ಆಂಟಿಗುವಾ: ವೆಸ್ಟ್ ಇಂಡೀಸ್ ಹಾಗೂ ಭಾರತ ಮಹಿಳಾ ಕ್ರಿಕೆಟ್ ತಂಡದ ನಡುವಿನ ಪಂದ್ಯದಲ್ಲಿ ಭಾರತದ ವನಿತೆಯರು ಒಂಟಿ ರನ್ನಿಂದ ಸೋಲು ಕಂಡಿದ್ದಾರೆ. ಇದೇ ಪಂದ್ಯದಲ್ಲಿ ಭಾರತ ತಂಡದ ನಾಯಕಿಯ ಅದ್ಭುತ ಕ್ಯಾಚ್ ಎಲ್ಲರನ್ನು ನಿಬ್ಬೆರಗಾಗಿಸಿದೆ.
ಪುರುಷರ ಕ್ರಿಕೆಟ್ನಲ್ಲಿ ಸಾಮಾನ್ಯವಾಗಿ ಕಂಡುಬರುವ ರೀತಿಯ ಕ್ಯಾಚ್ ಪಡೆದು ಹರ್ಮನ್ಪ್ರೀತ್ ಕೌರ್ ಸಂಚಲನ ಮೂಡಿಸಿದ್ದಾಳೆ. 50 ಓವರ್ನ ಕೊನೆಯ ಎಸೆತದಲ್ಲಿ ಸ್ಟೆಫಾನಿ ಟೇಲರ್ ಮುನ್ನುಗ್ಗಿ ಬಾರಿಸಿದ ಚೆಂಡನ್ನು ಹರ್ಮನ್ಪ್ರೀತ್ ಬೌಂಡರಿ ಗೆರೆಯ ಸನಿಹದಲ್ಲಿ ಹಾರಿ ಒಂದು ಕೈಯಲ್ಲಿ ಕ್ಯಾಚ್ ಪಡೆದು ಎಲ್ಲರನ್ನು ಮಂತ್ರಮುಗ್ದಗೊಳಿಸಿದ್ದಾಳೆ.