒತ್ತಡ ಇದ್ದಿದ್ದೆ ಎಂದ ಆರ್​ಸಿಬಿ ಆಟಗಾರ - ಪಂತ್​ ಪ್ರತಿಭಾವಂತ ಕ್ರಿಕೆಟರ್​

ಅಂತಾರಾಷ್ಟ್ರೀಯ ಕ್ರಿಕೆಟ್​ ಆಡುತ್ತಿರುವುದರಿಂದ ಪಂತ್​ ಒತ್ತಡದಲ್ಲಿದ್ದಾರೆ. ಅಲ್ಲದೇ ಯಾವೊಬ್ಬ ಆಟಗಾರ ತಮ್ಮ ದೇಶಕ್ಕಾಗಿ ಆಡುತ್ತಾನೋ ಅವನಿಗೆ ಒತ್ತಡ ಸಾಮಾನ್ಯವಾಗಿರುತ್ತದೆ ಎಂದು ಪಾರ್ಥೀವ್​ ಪಟೇಲ್​ ಹೇಳಿದ್ದಾರೆ.

Parthiv Patel backs Rishabh Pant
Parthiv Patel backs Rishabh Pant

By

Published : Jan 2, 2020, 6:48 PM IST

ಕೋಲ್ಕತ್ತಾ:ಭಾರತ ತಂಡವನ್ನು ಪ್ರತಿನಿಧಿಸಿರುವ ಹಿರಿಯ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಪಾರ್ಥೀವ್​ ಪಟೇಲ್​ ರಿಷಭ್​ ಪಂತ್ ಅವ​ರನ್ನು ಕುರಿತು ಮೆಚ್ಚುಗೆಯ ಮಾತನಾಡಿದ್ದಾರೆ.

ಪಾರ್ಥೀವ್​ ಪಟೇಲ್​ ಸಂದರ್ಶನ

ಈ ಟಿವಿ ಭಾರತ್ ನಡೆಸಿದ ಎಕ್ಸ್​ಕ್ಲೂಸಿವ್​ ಸಂದರ್ಶನದಲ್ಲಿ ಮಾತನಾಡಿದ ಅವರು, ರಿಷಭ್​ ಪಂತ್​ ಪ್ತಿಭಾವಂತ ಕ್ರಿಕೆಟರ್​ ಆಗಿರುವುದರಿಂದಲೇ ರಾಷ್ಟ್ರೀಯ ತಂಡಕ್ಕೆ ಬೇಗ ಆಯ್ಕೆಯಾಗಿದ್ದಾರೆ. ಆದರೆ, ದೊಡ್ಡಮಟ್ಟದ ಕ್ರಿಕೆಟ್​ ಆಡುವಾಗ ಒತ್ತಡ ಅಗುವುದು ಸಾಮಾನ್ಯ ಎಂದು ಪಂತ್​ರನ್ನು ಹೊಗಳಿದ್ದಾರೆ.

ತನ್ನ ರಾಷ್ಟ್ರವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಕ್ರಿಕೆಟಿಗನು ಒತ್ತಡದಲ್ಲಿರುತ್ತಾನೆ ಎಂದು ಹೇಳುವ ಮೂಲಕ 34 ವರ್ಷದ ಪಂತ್​ ಪರ ಬ್ಯಾಟಿಂಗ್ ಮಾಡಿದ್ದಾರೆ.

ಜನವರಿ 3ರಿಂದ ಪಶ್ಚಿಮ ಬಂಗಾಳದ ವಿರುದ್ಧ ಗುಜರಾತ್​ ಸೆಣಸಾಡಲಿದೆ. ಪಾರ್ಥೀವ್​ ಪಟೇಲ್​ ಗುಜರಾತ್​ ತಂಡದ ನೇತೃತ್ವವಹಿಸಲಿದ್ದಾರೆ.

ಗುಜರಾತ್​ ತಂಡ ಆಡಿರುವ ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಹೈದರಾಬಾದ್​ ವಿರುದ್ಧ 8 ವಿಕೆಟ್​ಗಳಿಂದ ಹಾಗೂ ಎರಡನೇ ಪಂದ್ಯದಲ್ಲಿ ಕೇರಳ ವಿರುದ್ಧ ಗುಜರಾತ್​ 90 ರನ್​ಗಳ ಜಯ ಸಾಧಿಸಿತ್ತು. ಇನ್ನು ಬೆಂಗಾಲ್​ ತನ್ನ ಮೊದಲ ಪಂದ್ಯದಲ್ಲಿ ಕೇರಳ ವಿರುದ್ಧ 8 ವಿಕೆಟ್​ಗಳಿಂದ ಜಯ ಸಾಧಿಸಿದ್ದರೆ, ಎರಡನೇ ಪಂದ್ಯದಲ್ಲಿ ಆಂಧ್ರಪ್ರದೇಶದ ವಿರುದ್ಧ ಡ್ರಾ ಸಾಧಿಸಿತ್ತು.

ABOUT THE AUTHOR

...view details