ಕರ್ನಾಟಕ

karnataka

ETV Bharat / sports

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್​​​ ನಿವೃತ್ತಿ ಘೋಷಿಸಿದ ಹಾಶಿಮ್​ ಆಮ್ಲಾ! - ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಹಾಸಿಮ್​ ಆಮ್ಲ

ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್​ಮನ್​ ಹಾಸಿಮ್​ ಆಮ್ಲಾ ಎಲ್ಲ ಮಾದರಿಯ ಕ್ರಿಕೆಟ್​ಗೆ ದಿಢೀರ್​​​ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

Hashim Amla

By

Published : Aug 8, 2019, 8:43 PM IST

Updated : Aug 8, 2019, 10:11 PM IST

ಕೇಪ್​ಟೌನ್​: ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್​ಮನ್​ ಹಾಸಿಮ್​ ಆಮ್ಲಾ ಎಲ್ಲಾ ಮಾದರಿಯ ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಿಸಿದ್ದಾರೆ.

15 ವರ್ಷಗಳ ಕಾಲ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದ ಆಮ್ಲಾ 124 ಟೆಸ್ಟ್​,181 ಏಕದಿನ ಪಂದ್ಯ ಹಾಗೂ 44 ಟಿ20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್​ನಲ್ಲಿ 28 ಶತಕ,4 ದ್ವಿಶತ, 41 ಅರ್ಧಶತಕ ಸಹಿತ 9282 ರನ್, ಏಕದಿನ ಕ್ರಿಕೆಟ್​ನಲ್ಲಿ 27 ಶತಕ, 39 ಅರ್ಧಶತಕ ಸಹಿತ 8113 ರನ್​ಗಳಿಸಿದ್ದರೆ, ಟಿ20 ಕ್ರಿಕೆಟ್​ನಲ್ಲಿ 8 ಅರ್ಧಶತಕದ ಸಹಿತ 577 ರನ್​ಗಳಿಸಿದ್ದಾರೆ.

36 ವರ್ಷದ ಆಮ್ಲಾ 2004 ನವೆಂಬರ್​ 28 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಆಮ್ಲ ಏಕದಿನ ಕ್ರಿಕೆಟ್​ನಲ್ಲಿ 2000,3000,4000,5000,6000,7000 ರನ್​ಗಳನ್ನು ವೇಗವಾಗಿ ತಲುಪಿದ ದಾಖಲೆ ಹೊಂದಿದ್ದಾರೆ.

ನನ್ನ ಈ 15 ವರ್ಷಗಳ ಜರ್ನಿಯಲ್ಲಿ ತುಂಬಾ ಪಾಠ ಕಲಿತಿದ್ದೇನೆ. ಹಲವಾರು ಸ್ನೇಹಿತರನ್ನು ಗಳಿಸಿಕೊಂಡಿದ್ದೇನೆ. ಕ್ರಿಕೆಟ್​ ಜೀವನದಲ್ಲಿ ನನ್ನನ್ನು ಪ್ರೋತ್ಸಾಹಿಸಿದ, ನನಗಾಗಿ ಸದಾ ಪ್ರಾರ್ಥಿಸುತ್ತಿದ್ದ ನನ್ನ ಪೋಷಕರಿಗೆ ಧನ್ಯವಾದ ಹೇಳುವ ಇಚ್ಛಿಸುತ್ತೇನೆ. ಅವರ ನೆರಳಿನಲ್ಲೇ ನಾನು ದಕ್ಷಿಣ ಆಫ್ರಿಕಾ ತಂಡದ ಪರ ಇಷ್ಟು ವರ್ಷಗಳ ಕಾಲ ಕ್ರಿಕೆಟ್​ ಆಡಲು ಸಾಧ್ಯವಾಗಿದೆ ಎಂದು ಆಮ್ಲಾ ತಿಳಿಸಿದ್ದಾರೆ.

ಇಷ್ಟು ವರ್ಷ ನನ್ನ ಕ್ರಿಕೆಟ್​ ಜೀವನಕ್ಕೆ ನೆರವಾಗಿದ್ದ ನನ್ನ ಕುಟುಂಬ, ಸ್ನೇಹಿತರು, ತಂಡದ ನನ್ನ ಜೊತೆಗಾರರು ಹಾಗೂ ಎಲ್ಲಾ ತಂಡದ ಇತರೆ ಸಿಬ್ಬಂದಿಗಳಿಗೂ ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ. ನನ್ನ ಸಂಕಷ್ಟ ಪರಿಸ್ಥಿತಿಯಲ್ಲೂ ನನ್ನನ್ನು ಬೆಂಬಲಿಸಿ, ಪ್ರೋತ್ಸಾಹಿಸಿ, ನನ್ನ ಯಶಸ್ಸನ್ನು ಸಂಭ್ರಮಿಸಿದ ಎಲ್ಲಾ ನನ್ನ ಅಭಿಮಾನಿಗಳಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಆಮ್ಲಾ ಭಾವನಾತ್ಮಕ ಮಾತುಗಳನ್ನಾಡಿದ್ದಾರೆ.

Last Updated : Aug 8, 2019, 10:11 PM IST

ABOUT THE AUTHOR

...view details