ಕರ್ನಾಟಕ

karnataka

ETV Bharat / sports

ಜಹೀರ್​ ಖಾನ್ ಬರ್ತಡೇಗೆ ಹಾರ್ದಿಕ್​ ವಿಶ್​ ಮಾಡಿದ ರೀತಿಗೆ ನೆಟ್ಟಿಗರಿಂದ ಕ್ಲಾಸ್​..! - ಜಹೀರ್​ ಖಾನ್​ಗೆ ಶುಭಾಶಯ ಕೋರಿದ ಪಾಂಡ್ಯ

ಜಹೀರ್​ ಖಾನ್​ ಭಾರತದ ಪರ 2003,2007  ಹಾಗೂ 2011 ರ ವಿಶ್ವಕಪ್​ನಲ್ಲಿ  ಗರಿಷ್ಠ ವಿಕೆಟ್​ ಪಡೆದಿದ್ದಾರೆ. ಅಲ್ಲದೇ 2011ರ ವಿಶ್ವಕಪ್​ ಭಾರತಕ್ಕೆ ​ ಗೆದ್ದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನೀವು ಮೊದಲು ಭಾರತಕ್ಕೆ ವಿಶ್ವಕಪ್​ ತಂದುಕೊಡಿ ನಂತರ ಬೇರೊಬ್ಬರ ಬಗ್ಗೆ ತಮಾಷೆ ಮಾಡಿ ಭಾರತದ ಕ್ರಿಕೆಟ್​ ಅಭಿಮಾನಿಗಳು ಪಾಂಡ್ಯರ ವರ್ತನೆಯನ್ನು ಖಂಡಿಸಿದ್ದಾರೆ.

Hardik Pandya

By

Published : Oct 8, 2019, 1:18 PM IST

ಮುಂಬೈ:ಭಾರತ ತಂಡದ ಮಾಜಿ ವೇಗದ ಬಾಲರ್​ ಜಹೀರ್​ಖಾನ್​ ನಿನ್ನೆ 41ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರಿಗೆ ಹಲವಾರು ಕ್ರಿಕೆಟಿಗರು ಶಭಾಶಯ ಕೋರಿದ್ದರು. ಆದರೆ, ಪಾಂಡ್ಯ ಮಾಡಿದ ವಿಶ್​ ಭಾರತೀಯ ಕ್ರಿಕೆಟ್​ ಅಭಿಮಾನಿಗಳನ್ನು ಕೆರಳಿಸಿದೆ.

41ನೇ ಜನುಮದಿನಕ್ಕೆ ಕಾಲಿಟ್ಟ ಜಹೀರ್​ ಖಾನ್​ರನ್ನು ಟ್ಯಾಗ್​ ಮಾಡಿರುವ ಪಾಂಡ್ಯ, ದೇಶಿ ಕ್ರಿಕೆಟ್​ನಲ್ಲಿ ಜಹೀರ್​ ಬೌಲಿಂಗ್​ ಸಿಕ್ಸರ್​ ಹೊಡೆಯುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿ, ಹ್ಯಾಪಿ ಬರ್ತಡೇ ಜಾಕ್​, ನಾನು ಮೈದಾನದ ಹೊರೆಗೆ ಹೊಡೆದಂತೆ ನೀವು ಸಿಕ್ಸರ್​ ಹೊಡೆಯುತ್ತೀರಾ ಎಂಬ ನಿರೀಕ್ಷೆಯಲ್ಲಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಈ ರೀತಿ ಜಹೀರ್​ ಕಾಲೆಳೆದು ಶುಭಾಶಯ ಕೋರಿರುವುದು ಭಾರತೀಯ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಬ್ರೆಟ್​ಲೀ, ಅಖ್ತರ್​ ಅಂತಹ ಬೌಲರ್​ಗಳ ಬೌಲಿಂಗ್​ನಲ್ಲಿ ಜಹೀರ್​ ಅದ್ಭುತ ಸಿಕ್ಸರ್​ ಬಾರಿಸಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯದಲ್ಲಿ 56 ಸಿಕ್ಸರ್​ ಸಿಡಿಸಿದ್ದಾತೆ. 600 ಅಂತಾರಾಷ್ಟ್ರೀಯ ವಿಕೆಟ್ ಪಡೆದಿರುವ ಲೆಜೆಂಡ್​ ಕ್ರಿಕೆಟಿಗನಿಗೆ ಈ ರೀತಿ ವಿಡಿಯೋ ಮೂಲಕ ವಿಶ್​ ಮಾಡಿ ಅಪಮಾನಿಸಿದ್ದೀರಾ, ಎಂದು ಆ ವಿಡಿಯೋವನ್ನು ಡಿಲೀಟ್​ ಮಾಡುವಂತೆ ತಾಕೀತು ಮಾಡಿದ್ದಾರೆ.

ಜಹೀರ್​ ಖಾನ್​ ಭಾರತದ ಪರ 2003,2007 ಹಾಗೂ 2011 ರ ವಿಶ್ವಕಪ್​ನಲ್ಲಿ ಗರಿಷ್ಠ ವಿಕೆಟ್​ ಪಡೆದಿದ್ದಾರೆ. ಅಲ್ಲದೆ 2011ರ ವಿಶ್ವಕಪ್​ ಭಾರತಕ್ಕೆ ವಿಶ್ವಕಪ್​ ಗದ್ದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನೀವು ಮೊದಲು ಭಾರತಕ್ಕೆ ವಿಶ್ವಕಪ್​ ತಂದುಕೊಡಿ ನಂತರ ಬೇರೊಬ್ಬರ ಬಗ್ಗೆ ತಮಾಷೆ ಮಾಡಿ ಎಂದು ಭಾರತದ ಕ್ರಿಕೆಟ್​ ಅಭಿಮಾನಿಗಳು ಪಾಂಡ್ಯರ ವರ್ತನೆಯನ್ನು ಖಂಡಿಸಿದ್ದಾರೆ.

ABOUT THE AUTHOR

...view details