ಕರ್ನಾಟಕ

karnataka

ETV Bharat / sports

ಮುಂಬೈ ವಿರುದ್ಧ 10 ವಿಕೆಟ್​ಗಳ ಹೀನಾಯ ಸೋಲು: 'ನೋವಿನಲ್ಲೂ ನಗುತಾ ಇರಿ' ಎಂದ ಎಂಎಸ್​ ಧೋನಿ - ನೋವಿನಲ್ಲೂ ನಗುತಾ ಇರಿ ಎಂದ ಧೋನಿ

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಚೆನ್ನೈ ವಿರುದ್ಧ ಮುಂಬೈ ಇಂಡಿಯನ್ಸ್​ ತಂಡ 10 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು. ಇದರ ಜತೆಗೆ ಸೋಲು ಕಂಡಿರುವ ಚೆನ್ನೈ ತಂಡ ನಾಕ್​ಔಟ್​ ರೇಸ್​​ನಿಂದ ಹೊರಬಿದ್ದಿದೆ.

MS Dhoni
ಎಂಎಸ್​ ಧೋನಿ

By

Published : Oct 24, 2020, 6:09 AM IST

ಶಾರ್ಜಾ: 'ನೀವು ನೋವು ಅನುಭವಿಸುತ್ತಿದ್ದಾಗಲೂ ಸಹ ನಿಮ್ಮ ಮುಖದ ಮೇಲೆ ಸಣ್ಣ ನಗು ಇರಲಿ. ಇದರಿಂದ ಭಯಭೀತರಾಗಿರುವಂತೆ ಎದುರಿನವರಿಗೆ ಕಾಣುವುದಿಲ್ಲ' ಎಂದು ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ಚೆನ್ನೈ ಸೂಪರ್​ ಕಿಂಗ್ಸ್ ನಾಯಕ ಎಂಎಸ್​ ಧೋನಿ ಹೇಳಿದರು.

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಚೆನ್ನೈ ವಿರುದ್ಧ ಮುಂಬೈ ಇಂಡಿಯನ್ಸ್​ ತಂಡ 10 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು. ಇತ್ತ ಸೋಲು ಕಂಡ ಚೆನ್ನೈ ತಂಡ ನಾಕ್​ಔಟ್​ ರೇಸ್​​ನಿಂದ ಹೊರಬಿದ್ದಿದೆ. ಚೆನ್ನೈ ಸೂಪರ್​ ಕಿಂಗ್ಸ್​ ನೀಡಿದ್ದ 115 ರನ್​ಗಳ ಟಾರ್ಗೆಟ್​ ಬೆನ್ನತ್ತಿದ್ದ ಮುಂಬೈ, ವಿಕೆಟ್​ ನಷ್ಟವಿಲ್ಲದೆ ಕೇವಲ 12.2 ಓವರ್​​ಗಳಲ್ಲಿ 116ರನ್​ಗಳಿಸಿ ಗೆಲುವಿನ ನಗೆ ಬೀರಿತು.

ಪಂದ್ಯದ ಬಳಿಕದ ಅವಾರ್ಡ್​ ವಿತರಣೆ ವೇಳೆ ಮಾತನಾಡಿದ ಮಾಹಿ, 'ಯುವಕರಿಗೆ ಏನು ಬೇಕಿತ್ತು ಅದನ್ನು ಮಾಡಿದ್ದಾರೆಂದು ನಾನು ಭಾವಿಸುತ್ತೇನೆ. ನಾವು ಡ್ರೆಸ್ಸಿಂಗ್ ಕೋಣೆಯನ್ನು ಹಾಗೆ ಇಟ್ಟುಕೊಂಡಿದ್ದೇವೆ. ಮುಂದಿನ ಮೂರು ಪಂದ್ಯಗಳಲ್ಲಿ ಕನಿಷ್ಠ ಹೆಮ್ಮೆಪಡುವಂತೆ ನಾವು ಪ್ರದರ್ಶನ ನೀಡುವುದರತ್ತ ಗಮನಹರಿಸುತ್ತೇವೆ' ಎಂದು ಹೇಳಿದರು.

ನಾವು ಉತ್ತಮ ಆರಂಭ ಪಡೆದಾಗಲೂ ಮಧ್ಯಮ ಕ್ರಮಾಂಕದಲ್ಲಿ ಕಷ್ಟವಾಗುತ್ತಲೇ ಇತ್ತು. ಕ್ರಿಕೆಟ್‌ನಲ್ಲಿ ಕಠಿಣ ಹಂತದ ಮೂಲಕ ಸಾಗುತ್ತಿರುವಾಗ, ಹಾದಿಯಲ್ಲಿ ಸಾಗಲು ನಮಗೆ ಸ್ವಲ್ಪ ಅದೃಷ್ಟವೂ ಬೇಕು. ಆದರೆ, ಈ ಪಂದ್ಯಾವಳಿಯಲ್ಲಿ ಅದು ನಿಜವಾಗಿಯೂ ನಮ್ಮ ದಾರಿಯಲ್ಲಿ ಇರಲಿಲ್ಲ ಎಂದು ಧೋನಿ ಹೇಳಿದರು.

ನೀವು ಉತ್ತಮವಾಗಿ ಆಡದೆ ಇರುವುದಕ್ಕೆ ನೂರು ಕಾರಣಗಳು ಇರಬಹುದು. ನಿಮ್ಮ ಸಾಮರ್ಥ್ಯಕ್ಕೆ ನೀವು ಆಡುತ್ತೀರಾ ಎಂಬುದನ್ನು ನೀವೇ ಕೇಳಿಕೊಳ್ಳುವುದು ಮುಖ್ಯವಾದ ಸಂಗತಿ ಎಂದರು.

ABOUT THE AUTHOR

...view details