ಲಂಡನ್:ಬೆನ್ನುನೋವಿಗೆ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿರುವ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸದ್ಯ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಅ.4ರಂದು ಹಾರ್ದಿಕ್ ಪಾಂಡ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಆಸ್ಪತ್ರೆಯಲ್ಲೇ ಇರುವ ಪಾಂಡ್ಯ ಮಂಗಳವಾರ ತಮ್ಮ ಚೇತರಿಕೆಯ ಬಗ್ಗೆ ಟ್ವಿಟರ್ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿ ತಮ್ಮ ಅಭಿಮಾನಿಗಳಿಗೆ ಅಪ್ಡೇಟ್ ನೀಡಿದ್ದಾರೆ.
ಹಾರ್ದಿಕ್ ಪಾಂಡ್ಯಗೆ ಸರ್ಜರಿ ಯಶಸ್ವಿ... ವಿಶ್ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸ್ಟಾರ್ ಆಲ್ರೌಂಡರ್
"ಮಗುವಿನಂತೆ ಹೆಜ್ಜೆ ಇಡುತ್ತಿದ್ದೇನೆ. ಆದರೆ ಸಂಪೂರ್ಣವಾದ ಫಿಟ್ನೆಸ್ ದಾರಿ ಇಲ್ಲಿಯೇ ಈಗಲೇ ಆರಂಭವಾಗಿದೆ. ನನಗಾಗಿ ಪ್ರಾರ್ಥಿಸಿದ, ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು" ಎಂದು ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿದ್ದಾರೆ.
ಹಾರ್ದಿಕ್ ಶಸ್ತ್ರಚಿಕಿತ್ಸೆಯ ಬಳಿಕ ಕಳೆದ ನಾಲ್ಕೈದು ದಿನದ ಚಟುವಟಿಕೆ 57 ಸೆಕೆಂಡ್ನ ವಿಡಿಯೋದಲ್ಲಿ ಇದೆ. ಕಷ್ಟಪಟ್ಟು ನಡೆಯುತ್ತಿರುವ, ವೀಲ್ಚೇರ್ನಲ್ಲಿ ಓಡಾಡುವ ತುಣುಕುಗಳಿವೆ.