ಕರ್ನಾಟಕ

karnataka

ETV Bharat / sports

ನ್ಯೂಜಿಲೆಂಡ್​​ ಟೆಸ್ಟ್​​ ಸರಣಿಯಿಂದ ಹೊರಬಿದ್ದ ಆಲ್​ರೌಂಡರ್​ ಹಾರ್ದಿಕ್​!

ಟೀಂ ಇಂಡಿಯಾದ ಸ್ಟಾರ್​ ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯ ಇದೀಗ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಿಂದಲೂ ಹೊರಬಿದ್ದಿದ್ದಾರೆ.

By

Published : Feb 1, 2020, 3:31 PM IST

Hardik ruled out of New Zealand Test series
Hardik ruled out of New Zealand Test series

ಮುಂಬೈ:ಬೆನ್ನು ನೋವಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಇದೀಗ ಚೇತರಿಕೆ ಕಾಣುತ್ತಿರುವ ಟೀಂ ಇಂಡಿಯಾ ಆಲ್​​ ರೌಂಡರ್​ ಹಾರ್ದಿಕ್​ ಪಾಂಡ್ಯ ಇದೀಗ ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಹೊರ ಬಿದ್ದಿದ್ದಾರೆ.

ಲಂಡನ್​​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಈ ಆಟಗಾರ ಇದೀಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಲಂಡನ್​ಗೆ ಪ್ರವಾಸ ಬೆಳೆಸಲಿರುವ ಪಾಂಡ್ಯ ಮತ್ತೊಮ್ಮೆ ವೈದ್ಯರಿಂದ ಸಲಹೆ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಹಾರ್ದಿಕ್ ಪಾಂಡ್ಯ ಮತ್ತು ಎನ್​ಸಿಎ ಮುಖ್ಯ ಫಿಸಿಯೋ ಆಶಿಷ್ ಕೌಶಿಕ್ ಜೊತೆ ಲಂಡನ್​ಗೆ ತೆರಳಲಿದ್ದು, ಅಲ್ಲಿ ಹಾರ್ದಿಕ್ ಪಾಂಡ್ಯ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯ ಜೇಮ್ಸ್ ಅಲಿಬೋನ್ ಅವರ ಬಳಿ ಸಲಹೆ ಪಡೆಯಲಿದ್ದಾರೆ. ಇದಾದ ಬಳಿಕ ಅವರು ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡುವ ಕುರಿತು ಚಿಂತನೆ ನಡೆಸಲಿದ್ದಾರೆ. ಹಾರ್ದಿಕ್​ ಪಾಂಡ್ಯ 2019ರ ಸಪ್ಟೆಂಬರ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಟಿ-20 ಪಂದ್ಯದಲ್ಲಿ ಕೊನೆಯದಾಗಿ ಆಡಿದ್ದರು.

ABOUT THE AUTHOR

...view details