ಕರ್ನಾಟಕ

karnataka

ವಿಶ್ವಕ್ರಿಕೆಟ್​ನಲ್ಲಿ ಮಹೇಂದ್ರ ಸಿಂಗ್​ ಧೋನಿಯಂತ ಕ್ರಿಕೆಟಿಗನನ್ನು ಹುಡುಕುವುದು ಕಷ್ಟ : ಸಿಎಸ್ಎ ನಿರ್ದೇಶಕ ಗ್ರೇಮ್​ ಸ್ಮಿತ್​

By

Published : Jul 12, 2020, 6:30 PM IST

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾದ ಪ್ರಸ್ತುತ ನಿರ್ದೇಶಕ ಗ್ರೇಮ್ ಸ್ಮಿತ್ ಕೂಲ್​ ಕ್ಯಾಪ್ಟನ್​ ಎಂದೇ ಖ್ಯಾತರಾಗಿರುವ ಮಹೇಂದ್ರ ಸಿಂಗ್​ ಧೋನಿ ನಾಯಕತ್ವದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಎಂಎಸ್​ ಧೋನಿ -ಗ್ರೇಮ್​ ಸ್ಮಿತ್​
ಎಂಎಸ್​ ಧೋನಿ -ಗ್ರೇಮ್​ ಸ್ಮಿತ್​

ಮುಂಬೈ: ವಿಶ್ವ ಕ್ರಿಕೆಟ್​ನಲ್ಲಿ ಎಂಎಸ್​ ಧೋನಿಗೆ ಸರಿಹೊಂದುವ ಆಟಗಾರರನನ್ನು ಹುಡುಕುವುದು ತುಂಬಾ ಕಷ್ಟ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾದ ಪ್ರಸ್ತುತ ನಿರ್ದೇಶಕ ಗ್ರೇಮ್ ಸ್ಮಿತ್ ಹೇಳಿದ್ದಾರೆ.

ತಾಳ್ಮೆಯ ನಾಯಕ ಎಂದೇ ಪ್ರಸಿದ್ಧಿಯಾಗಿರುವ ಧೋನಿ ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಐಸಿಸಿ ಯೋಜಿಸುವ ಎಲ್ಲಾ ಮಾದರಿಯ ಟ್ರೋಫಿಗಳನ್ನು ಗೆದ್ದಿರುವ ನಾಯಕನಾಗಿರುವ ಎಂ ಎಸ್​ ಧೋನಿಯಂತ ಮತ್ತೊಬ್ಬ ಆಟಗಾರನನ್ನು ಹುಡುಕುವುದು ಕಷ್ಟ ಎಂದು ಹರಿಣಗಳ ಮಾಜಿ ನಾಯಕ ಗ್ರೇಮ್ ಸ್ಮಿತ್​ ಅಭಿಪ್ರಾಯಪಟ್ಟಿದ್ದಾರೆ.

" ವಿಶ್ವಕ್ರಿಕೆಟ್​ನಲ್ಲಿ ನೀವು ಎಂಎಸ್​ ಧೋನಿಗೆ ಹೊಂದಿಕೊಳ್ಳುವ ಆಟಗಾರನನ್ನು ಬಹುಶಃ ಕಂಡುಕೊಂಡಿದ್ದೀವಿ ಎಂದರೆ ನಾನು ಅದನ್ನು ಗಂಭೀರವಾಗಿ ಅನುಮಾನಿಸುತ್ತೇನೆ. ಅವರು(ಧೋನಿ) ತಾಳ್ಮೆಯನ್ನು ಉಳ್ಳವನಾಗಿದ್ದರು. ಅವರು ಅವರ ಕೆಲಸವನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದರು ಎಂದು" ಸ್ಮಿತ್ ಹೇಳಿದ್ದಾರೆ.

ಎಂಎಸ್​ ಧೋನಿ -ಗ್ರೇಮ್​ ಸ್ಮಿತ್​

ಸ್ಮಿತ್ ಭಾರತದ ಮತ್ತೊಬ್ಬ ನಾಯಕ ಗಂಗೂಲಿಯ​ ಬಗ್ಗೆಯೂ ಮೆಚ್ಚುಗೆಯ ಮಾತನಾಡಿದ್ದಾರೆ. " ಸಂಗಾಕ್ಕರ ಮತ್ತು ದಾದಾ ಜೊತೆಗೆ ಸಾಕಷ್ಟು ಮಾತನಾಡಿದ್ದೇನೆ. ಆಡಳಿತಾತ್ಮಕ ವಿಷಯವಾಗಿ ನಾವು ಟೆಲಫೋನ್​ನಲ್ಲಿ ಕೆಲವು ಸಂಭಾಷಣೆ ನಡೆಸಿದ್ದೇವೆ. ಅವರು (ದಾದಾ) ಸದಾ ತಾಳ್ಮೆಯಿಂದಿರುತ್ತಾರೆ, ಉತ್ತಮ ಮಾತುಕತೆಗೆ ಮಹತ್ವ ನೀಡುತ್ತಾರೆ. ಅವರಿಬ್ಬರು ಸಾಕಷ್ಟು ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದ್ದಾರೆ.

ಗ್ರೇಮ್​ ಸ್ಮಿತ್​ ದಕ್ಷಿಣ ಆಫ್ರಿಕಾ ಪರ 117 ಟೆಸ್ಟ್​ ಪಂದ್ಯಗಳಿಂದ 9265 ರನ್​ ಹಾಗೂ 197 ಏಕದಿನ ಪಂದ್ಯಗಳಿಂದ 6989 ರನ್​ಗಳಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 27 ಹಾಗೂ ಏಕದಿನ ಕ್ರಿಕೆಟ್​ನಲ್ಲಿ 10 ಶತಕ ದಾಖಲಿಸಿದ್ದಾರೆ. ಇವರು ಮಾರ್ಚ್​ 1 2014 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು.

ABOUT THE AUTHOR

...view details