ಅಬುದಾಬಿ:ಆಫ್ಘಾನಿಸ್ತಾನದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹಶ್ಮತುಲ್ಲಾ ಶಾಹಿದ್ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ದ್ವಿಶತಕ ಸಿಡಿಸಿದ್ದು, ಈ ಮೂಲಕ ಈ ದಾಖಲೆ ನಿರ್ಮಾಣ ಮಾಡಿರುವ ಅಲ್ಲಿನ ಮೊದಲ ಕ್ರಿಕೆಟ್ ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ.
ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣಗೊಂಡಿದ್ದು, ಮೊದಲ ಇನ್ನಿಂಗ್ಸ್ನಲ್ಲಿ 443 ಎಸೆತ ಎದುರಿಸಿರುವ ಶಾಹಿದಿ 21 ಬೌಂಡರಿ, 1 ಸಿಕ್ಸರ್ ಸೇರಿ ಅಜೇಯ 200ರನ್ಗಳಿಕೆ ಮಾಡಿದ್ದಾರೆ. ಇವರಿಗೆ ಸಾಥ್ ನೀಡಿದ ಕ್ಯಾಪ್ಟನ್ ಆಸ್ಗರ್ ಆಫ್ಘಾನ್ 164ರನ್ ಬಾರಿಸಿದ್ದಾರೆ.