ಕರ್ನಾಟಕ

karnataka

By

Published : Oct 4, 2019, 4:29 PM IST

ETV Bharat / sports

ಸದ್ಯದಲ್ಲೇ ಮತ್ತೋರ್ವ ಟೀಂ ಇಂಡಿಯಾ ಆಟಗಾರ ನಿವೃತ್ತಿ..?

ಬಿಸಿಸಿಐ ಅನುಮತಿ ಇಲ್ಲದೆ ಟೀಂ ಇಂಡಿಯಾ ಆಟಗಾರರು ವಿದೇಶಿ ಟೂರ್ನಿಯಲ್ಲಿ ಭಾಗವಹಿಸುವಂತಿಲ್ಲ. ಸದ್ಯ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಭಜ್ಜಿ, ಶೀಘ್ರದಲ್ಲೇ ನಿವೃತ್ತಿ ಘೋಷಿಸಿ ವಿದೇಶಿ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಸದ್ಯದಲ್ಲೇ ಮತ್ತೋರ್ವ ಟೀಂ ಇಂಡಿಯಾ ಆಟಗಾರ ನಿವೃತ್ತಿ

ಹೈದರಾಬಾದ್:ಸ್ಫೋಟಕ ಬ್ಯಾಟ್ಸ್​ಮನ್ ಯುವರಾಜ್ ಸಿಂಗ್ ನಿವೃತ್ತಿ ಬಳಿಕ ಮತ್ತೋರ್ವ ಟೀಂ ಇಂಡಿಯಾ ಆಟಗಾರ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಗುಲ್ಲೆದ್ದಿದೆ.

2016ರ ಏಷ್ಯಾಕಪ್​ನಲ್ಲಿ ಭಾರತ ತಂಡವನ್ನು ಕೊನೆಯದಾಗಿ ಪ್ರತಿನಿಧಿಸಿದ್ದ ಸ್ಪಿನ್ನರ್ ಹರ್ಭಜನ್ ಸಿಂಗ್ ಸದ್ಯ ವಿದೇಶಿ ಟಿ20 ಲೀಗ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಿಸಿಸಿಐ ಅನುಮತಿ ಇಲ್ಲದೆ ಟೀಂ ಇಂಡಿಯಾ ಆಟಗಾರರು ವಿದೇಶಿ ಟೂರ್ನಿಯಲ್ಲಿ ಭಾಗವಹಿಸುವಂತಿಲ್ಲ. ಸದ್ಯ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಭಜ್ಜಿ, ಶೀಘ್ರದಲ್ಲೇ ನಿವೃತ್ತಿ ಘೋಷಿಸಿ ವಿದೇಶಿ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಟೀಂ ಇಂಡಿಯಾ ಹಿರಿಯ ಆಟಗಾರ ಹರ್ಭಜನ್ ಸಿಂಗ್

'ದಿ ಹಂಡ್ರೆಡ್'​ನಲ್ಲಿ ಭಜ್ಜಿ ಭಾಗಿ..!

ಇಂಗ್ಲೆಂಡ್​ ಕ್ರಿಕೆಟ್ ಬೋರ್ಡ್​ ಆಯೋಜನೆ ಮಾಡುವ ಇಂಗ್ಲೆಂಡ್ ಮತ್ತು ವೇಲ್ಸ್​​ನಲ್ಲಿ ನಡೆಯುವ ನೂರು ಎಸೆತಗಳ ಟೂರ್ನಿಯನ್ನು 'ದಿ ಹಂಡ್ರೆಡ್'​ ಎಂದು ಕರೆಯುತ್ತಾರೆ. ಈ ಟೂರ್ನಿ 2020ರ ಜುಲೈ ತಿಂಗಳಲ್ಲಿ ನಡೆಯಲಿದೆ.

ಈ ಲೀಗ್​ನಲ್ಲಿ ಎಂಟು ವಿವಿಧ ಇಂಗ್ಲೆಂಡ್ ನಗರ ಹೆಸರಿನ ತಂಡಗಳು ಭಾಗವಹಿಸುತ್ತಿದ್ದು, ಪುರುಷರು ಹಾಗೂ ಮಹಿಳೆಯರ ತಂಡಗಳಿರುತ್ತವೆ.

ಸದ್ಯ ಇದೇ ಟೂರ್ನಿಯಲ್ಲಿ ಹರ್ಭಜನ್ ಭಾಗವಹಿಸಲಿದ್ದಾರೆ. ಅಕ್ಟೋಬರ್ 20ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಹರ್ಭಜನ್ ಹರಾಜಿನಲ್ಲಿರುವ ಏಕೈಕ ಭಾರತೀಯ ಕ್ರಿಕೆಟರ್ ಎನ್ನುವುದು ವಿಶೇಷ.

ದಿ ಹಂಡ್ರೆಡ್ ಟೂರ್ನಿಯ ಆಟಗಾರರ ಜೆರ್ಸಿ ಅನಾವರಣ

ಹರ್ಭಜನ್ £100,000(87,56,400.00 ಭಾರತೀಯ ಲೆಕ್ಕಾಚಾರದಲ್ಲಿ) ಮೂಲ ಬೆಲೆ ನಿಗದಿಪಡಿಸಿದ್ದಾರೆ. ಅಕ್ಟೋಬರ್ 20ರ ಹರಾಜಿನಲ್ಲಿ ಹರ್ಭಜನ್​​ ಮಾರಾಟವಾದರೆ ನಿವೃತ್ತಿ ಘೋಷಿಸುವ ಸಾಧ್ಯತೆ ಹೆಚ್ಚು.

ಒಂದು ವೇಳೆ ಈ ರೀತಿ ನಿವೃತ್ತಿ ಘೋಷಿಸಿದಲ್ಲಿ ಸೂಕ್ತ ವಿದಾಯವಿಲ್ಲದೆ ತಂಡಕ್ಕೆ ವಿದಾಯ ಹೇಳಿದ ಹಲವು ಹಿರಿಯ ಆಟಗಾರರ ಸಾಲಿಗೆ ಹರ್ಭಜನ್ ಸಹ ಸೇರಲಿದ್ದಾರೆ.

ಟೀಂ ಇಂಡಿಯಾ ಹಿರಿಯ ಆಟಗಾರ ಹರ್ಭಜನ್ ಸಿಂಗ್

ABOUT THE AUTHOR

...view details