ನವದೆಹಲಿ:3 ಟೆಸ್ಟ್ ಪಂದ್ಯಗಳ ಸರಣಿಗಾಗಿ ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ತಂಡದ ಆಟಗಾರ ಡೀನ್ ಎಲ್ಗರ್ ಯಡವಟ್ಟು ಮಾಡಿಕೊಂಡಿದ್ದು, ಭಾರತೀಯರಿಂದ ಸಖತ್ ಟ್ರೋಲ್ಗೆ ಗುರಿಯಾಗಿದ್ದಾರೆ.
ಭಾರತ ಪ್ರವಾಸದ ಬಗ್ಗೆ ಮಾತನಾಡಿರುವ ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಆಟಗಾರ ಡೀನ್ ಎಲ್ಗರ್, ಇದು ಸವಾಲಿನ ಪ್ರವಾಸವಾಗಿದೆ. ಉತ್ತಮವಾದ ಹೋಟೆಲ್‌ಗಳಿರದ ಸಣ್ಣ ಸ್ಥಳಗಳಿಗೆ ಬಂದಾಗ ನೀವು ನಿಮ್ಮನ್ನು ಸಾಕಷ್ಟು ತಿಳಿದುಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ. ಎಂದು ಭಾರತದ ಆಹಾರ ಮತ್ತು ಹೋಟೆಲ್ಗಳ ಬಗ್ಗೆ ಮಾತನಾಡಿದ್ದಾರೆ.
ಡೀನ್ ಎಲ್ಗರ್ ಅವರ ಈ ಮಾತುಗಳು ಭಾರತೀಯರನ್ನ ಕೆಣಕಿಸಿದ್ದು, ಟ್ವಿಟ್ಟರ್ನಲ್ಲಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಸಿಸಿಐ ಮತ್ತು ಸೌರವ್ ಗಂಗೂಲಿ ಅವರನ್ನ ಟ್ಯಾಗ್ ಮಾಡುತ್ತಾ, ದಕ್ಷಿಣ ಆಫ್ರಿಕಾ ತಂಡದ ಆಟಗಾರರಿಗೆ ಉತ್ತಮವಾದ ಆಹಾರ ನೀಡಿ. ಸರಿಯಾದ ಆಹಾರ ಇಲ್ಲದೇ ಅವರು ಉತ್ತಮ ಪ್ರದರ್ಶನ ತೋರಲು ಆಗುತ್ತಿಲ್ಲ ಎಂದಿದ್ದಾರೆ.
ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದು, ತುಂಬಾ ನೀರಿನ ಕೊರತೆಯಿಂದಾಗಿ ದಕ್ಷಿಣ ಆಫ್ರಿಕಾದ ಕೇಪ್ಟೌನ್ನಲ್ಲಿರುವ ಹೋಟೆಲ್ ಭಾರತೀಯ ಆಟಗಾರರಿಗೆ ಸ್ನಾನ ಮಾಡಲು ಕೇವಲ 2 ನಿಮಿಷಗಳ ಸಮಯ ನೀಡಿತ್ತು. ಇದನ್ನ ಯಾರಾದರೂ ಎಲ್ಗರ್ ಗಮನಕ್ಕೆ ತನ್ನಿ ಎಂದಿದ್ದಾರೆ.
ಭಾರತೀಯ ಆಹಾರದ ಬಗ್ಗೆ ಕಮೆಂಟ್ ಮಾಡಿದ್ದಕ್ಕೆ ವ್ಯಕ್ತಿಯೋರ್ವ ಎಲ್ಗರ್ ಕಾಲೆಳೆದಿದ್ದು, ಈ ವ್ಯಕ್ತಿಗೆ ಅಳೋದಕ್ಕೆ ಒಂದು ಉತ್ತಮವಾದ ಹಾಸಿಗೆ ಕೊಡಿಸಿ ಎಂದಿದ್ದಾನೆ.