ಕರ್ನಾಟಕ

karnataka

ETV Bharat / sports

ಅಬ್ಬರಿಸಿದ ಪಾಂಡ್ಯ, ಧವನ್​: ಆಸ್ಟ್ರೇಲಿಯಾ​ ವಿರುದ್ಧ ಟಿ20 ಸರಣಿ ಗೆದ್ದು ಸೇಡು ತೀರಿಸಿಕೊಂಡ ಕೊಹ್ಲಿ ಪಡೆ - ಐಪಿಎಲ್

ಆಸ್ಟ್ರೇಲಿಯಾ ನೀಡಿದ 195 ರನ್​ಗಳ ಗುರಿಯನ್ನು 19.4 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಗುರಿತಲುಪಿತು. ಕೆ ಎಲ್​ ರಾಹುಲ್ 30, ಶಿಖರ್ ಧವನ್ 51 , ವಿರಾಟ್ ಕೊಹ್ಲಿ 40, ಹಾರ್ದಿಕ್ ಪಾಂಡ್ಯ 42 ರನ್​ ಗಳಿಸಿ ಗೆಲುವಿನ ರೂವಾರಿಯಾದರು.

ಆಸ್ಟ್ರೇಲಿಯಾ​ ವಿರುದ್ಧ ಟಿ20 ಸರಣಿ ಗೆದ್ದು ಸೇಡು ತೀರಿಸಿಕೊಂಡ ಕೊಹ್ಲಿ ಪಡೆ
ಆಸ್ಟ್ರೇಲಿಯಾ​ ವಿರುದ್ಧ ಟಿ20 ಸರಣಿ ಗೆದ್ದು ಸೇಡು ತೀರಿಸಿಕೊಂಡ ಕೊಹ್ಲಿ ಪಡೆ

By

Published : Dec 6, 2020, 5:59 PM IST

ಸಿಡ್ನಿ:ಹಾರ್ದಿಕ್ ಪಾಂಡ್ಯ ಹಾಗೂ ಶಿಖರ್​ ಧವನ್​ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ನಾಯಕ ವಿರಾಟ್​ ಕೊಹ್ಲಿ ಸಮಯೋಚಿತ ಬ್ಯಾಟಿಂಗ್ ನೆರವಿನಿದ ಭಾರತ ತಂಡ 2ನೇ ಟಿ20 ಪಂದ್ಯವನ್ನು 6 ವಿಕೆಟ್​ಗಳ ಜಯ ಸಾಧಿಸಿ ಟಿ20 ಸರಣಿ ವಶಪಡಿಸಿಕೊಂಡಿದೆ.

ಆಸ್ಟ್ರೇಲಿಯಾ ನೀಡಿದ 195 ರನ್​ಗಳ ಗುರಿಯನ್ನು 19.4 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಗುರಿ ತಲುಪಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಕೆ ಎಲ್​ ರಾಹುಲ್ ಹಾಗೂ ಶಿಖರ್ ಧವನ್​ ಮೊದಲ ವಿಕೆಟ್​ಗೆ 56 ರನ್​ಗಳ ಜೊತೆಯಾಟ ನೀಡಿದರು. ರಾಹುಲ್​ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್​ ಸಹಿತ 30 ರನ್​ಗಳಿಸಿ ಔಟಾದರು.

ನಂತರ ಅಬ್ಬರಿಸಿದ ಶಿಖರ್ ಧವನ್​ ಕೇವಲ 36 ಎಸೆತಗಳಲ್ಲಿ ತಲಾ 4 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 52 ರನ್​ ಗಳಿಸಿದರಲ್ಲದೆ, ನಾಯಕ ಕೊಹ್ಲಿ ಜೊತೆಗೂಡಿ 2ನೇ ವಿಕೆಟ್​ಗೆ 39 ರನ್​ ಸೇರಿಸಿದರು. ಧವನ್​ ನಂತರ ಬಂದ ಸಾಮ್ಸನ್​ ಇಂದಿನ ಪಂದ್ಯದಲ್ಲಿಯೂ 10 ಎಸೆತಗಳಲ್ಲಿ 15 ರನ್​ ಗಳಿಸಿ ವಿಕೆಟ್ ಕೈಚೆಲ್ಲಿದರು. ಕೊಹ್ಲಿ 24 ಎಸೆತಗಳಲ್ಲಿ 2 ಸಿಕ್ಸರ್​ ಹಾಗೂ 2 ಬೌಂಡರಿ ಸಹಿತ 40 ರನ್​ಗಳಿಸಿ ಔಟಾದರು.

