ಚೆನ್ನೈ: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ಉದ್ಘಾಟನಾ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ಸ್ಮರಣಿಯ ದಾಖಲೆ ನಿರ್ಮಾಣ ಮಾಡಿದ್ದಾರೆ.
ಚೆನ್ನೈನ ಚಿದಂಬರಂ ಮೈದಾನದಲ್ಲಿ ಆರ್ಸಿಬಿ - ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ಆರಂಭಗೊಳ್ಳುವ ಮೂಲಕ ಪ್ರಸಕ್ತ ಸಾಲಿನ ಐಪಿಎಲ್ ಆರಂಭಗೊಂಡಿದ್ದು, ಈ ಪಂದ್ಯದಲ್ಲಿ ಬೆಂಗಳೂರು ತಂಡದ ಬೌಲರ್ ಮಹತ್ವದ ದಾಖಲೆ ನಿರ್ಮಾಣ ಮಾಡಿ, ಸ್ಮರಣಿಯವಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಟ್ರಾಫಿಕ್ ವೇಳೆ ಉಗ್ರರೂಪ ತಾಳಿದ 'ದಿ ವಾಲ್' ದ್ರಾವಿಡ್.. ರಾಹುಲ್ ಕೋಪಕ್ಕೆ ವಿರಾಟ್ ತಂಡಾ!
ಇಂದಿನ ಪಂದ್ಯದಲ್ಲಿ ಆಕರ್ಷಕ ಬೌಲಿಂಗ್ ಪ್ರದರ್ಶನ ನೀಡಿದ ಹರ್ಷಲ್, ಇಶಾನ್ ಕಿಶನ್(25), ಹಾರ್ದಿಕ್ ಪಾಂಡ್ಯ(13) ಸೇರಿದಂತೆ ಕೃನಾಲ್ ಪಾಂಡ್ಯ, ಕಿರನ್ ಪೊಲಾರ್ಡ್ ಹಾಗೂ ಮೈಕ್ರೋ ಜಾನ್ಸನ್ ವಿಕೆಟ್ ಕಬಳಿಕೆ ಮಾಡಿದರು. ವಿಶೇಷ ಎಂದರೆ 20ನೇ ಓವರ್ನಲ್ಲಿ 3 ವಿಕೆಟ್ ಪಡೆದುಕೊಂಡ ಪಟೇಲ್, ಕೇವಲ 1ರನ್ ನೀಡಿದರು. ಇದರ ಜತೆಗೆ ಸ್ವಲ್ಪದರಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದುಕೊಳ್ಳುವ ಅವಕಾಶ ಮಿಸ್ ಮಾಡಿಕೊಂಡರು.
ಹರ್ಷಲ್ ಪಟೇಲ್ ಇಂದಿನ ಪಂದ್ಯದಲ್ಲಿ 4 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 27ರನ್ ನೀಡಿದ್ದು, ಇವರ ಜೀವನ ಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ. ಈ ಹಿಂದಿನ ಐಪಿಎಲ್ ಪಂದ್ಯಗಳಲ್ಲಿ ಬೌಲಿಂಗ್ ವೈಫಲ್ಯ ಅನುಭವಿಸುತ್ತಿದ್ದ ಆರ್ಸಿಬಿಗೆ ಇದೀಗ ಹರ್ಷಲ್ ಹೊಸ ಉತ್ಸಾಹ ತುಂಬಿದ್ದಾರೆ.