ನವದೆಹಲಿ :ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಪಠಾಣ್ ಹೆಸರು ನೋಂದಾಯಿಸಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿರುವ ಬೆನ್ನಲ್ಲೇ ತಾವು ಯಾವುದೇ ಟಿ20 ಲೀಗ್ನಲ್ಲಿ ಭಾಗವಹಿಸುತ್ತೇನೆ ಎಂದು ಈವರೆಗೂ ಖಚಿತಪಡಿಸಿಲ್ಲ ಎಂದು ಭಾರತ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
ಇದೇ ತಿಂಗಳ 28ರಿಂದ ಆರಂಭವಾಗಲಿರುವ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಭಾರತ ತಂಡದ ಮಾಜಿ ಆಟಗಾರ ಪಠಾಣ್ ಆಡಲಿದ್ದಾರೆ. ಎಸ್ಎಲ್ಸಿಯ ಅಗ್ರ 70 ವಿದೇಶಿ ಆಟಗಾರರ ಲಿಸ್ಟ್ನಲ್ಲಿ ಪಠಾಣ್ ಹೆಸರಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ ವರದಿಯಲ್ಲಿ ಹಿರಿಯ ವೇಗಿ ಬಿಸಿಸಿಐನಿಂದಲೂ ಅನುಮತಿಪಡೆದಿದ್ದಾರೆ. ಒಂದು ಪ್ರಾಂಚೈಸಿ ಪಠಾಣ್‌ರನ್ನು ಕೊಳ್ಳಲು ಈಗಾಗಲೇ ಸಿದ್ಧವಾಗಿದೆ ಎಂದು ತಿಳಿದು ಬಂದಿತ್ತು.