ನವದೆಹಲಿ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ರೋಹಿತ್ ಶರ್ಮಾ 33ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿದ್ದು, ಅಭಿಮಾನಿಗಳು, ಕ್ರಿಕೆಟರ್ಸ್ ವಿಶ್ ಮಾಡ್ತಿದ್ದಾರೆ.
ಟೀಂ ಇಂಡಿಯಾದ ಮತ್ತೋರ್ವ ಆಟಗಾರ ಮಯಾಂಕ್ ಅಗರವಾಲ್ ಕೂಡ ರೋಹಿತ್ ಶರ್ಮಾ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದು, ಟೆಸ್ಟ್ ಕ್ರಿಕೆಟ್ನಲ್ಲಿ ನಾನು ಚೊಚ್ಚಲ ಶತಕ ಸಿಡಿಸಲು ಅವರ ನೀಡಿದ ಸಲಹೆ ಮುಖ್ಯ ಕಾರಣ ಎಂದಿದ್ದಾರೆ.
2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಅಗರವಾಲ್ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಮಿಂಚಿದ್ದರು. ಈ ವೇಳೆ, ರೋಹಿತ್ ಶರ್ಮಾ ಹಾಗೂ ಮಯಾಂಕ್ ಅಗರವಾಲ್ ಮೈದಾನದಲ್ಲಿದ್ದರು. ಇದೇ ಫೋಟೋ ಟ್ವೀಟ್ ಮಾಡಿರುವ ಮಯಾಂಕ್, ರೋಹಿತ್ ಶರ್ಮಾ ಜತೆ ವಿಶೇಷ ಸಮಯ ಇದಾಗಿದ್ದು, ಮೊದಲ ಶತಕ ಸಿಡಿಸಲು ಅವರೇ ಮುಖ್ಯ ಕಾರಣವಾಗಿದ್ದು, ಹ್ಯಾಪಿ ಬರ್ತಡೇ ರೋಹಿತ್ ಎಂದು ಬರೆದುಕೊಂಡಿದ್ದಾರೆ.
2019ರ ಏಕದಿನ ವಿಶ್ವಕಪ್ನಲ್ಲಿ ಮಿಂಚಿದ್ದ ರೋಹಿತ್ ಶರ್ಮಾ ಟೂರ್ನಿಯಲ್ಲಿ ಅತಿ ಹೆಚ್ಚು ರನ್ (648) ಗಳಿಕೆ ಮಾಡಿದ್ದರು. ಜತೆಗೆ ಒಂದೇ ಟೂರ್ನಿಯಲ್ಲಿ ಐದು ಶತಕ ಸಿಡಿಸಿರುವ ಮೊದಲ ಬ್ಯಾಟ್ಸಮನ್ ಎಂಬ ಹಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟೀಂ ಇಂಡಿಯಾದ ಉಪನಾಯಕನಾಗಿರುವ ಹಿಟ್ಮ್ಯಾನ್ 224 ಏಕದಿನ, 108 ಟಿ-20 ಹಾಗೂ 32 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಮೂರು ಮಾದರಿ ಕ್ರಿಕೆಟ್ನಿಂದ 14,029 ರನ್ಗಳಿಕೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧ ಸಿಡಿಸಿರುವ 264 ರನ್ ಏಕದಿನದಲ್ಲಿನ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಆಗಿದೆ.