ಸಿಡ್ನಿ:ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಸರಣಿಯನ್ನು 2-1ರಲ್ಲಿ ಭಾರತ ಗೆದ್ದು, ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದೆ. ತಮ್ಮ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಎರಡನೇ ಪಂದ್ಯ ಗೆಲ್ಲಲು ಕಾರಣವಾಗಿದ್ದ ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಆದರೆ, ಹಾರ್ದಿಕ್ ಪಾಂಡ್ಯ 2ನೇ ಪಂದ್ಯದಲ್ಲಿ ಕೇವಲ 20 ರನ್ ನೀಡಿ 2 ವಿಕೆಟ್ ಪಡೆದಿದ್ದನ್ನು ನೆನೆಪಿಸಿದರು. ಇದೇ ವೇಳೆ ಪಂದ್ಯಶ್ರೇಷ್ಠ ಪ್ರಶಸ್ತಿ ನೈಜವಾಗಿ ನಟರಾಜನ್ಗೆ ಸಲ್ಲಬೇಕೆಂದು ತಮಗೆ ಬಂದ ಪ್ರಶಸ್ತಿಯನ್ನು ನಟರಾಜನ್ ಕೈಗಿಟ್ಟು, ಇದಕ್ಕೆ ನೀನೇ ಅರ್ಹ ಸಹೋದರ ಎಂದು ತಿಳಿಸಿದರು.
ಪಂದ್ಯದ ನಂತರ ಸಾಮಾಜಿಕ ಜಾಲಾತಾಣದಲ್ಲಿ ನಟರಾಜನ್ ಜೊತೆಗಿರುವ ಫೋಟೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ನಟರಾಜನ್ ಬಗ್ಗೆ ಹೃದಯ ಸ್ಪರ್ಶಿ ಸಂದೇಶವೊಂದನ್ನು ಬರೆದಿದ್ದಾರೆ. ಈ ಟ್ವೀಟ್‌ನ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದು, 72 ಸಾವಿರ ಜನ ಲೈಕ್ ಮಾಡಿದ್ದಾರೆ.
"ನಟರಾಜನ್, ನಿಮ್ಮ ಪ್ರದರ್ಶನ ಈ ಸರಣಿಯಲ್ಲಿ ಭವ್ಯವಾಗಿತ್ತು. ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಸರಣಿಯಲ್ಲಿ, ಒತ್ತಡದ ಪರಿಸ್ಥಿತಿಯಲ್ಲಿ ನಿಮ್ಮ ಪ್ರದರ್ಶನ ಅದ್ಭುತವಾಗಿತ್ತು. ನಿಮ್ಮ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮ ಮೆಚ್ಚುವಂತದ್ದು. ನನ್ನ ಕಡೆಯಿಂದ ನೀನೇ ಈ ಸರಣಿ ಶ್ರೇಷ್ಠ ಪ್ರಶಸ್ತಿಗೆ ಅರ್ಹ ಸಹೋದರ!" ಎಂದು ಟ್ವೀಟ್ ಮಾಡಿದ್ದಾರೆ. ನಟರಾಜನ್ ಈ ಟ್ವೀಟ್ಗೆ ಪ್ರತಿಕ್ರಿಯಿಸಿದ್ದು, ಧನ್ಯವಾದ ಸಹೋದರ ಎಂದಿದ್ದಾರೆ.
ನಟರಾಜನ್ ಮೊದಲ ಪಂದ್ಯದಲ್ಲಿ 3 ವಿಕೆಟ್, 2ನೇ ಪಂದ್ಯದಲ್ಲಿ 2 ಹಾಗೂ ಕೊನೆ ಪಂದ್ಯದಲ್ಲಿ ಒಂದು ವಿಕೆಟ್ ಪಡೆದಿದ್ದರು. ಒಟ್ಟಾರೆ 3 ಪಂದ್ಯಗಳ ಸರಣಿಯಲ್ಲಿ ಆಸೀಸ್ ನೆಲದಲ್ಲಿ ಬುಮ್ರಾ ಮತ್ತು ಮಾಲಿಂಗಾ ನಂತರ 6 ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.