ಕರ್ನಾಟಕ

karnataka

ETV Bharat / sports

ಮಹಿಳಾ ಐಪಿಎಲ್​ನ 1ನೇ ಆವೃತ್ತಿ​ ಭಾರತದಲ್ಲಿ ನಡೆಯಬೇಕೆಂದು ಬಯಸುತ್ತೇನೆ: ಕೌರ್​

ಪುರುಷರ ಐಪಿಎಲ್​ ಆರಂಭವಾಗಿ ಈಗಾಗಲೆ 12 ವರ್ಷ ಕಳೆದಿದ್ದು, 13ನೇ ಆವೃತ್ತಿಗೂ ದಿನಗಣನೆ ಆರಂಭವಾಗಿದೆ. ಇದೀಗ ಮಹಿಳಾ ಕ್ರಿಕೆಟ್​ ಕೂಡ ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗ ಸೃಷ್ಟಿಸುತ್ತಿದ್ದು, ಮಹಿಳಾ ಐಪಿಎಲ್​ ಆಯೋಜನೆ ಸರಿಯಾದ ದಿಕ್ಕಿನಲ್ಲಿ ಮಹಿಳಾ ಕ್ರಿಕೆಟ್​ ಸಾಗುತ್ತಿದೆ ಎಂಬುದರ ಪ್ರತೀಕವಾಗಿದೆ ಎಂದು ಕೌರ್​ ಅಭಿಪ್ರಾಯ ಪಟ್ಟಿದ್ದಾರೆ.

ಹರ್ಮನ್​ ಪ್ರೀತ್​ ಕೌರ್​
ಹರ್ಮನ್​ ಪ್ರೀತ್​ ಕೌರ್​

By

Published : Aug 6, 2020, 2:18 PM IST

ನವದೆಹಲಿ: ಸರಿಯಾದ ಸಮಯದಲ್ಲಿ ಮಹಿಳಾ ಇಂಡಿಯನ್​ ಪ್ರೀಮಿಯರ್​ ಲೀಗ್​ ಭಾರತದಲ್ಲೇ ಆಯೋಜನೆಯಾಗಬೇಕು ಎಂದು ಬಯಸುತ್ತೇನೆ ಎಂದು ಟೀಮ್​ ಇಂಡಿಯಾ ಟಿ-20 ತಂಡದ ನಾಯಕಿ ಹರ್ಮನ್​ ಪ್ರೀತ್​ ಕೌರ್​ ತಿಳಿಸಿದ್ದಾರೆ.

ಪುರುಷರ ಐಪಿಎಲ್​ ಆರಂಭವಾಗಿ ಈಗಾಗಲೆ 12 ವರ್ಷ ಕಳೆದಿದ್ದು, 13ನೇ ಆವೃತ್ತಿಗೂ ದಿನಗಣನೆ ಆರಂಭವಾಗಿದೆ. ಇದೀಗ ಮಹಿಳಾ ಕ್ರಿಕೆಟ್​ ಕೂಡ ವಿಶ್ವದಾದ್ಯಂತ ಅಪಾರ ಅಭಿಮಾನಿ ಬಳಗ ಸೃಷ್ಟಿಸುತ್ತಿದ್ದು, ಮಹಿಳಾ ಐಪಿಎಲ್​ ಆಯೋಜನೆ ಸರಿಯಾದ ದಿಕ್ಕಿನಲ್ಲಿ ಮಹಿಳಾ ಕ್ರಿಕೆಟ್​ ಸಾಗುತ್ತಿದೆ ಎಂದು ಕೌರ್​ ಅಭಿಪ್ರಾಯ ಪಟ್ಟಿದ್ದಾರೆ.

ನಾವು ಮಹಿಳಾ ಐಪಿಎಲ್​ ಹೊಂದಲು ಖಂಡಿತವಾಗಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಸರಿಯಾದ ಸಮಯ ಕೂಡಿ ಬಂದಾಗ ಮೊದಲ ಆವೃತ್ತಿಯ ಐಪಿಎಲ್​ ಭಾರತಲ್ಲೇ ಆಯೋಜನೇಯಾಗಬೇಕೆಂದು ನಾನು ಬಯಸುತ್ತೇನೆ ಎಂದು ಕೌರ್​ ಮಂಚೂಣಿ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

2020ರ ಐಪಿಎಲ್​ ಯುಎಇನಲ್ಲಿ ಸೆಪ್ಟೆಂಬರ್​ 19ರಿಂದ ನವೆಂಬರ್​ 10ರವರೆಗೆ ಆಯೋಜನೆಯಾಗಲಿದೆ. ಎಂದಿನಂತೆ ಪುರುಷರ ಪ್ಲೇಆಫ್​ ವೇಳೆ ಮಹಿಳೆಯರ ಟಿ-20 ಚಾಲೆಂಜ್​ ಅನ್ನು ಕೂಡ ಬಿಸಿಸಿಐ ಆಯೋಜಿಸಲು ತೀರ್ಮಾನಿಸಿದೆ. ನವೆಂಬರ್​ 1ರಿಂದ ನವೆಂಬರ್​ 10ರೊಳಗೆ ಮಹಿಳಾ ಟಿ-20 ಚಾಲೆಂಜ್​ ನಡೆಯಲಿದೆ.

ಪ್ರಸ್ತುತ ಬಿಸಿಸಿಐ ಮಹಿಳಾ ಐಪಿಎಲ್​ ಬದಲಿಗೆ ಮಹಿಳಾ ಟಿ-20 ಚಾಲೆಂಜ್​ ಎಂಬ ಲೀಗ್​ ನಡೆಸುತ್ತಿದೆ. ಮೊದಲ ಆವೃತ್ತಿಯಲ್ಲಿ ಎರಡು ತಂಡಗಳು, ಎರಡನೇ ಆವೃತ್ತಿಯಲ್ಲಿ 3 ತಂಡಗಳು ಸ್ಪರ್ಧಿಸಿದ್ದವು. ಇದೀಗ ಮೂರನೇ ಆವೃತ್ತಿಯಲ್ಲಿ 3 ತಂಡಗಳು ಫೈನಲ್​ ಸೇರಿದಂತೆ 4 ಪಂದ್ಯಗಳನ್ನಾಡಲಿವೆ.

ABOUT THE AUTHOR

...view details