ಮುಂಬೈ:ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಸದ್ಯ ವಿಶ್ವಕಪ್ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿ, ಎಲ್ಲರ ಮನಗೆಲ್ಲುತ್ತಿದ್ದಾರೆ. ಇದರ ಮಧ್ಯೆ ಅವರ ಪತ್ನಿ ಗಂಡನ ವಿರುದ್ಧ ಸಮರ ಮುಂದುವರಿಸಿದ್ದಾರೆ.
ಗಂಡನ ವಿರುದ್ಧ ನಿಲ್ಲದ ಸಮರ... ಶಮಿ ವಿರುದ್ಧ ಫೇಸ್ಬುಕ್ನಲ್ಲಿ ವಾಗ್ದಾಳಿ ನಡೆಸಿದ ಜಹಾನ್!
ವಿಶ್ವಕಪ್ನಲ್ಲಿ ಮಿಂಚುತ್ತಿರುವ ವೇಗಿ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನಾ ಜಹಾನ್ ಸಮರ ಮುಂದುವರೆಸಿದ್ದಾರೆ.
ಸದ್ಯ ಮೊಹಮ್ಮದ್ ಶಮಿ ಟಿಕ್ಟಾಕ್ ಆ್ಯಪ್ನಲ್ಲಿ ಅಕೌಂಟ್ ಓಪನ್ ಮಾಡಿದ್ದು, ಅದರಲ್ಲಿ 97 ಜನರನ್ನ ಫಾಲೋ ಮಾಡುತ್ತಿದ್ದಾರೆ. ಇದು ಹಸಿನ್ ಜಹಾನ್ ಆಕ್ರೋಶಕ್ಕೆ ಕಾರಣವಾಗಿದ್ದು, ಶಮಿ ಫಾಲೋ ಮಾಡುತ್ತಿರುವ ಅಕೌಂಟ್ಗಳಲ್ಲಿ 90 ಖಾತೆ ಹುಡುಗಿಯರದ್ದಾಗಿದೆ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಒಂದು ಹೆಣ್ಣು ಮಗುವಿನ ತಂದೆಯಾಗಿ ಶಮಿ ಈ ರೀತಿಯ ವರ್ತನೆ ಸರಿಯಲ್ಲ ಎಂದು ಬರೆದುಕೊಂಡಿರುವ ಶಮಿ ಪತ್ನಿ, ಕೆಲವೊಂದು ಫೋಟೋ ಶೇರ್ ಮಾಡಿದ್ದಾರೆ. ಈ ಹಿಂದೆ ಕೂಡ ಗಂಡನ ವಿರುದ್ಧ ವಾಗ್ದಾಳಿ ನಡೆಸಿದ್ದ ಜಹಾನ್, ವರದಕ್ಷಿಣೆ ಕಿರುಕುಳ ಹಾಗೂ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆಂದು ದೂರು ನೀಡಿದ್ದಳು.