ಹೈದರಾಬಾದ್: ಲಾಕ್ಡೌನ್ ಸಂದರ್ಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ತಂದೆಯಾದ ಸಂತಸದಲ್ಲಿದ್ದಾರೆ.
ಇವರು 2020ನೇ ವರ್ಷದ ಮೊದಲ ದಿನವೇ ನತಾಶಾಗೆ ಉಂಗುರ ತೊಡಿಸುವ ಮೂಲಕ ಎಂಗೇಜ್ ಆಗಿದ್ದರು. ಇದೀಗ ಸರ್ಬಿಯಾ ಮೂಲದ ಭಾವಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಕನ್ನಡದ 'ದನ ಕಾಯೋನು' ಸಿನಿಮಾ ಹಾಗು ಬಾಲಿವುಡ್ ಚಿತ್ರದಲ್ಲೂ 28 ವರ್ಷದ ನತಾಶಾ ನಟಿಸಿದ್ದರು. ಇವರಿಬ್ಬರ ಡೇಟಿಂಗ್ ವಿಷಯ ಕಳೆದ ವರ್ಷ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಕೊನೆಯದಾಗಿ ಕ್ರಿಕೆಟ್ ಮೈದಾನಕ್ಕಿಳಿದಿದ್ದ ಪಾಂಡ್ಯ ತದನಂತರ ಬೆನ್ನು ನೋವಿನ ಕಾರಣ ಇಂಗ್ಲೆಂಡ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.