ಬ್ರಿಸ್ಬೇನ್: ಆಸ್ಟ್ರೇಲಿಯಾದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರು ನಾಯಕ ಟಿಮ್ ಪೇನ್ ಬಗ್ಗೆ ಸಂಪೂರ್ಣ ನಂಬಿಕೆ ಹೊಂದಿದ್ದು, ಭಾರತ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದ ಅಂತಿಮ ದಿನದಂದು ಅವರ ವರ್ತನೆಗೆ ತೋರುತ್ತಿರುವ ಆಕ್ರೋಶವನ್ನು ಜನರು ಕಡಿಮೆ ಮಾಡಬೇಕು ಎಂದಿದ್ದಾರೆ.
ತಂಡದ ನಾಯಕನಾಗಿ ಪೇನ್, ಸ್ಟಂಪ್ ಹಿಂದೆ ತೋರಿದ ವರ್ತನೆಗಾಗಿ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಅಂಪೈರ್ ನಿರ್ಧಾರದಲ್ಲಿ ಭಿನ್ನಾಭಿಪ್ರಾಯ ತೋರಿಸಿದ್ದಕ್ಕಾಗಿ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್ ಅವರಿಗೆ ಪಂದ್ಯದ ಶುಲ್ಕದ ಶೇಕಡಾ 15 ರಷ್ಟು ದಂಡ ವಿಧಿಸಲಾಗಿತ್ತು.
ಹನುಮ ವಿಹಾರಿ ಅವರೊಂದಿಗೆ ಪಂದ್ಯ ಉಳಿಸುವ ಸಹಭಾಗಿತ್ವದಲ್ಲಿ ಭಾಗಿಯಾಗಿದ್ದ ರವಿಚಂದ್ರನ್ ಅಶ್ವಿನ್ ಅವರನ್ನು ಸ್ಲೆಡ್ಜ್ ಮಾಡಲು ಟಿಮ್ ಪೇನ್ ಪ್ರಯತ್ನಿಸುತ್ತಿದ್ದರು. ಆದರೆ, ಅಶ್ವಿನ್ ಅವರನ್ನು ಪ್ರಚೋದಿಸುವಲ್ಲಿ ಪೇನ್ ಯಶಸ್ವಿಯಾಗಲಿಲ್ಲ. ಆದರೆ, ಮೂರು ನಿರ್ಣಾಯಕ ಕ್ಯಾಚ್‌ಗಳನ್ನು ಕೈಬಿಟ್ಟು ತಮ್ಮ ತಂಡಕ್ಕೆ ದುಬಾರಿಯಾದರು.
ಟಿಮ್ ಪೇನ್, ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ "ಟಿಮ್ ಪೇನ್ ಮೇಲೆ ನನಗೆ ಎಷ್ಟು ನಂಬಿಕೆ ಇದೆ ಎಂದು ನಿಮಗೆ ತಿಳಿದಿಲ್ಲ. ನಿಸ್ಸಂದೇಹವಾಗಿ ಅದು ಅವರ ಅತ್ಯುತ್ತಮ ದಿನವಾಗಿರಲಿಲ್ಲ. ಆಸ್ಟ್ರೇಲಿಯಾದ ನಾಯಕನಾಗಿ ಅತ್ಯುತ್ತಮ ಕಾಣಿಕೆ ನೀಡಿದ್ದಾರೆ. ಆದರೆ ಕಳೆದ ಪಂದ್ಯದ ಅಂತಿಮ ದಿನ ನಿರಾಶದಾಯಕ ಪ್ರದರ್ಶನ ತೋರಿದ್ರು"ಎಂದು ಲ್ಯಾಂಗರ್ ವರ್ಚುವಲ್ ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದಾರೆ.
ಅವರ ಮೇಲಿನ ಆಕ್ರೋಶವನ್ನು ಕಡಿಮೆಗೊಳಿಸಬೇಕಿದೆ. ಒಬ್ಬ ಉತ್ತಮ ಆಟಗಾರ ಕಳಪೆ ಪ್ರದರ್ಶನ ತೋರಿದ್ರೆ, ಟೀಕಿಸುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅದರೆ ಹಾಗೆ ಮಾಡಬಾರದು. ಟಿಮ್ ಪೇನ್ ಮಹೋನ್ನತ ನಾಯಕ, ಇನ್ನೂ ಸ್ವಲ್ಪ ಸಮಯದವರೆಗೆ ಮುಂದುವರಿಯುತ್ತಾರೆ. ಅವರಿಗೆ 100 ರಷ್ಟು ಬೆಂಬಲವಿದೆ" ಎಂದು ಹೇಳಿದ್ದಾರೆ.
ಮೂರನೇ ಟೆಸ್ಟ್ ಪಂದ್ಯದ ಐದನೇ ದಿನದಂದು ಫೀಲ್ಡಿಂಗ್ ಮಾಡುತ್ತಿದ್ದ ಸ್ಟೀವ್ ಸ್ಮಿತ್ ಬ್ಯಾಟ್ಸ್ಮನ್ ಗಾರ್ಡ್ ಅಳಿಸಿದ್ದ ಘಟನೆ ಬಗ್ಗೆ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಲ್ಯಾಂಗರ್, ಸ್ಟೀವ್ ಸ್ಮಿತ್ ಬಗ್ಗೆ ಓದಿದ ಕೆಲವು ಕಳಪೆ ಬರಹಗಳನ್ನು ನಂಬಲು ಸಾಧ್ಯವಿಲ್ಲ. ಸ್ಟೀವ್ ಸ್ಮಿತ್‌ನನ್ನು ಯಾರಾದರೂ ತಿಳಿದಿದ್ದರೆ, ಅವನು ಸ್ವಲ್ಪ ಚಮತ್ಕಾರಿ ಕೆಲವು ವಿಲಕ್ಷಣವಾದ ಕೆಲಸಗಳನ್ನು ಮಾಡುತ್ತಾರೆ. ನಾವೆಲ್ಲರೂ ಆ ಬಗ್ಗೆ ನಗುತ್ತೇವೆ. ಇದನ್ನೇ ಅವರು ಕ್ರೀಸ್ನಲ್ಲಿ ಮಾಡಿದ್ದು, ಹೆಚ್ಚಿನ ಆಟಗಳಲ್ಲಿ ಹೀಗೇ ಮಾಡುತ್ತಿರುತ್ತಾರೆ ಎಂದಿದ್ದಾರೆ.