ಕರ್ನಾಟಕ

karnataka

ETV Bharat / sports

ರಿಷಭ್ ಪಂತ್ ಆಟ ಗಿಲ್​ಕ್ರಿಸ್ಟ್ ಅವರನ್ನು ನೆನಪಿಸುತ್ತೆ: ಆಕಾಶ್ ಚೋಪ್ರಾ - ರಿಷಭ್ ಪಂತ್

ಪಂತ್ ಯಾವಾಗ ಬ್ಯಾಟಿಂಗ್ ಮಾಡುತ್ತಾರೋ ಆಗ ಗಿಲ್‌ಕ್ರಿಸ್ಟ್ ಅವರನ್ನು ನೆನಪಿಸುತ್ತಾರೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.

Aakash Chopra hails Rishabh Pant
ರಿಷಭ್ ಪಂತ್

By

Published : Dec 13, 2020, 8:01 PM IST

ಸಿಡ್ನಿ:ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಮುಕ್ತಾಯವಾದ ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಭ್​ ಪಂತ್​ ಕುರಿತು ವೀಕ್ಷಕ ವಿವರಣೆಕಾರ ಆಕಾಶ್ ಚೋಪ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ್ದ ರಿಷಭ್ ಪಂತ್ ಆರಂಭದಿಂದಲೂ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ್ದರು. ಕೇವಲ 73 ಎಸೆತಗಳಲ್ಲಿ 9 ಬೌಂಡರಿ ಮತ್ತು 6 ಸಿಕ್ಸರ್​ಗಳ ನೆರವಿನಿಂದ 103 ರನ್​ಗಳಿಸಿದ್ರು.

ರಿಷಭ್ ಪಂತ್

ಪಂತ್ ಬ್ಯಾಟಿಂಗ್‌ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿರುವ ಆಕಾಶ್ ಚೋಪ್ರಾ, ಆಟದ ಗತಿಯನ್ನು ಬದಲಿಸುವ ಸಾಮರ್ಥ್ಯ ಪಂತ್ ಅವರಲ್ಲಿದೆ. ಹೀಗಾಗಿ ಅವರು ಆ್ಯಡಂ ಗಿಲ್‌ಕ್ರಿಸ್ಟ್ ಆಟವನ್ನು ನೆನಪಿಸುತ್ತಾರೆ ಎಂದಿದ್ದಾರೆ.

ಓದಿಉತ್ತಮ ಫಾರ್ಮ್​ನಲ್ಲಿ ಸಹಾ, ಪಂತ್: ಟೀಂ ಇಂಡಿಯಾಕ್ಕೆ ಹೊಸ ತಲೆನೋವು

"ಎದುರಾಳಿ ಬೌಲಿಂಗ್ ಪಡೆಯನ್ನು ಪುಡಿಗಟ್ಟಿ ತಂಡಕ್ಕೆ ಮೇಲುಗೈ ನೀಡುವುದು ಪಂತ್ ಬ್ಯಾಟಿಂಗ್‌ನ ಉತ್ಕೃಷ್ಟತೆ ತೋರಿಸುತ್ತದೆ. ಆತ ಗಿಲ್‌ಕ್ರಿಸ್ಟ್ ರೀತಿಯ ಆಟಗಾರ. ಗಿಲ್‌ಕ್ರಿಸ್ಟ್ ಸಾಧನೆ ಅಪಾರವಾಗಿದೆ. ಆದರೆ ರಿಷಭ್ ಪಂತ್ ಅವರ ವೃತ್ತಿಜೀವನ ಈಗಷ್ಟೇ ಆರಂಭವಾಗಿದೆ. ಪಂತ್ ಯಾವಾಗ ಬ್ಯಾಟಿಂಗ್ ಮಾಡುತ್ತಾರೋ ಆಗ ಗಿಲ್‌ಕ್ರಿಸ್ಟ್ ಅವರನ್ನು ನೆನಪಿಸುತ್ತಾರೆ. ಗಿಲ್‌ಕ್ರಿಸ್ಟ್ ಅವರ ಸಾಧನೆಯ ಸನಿಹಕ್ಕೆ ಈತ ತಲುಪಬಲ್ಲ ಎನಿಸುತ್ತದೆ" ಎಂದು ಹೇಳಿದ್ದಾರೆ.

ಅಭ್ಯಾಸ ಪಂದ್ಯದ ಎರಡನೇ ದಿನದಾಟದ ಅಂತಿಮ ಓವರ್​ನಲ್ಲಿ ಅಬ್ಬರಿಸಿದ್ದ ಪಂತ್, 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 22 ರನ್​​ ಸಿಡಿಸಿ ಶತಕದ ಗಡಿ ಮುಟ್ಟಿದ್ದರು.

ABOUT THE AUTHOR

...view details