ಆದರೆ ಕೊನೆಯಲ್ಲಿ ಅಬ್ಬರಿಸಿದ ಪಾಂಡ್ಯ ಮತ್ತು ಶ್ರೇಯಸ್ ಅಯ್ಯರ್ ಮುರಿಯದ 5ನೇ ವಿಕೆಟ್​ಗೆ 46 ರನ್​ ಸಿಡಿಸಿ ಗೆಲುವಿನ ಗಡಿ ದಾಟಿಸಿದರು. ಕೊನೆಯ 3 ಓವರ್​ಗಳಲ್ಲಿ ಭಾರತಕ್ಕೆ ಗೆಲ್ಲಲು 37 ರನ್​ಗಳ ಅಗತ್ಯವಿತ್ತು. ಶ್ರೇಯಸ್-ಪಾಂಡ್ಯ ಜೋಡಿ 18ನೇ ಓವರ್​ನಲ್ಲಿ 12, 19ನೇ ಓವರ್​ನಲ್ಲಿ 11 ರನ್ ಸಿಡಿಸಿದರು. ಹಾಗೂ ಕೊನೆಯ ಓವರ್​ನಲ್ಲಿ ಗೆಲ್ಲಲು 14 ರನ್​ಗಳ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಕೇವಲ 4 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್​ ಸಹಿತ 14 ರನ್​ ಸಿಡಿಸಿ ಭಾರತಕ್ಕೆ ಸರಣಿ ಗೆದ್ದುಕೊಟ್ಟರು.

ಇದನ್ನೂ ಓದಿ: ಹಾರ್ದಿಕ್​ ಪಾಂಡ್ಯ ಸಾಮರ್ಥ್ಯವನ್ನ ಭಾರತ ತಂಡ ವ್ಯರ್ಥ ಮಾಡಿಕೊಳ್ಳುತ್ತಿದೆ: ಅಜಯ್ ಜಡೇಜಾ ಬೇಸರ

ಶ್ರೇಯಸ್​ ಅಯ್ಯರ್​ 5 ಎಸೆತಗಳಲ್ಲಿ 12 ರನ್​ ಗಳಿಸಿದರೆ, ಹಾರ್ದಿಕ್ ಪಾಂಡ್ಯ 22 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್​ ಸಹಿತ ಅಜೇಯ 42 ರನ್ ​ಗಳಿಸಿದರು.

ಆಸ್ಟ್ರೇಲಿಯಾ ಪರ ಡೇನಿಯಲ್ ಸ್ಯಾಮ್ಸ್​ 41ಕ್ಕೆ 1, ಆ್ಯಂಡ್ರ್ಯೂ ಟೈ 47ಕ್ಕೆ 1 ಸ್ಪಿನ್ನರ್​ಗಳಾದ ಜಂಪಾ ಮತ್ತು ಸ್ವೆಪ್ಸನ್​ ತಲಾ ಒಂದು ವಿಕೆಟ್​ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ನಾಯಕ ಮ್ಯಾಥ್ಯೂ ವೇಡ್​ ಅವರ ಅರ್ಧಶತಕ(58), ಸ್ಟಿವ್ ಸ್ಮಿತ್ 46 ರನ್​, ಮ್ಯಾಕ್ಸ್​ವೆಲ್​ 22 ರನ್​ , ಹೆನ್ರಿಕ್ಸ್​ ಅವರ 26 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 194 ರನ್ ​ಗಳಿಸಿತ್ತು.

ನಟರಾಜನ್​ 2 ವಿಕೆಟ್​, ಠಾಕೂರ್​ ಹಾಗೂ ಚಹಾಲ್​ ತಲಾ ಒಂದು ವಿಕೆಟ್ ಪಡೆದಿದ್ದರು. ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಎರಡು ತಂಡಗಳ ನಡುವಿನ ಕೊನೆಯ ಟಿ20 ಪಂದ್ಯ ಇದೇ ಮೈದಾನದಲ್ಲಿ ಡಿಸೆಂಬರ್​ 8 ರಂದು ನಡೆಯಲಿದೆ.

ಇದನ್ನು ಓದಿ: ದೇಶಕ್ಕಾಗಿ ಆಡಲು ಕಠಿಣ ಪರಿಶ್ರಮ ಪಟ್ಟಿದ್ದೇನೆ: ಹಾರ್ದಿಕ್ ಪಾಂಡ್ಯ

ABOUT THE AUTHOR

...view details