ಕರ್ನಾಟಕ

karnataka

ETV Bharat / sports

ಹ್ಯಾಟ್ರಿಕ್​ ವಿಕೆಟ್​ ಪಡೆದು ತಂಡಕ್ಕೆ ಗೆಲುವು ತಂದಿಟ್ಟ ಕರ್ರನ್​... ಪಂಜಾಬ್​ ಒಡತಿ ಪ್ರೀತಿ ಜತೆ ಭಾಂಗ್ರಾ ಡ್ಯಾನ್ಸ್​! - ಮೊಹಾಲಿ

ಪಂಜಾಬ್​ನ ಬಿಂದ್ರಾ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್​ ಹಾಗೂ ಪಂಜಾಬ್​ ತಂಡಗಳ ನಡುವಿನ ಪಂದ್ಯ ಯಾರೂ ಉಹೇ ಮಾಡದ ರೀತಿಯಲ್ಲಿ ತಿರುವು ಪಡೆದುಕೊಂಡಿತು.

ಬಾಂಗ್ರಾ ಡ್ಯಾನ್ಸ್​

By

Published : Apr 2, 2019, 4:46 PM IST

ಮೊಹಾಲಿ:ಸೋಲುವ ಭೀತಿಯಲ್ಲಿದ್ದ ಪಂಜಾಬ್​ ತಂಡಕ್ಕೆ ನಿನ್ನೆ ಆಸರೆಯಾಗಿದ್ದು ಸ್ಯಾಮ್​ ಕರ್ರನ್​. ಕೊನೆ 4 ಓವರ್​ಗಳಲ್ಲಿ ಡೆಲ್ಲಿ ತಂಡದ ಗೆಲುವಿಗೆ 22ರನ್​ಗಳ ಅವಶ್ಯಕತೆ ಇದ್ದಾಗ ಬೌಲಿಂಗ್​ ಮಾಡಲು ಕಣಕ್ಕಿಳಿದ ಕರ್ರನ್​ ತಂಡಕ್ಕೆ ಮಹತ್ವದ ತಿರುವು ನೀಡಿದರು.

ಪಂಜಾಬ್​ನ ಬಿಂದ್ರಾ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ​ ಹಾಗೂ ಪಂಜಾಬ್​ ತಂಡಗಳ ನಡುವಿನ ಪಂದ್ಯ ಯಾರೂ ಉಹೇ ಮಾಡದ ರೀತಿಯಲ್ಲಿ ತಿರುವು ಪಡೆದುಕೊಂಡಿತು. ಸುಲಭ ಗೆಲುವಿನ ಸಂಭ್ರಮದಲ್ಲಿದ್ದ ಶ್ರೇಯಸ್​ ಅಯ್ಯರ್​ ಪಡೆಗೆ ಕೊನೆಯಲ್ಲಿ ವಿಲನ್​ ಆಗಿದ್ದು ಪಂಜಾಬ್​ ತಂಡದ ಆಲ್​ರೌಂಡರ್​ ಸ್ಯಾಮ್​ ಕರ್ರನ್​. ತಾವೂ ಎಸೆದ 2.2 ಓವರ್​​ನಲ್ಲಿ ಕೇವಲ 11ರನ್​ ನೀಡಿ ಹ್ಯಾಟ್ರಿಕ್​ ವಿಕೆಟ್​ ಸೇರಿ 4ವಿಕೆಟ್​ ಪಡೆದುಕೊಂಡರು. ಹೀಗಾಗಿ ತಂಡ 14ರನ್​ಗಳ ಗೆಲುವು ಕಾಣುವಂತಾಯಿತು. ಇದರ ಜತೆಗೆ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕರ್ರನ್​ ಮೊದಲ ಹ್ಯಾಟ್ರಿಕ್​ ಪಡೆದು ಮಿಂಚಿದರು.

ಇನ್ನು ತಂಡ ರೋಚಕ ಗೆಲುವು ದಾಖಲು ಮಾಡುತ್ತಿದ್ದಂತೆ ಪಂದ್ಯದ ಹೀರೋ ಸ್ಯಾಮ್​ ಕರ್ರನ್​ ಜತೆ ಪಂಜಾಬ್​ ತಂಡದ ಒಡತಿ ಪ್ರೀತಿ ಜಿಂಟಾ ಬಾಂಗ್ರಾ ಡ್ಯಾನ್ಸ್​ ಮಾಡಿ ಸಂಭ್ರಮಿಸಿದ್ದಾರೆ. ಅದರ ವಿಡಿಯೋ ಇದೀಗ ಐಪಿಎಲ್​ ಟ್ವಿಟರ್​​ನಲ್ಲಿ ಶೇರ್​ ಆಗಿದೆ.

ABOUT THE AUTHOR

...view details