ಕರ್ನಾಟಕ

karnataka

ಬಾಂಗ್ಲಾ ಸರಣಿಯಿಂದ್ಲೂ ಹಾರ್ದಿಕ್​ ಔಟ್; ಟಿ-20 ವಿಶ್ವಕಪ್​ವರೆಗೂ ಕ್ರಿಕೆಟ್​ ಆಡುವುದೇ ಡೌಟ್​!

By

Published : Oct 1, 2019, 7:33 PM IST

ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ, ಮುಂಬರುವ ಬಾಂಗ್ಲಾ ವಿರುದ್ಧದ ಟಿ-20 ಸರಣಿಯಿಂದಲೂ ಹೊರಗುಳಿಯಲು ನಿರ್ಧರಿಸಿದ್ದಾರೆ.

ಹಾರ್ದಿಕ್​ ಪಾಂಡ್ಯ

ಮುಂಬೈ: ಟೀಂ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಕಾರಣ, ಮುಂಬರುವ ಬಾಂಗ್ಲಾ ವಿರುದ್ಧದ ಟಿ20 ಸರಣಿಯಿಂದಲೂ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.

ಬೆನ್ನು ನೋವಿನ ಸಮಸ್ಯೆಯಿಂದಲೇ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಿಂದ ಪಾಂಡ್ಯ ಹೊರಗುಳಿದಿದ್ದು, ಚಿಕಿತ್ಸೆಗಾಗಿ ಯುನೈಟೆಡ್​ ಕಿಂಗ್​ಡಮ್​ಗೆ ಪ್ರಯಾಣಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಕಳೆದ ಸೆಪ್ಟೆಂಬರ್​ ತಿಂಗಳಲ್ಲಿ ನಡೆದಿದ್ದ ಏಷ್ಯಾ ಕಪ್​ ಸರಣಿ ವೇಳೆಯೂ ಪಾಂಡ್ಯ ಚಿಕಿತ್ಸೆಗೊಳಗಾಗಿದ್ದರು.

ಹಾರ್ದಿಕ್​ ಪಾಂಡ್ಯ


2020ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಆರಂಭಗೊಳ್ಳುವುದಕ್ಕೂ ಮುನ್ನ ಹಾರ್ದಿಕ್​ ಯಾವುದೇ ಪಂದ್ಯಗಳಲ್ಲಿ ಭಾಗಿಯಾಗದೇ ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಜತೆಗೆ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್​​ನಲ್ಲಿ ತಂಡಕ್ಕೆ ಇವರ ಅವಶ್ಯಕತೆಯಿರುವ ಕಾರಣ ಬಿಸಿಸಿಐ ಸಹ ವೈಟ್​ ಬಾಲ್​ ಫಾರ್ಮೆಟ್​​ನ ಕ್ರಿಕೆಟ್​ನಲ್ಲಿ ಮಾತ್ರ ಅವರನ್ನು ಬಳಕೆ ಮಾಡಿಕೊಳ್ಳಲು ನಿರ್ಧರಿಸಿದೆ.
25 ವರ್ಷದ ಪಾಂಡ್ಯ 11 ಟೆಸ್ಟ್​ ಪಂದ್ಯಗಳಿಂದ 11ವಿಕೆಟ್​, 532 ರನ್​, 54 ಏಕದಿನ ಪಂದ್ಯಗಳಿಂದ 937 ರನ್​​, 54 ವಿಕೆಟ್​​ ಹಾಗೂ 40 ಟಿ20 ಪಂದ್ಯಗಳಿಂದ 310 ರನ್​ ಹಾಗೂ 38 ವಿಕೆಟ್​ ಪಡೆದುಕೊಂಡಿದ್ದಾರೆ.

ABOUT THE AUTHOR

...view details