ಕರ್ನಾಟಕ

karnataka

ETV Bharat / sports

ಜಯಸೂರ್ಯ ಬಾಲ್‌ನ ಸಿಕ್ಸರ್ ಸಿಡಿಸಿದ ದಿನವೇ ಕೊಹ್ಲಿ ದೊಡ್ಡ ಸ್ಟಾರ್​ ಆಗುತ್ತಾರೆಂದು ಸಾಬೀತು-ಟರ್ಬನೇಟರ್‌

ಆತನ ಕಣ್ಣಲ್ಲಿ ಜಯಸೂರ್ಯ ಅವರ ಬೌಲಿಂಗ್​ನಲ್ಲಿ ಆಡುತ್ತಿದ್ದೇನೆ ಎಂಬ ಭಯವಿರಲಿಲ್ಲ. ಅದು ಆತ ಭವಿಷ್ಯದಲ್ಲಿ ದೊಡ್ಡ ಸ್ಟಾರ್​ ಆಗುತ್ತಾನೆಂದು ಸಾಬೀತು ಪಡಿಸಿತ್ತು ಎಂದು 12 ವರ್ಷಗಳ ಹಿಂದಿನ ಘಟನೆ ನೆನಪಿಸಿ ಕೊಹ್ಲಿಯನ್ನು ಹೊಗಳಿದ್ದಾರೆ ಭಜ್ಜಿ..

By

Published : Sep 14, 2020, 7:00 PM IST

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

ಮುಂಬೈ: ಪ್ರಸ್ತುತ ವಿಶ್ವಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್​ಮನ್​, ರನ್​ ಮಷಿನ್​ ಎಂದೇ ಕರೆಸಿಕೊಳ್ಳುವ ಕೊಹ್ಲಿ ಈಗಾಗಲೇ ಹಲವಾರು ದಾಖಲೆಗಳನ್ನು ಪುಡಿ ಮಾಡಿ ಮುನ್ನುಗ್ಗುತ್ತಿದ್ದಾರೆ.

ಅದು ಟಿ20, ಏಕದಿನ ಅಥವಾ ಟೆಸ್ಟ್‌ ಕ್ರಿಕೆಟ್​ನಲ್ಲೂಭಾರತ ತಂಡದ ನಾಯಕಕೊಹ್ಲಿ ಇಂದು ಶ್ರೇಷ್ಠ ಬ್ಯಾಟ್ಸ್​ಮನ್​ ಎಂಬುದರಲ್ಲಿ ಎರಡು ಮಾತು ಇಲ್ಲ. ಆದರೆ, 2008ರಲ್ಲೇ ಅವರು ಭವಿಷ್ಯದಲ್ಲಿ ಸ್ಟಾರ್ ಕ್ರಿಕೆಟ್​ ಆಗಲಿದ್ದಾರೆ ಎಂದು ಸಾಬೀತಾಗಿತ್ತು ಎಂದು ಭಾರತ ಮಾಜಿ ಕ್ರಿಕೆಟರ್‌ ಹರ್ಭಜನ್ ಸಿಂಗ್​ ತಿಳಿಸಿದ್ದಾರೆ.

ವೈಯಕ್ತಿಕ ಕಾರಣದಿಂದ ಐಪಿಎಲ್​ನಿಂದ ಹೊರ ಬಂದಿರುವ ಹರ್ಭಜನ್​ ಸಿಂಗ್​, ಸ್ಟಾರ್ಸ್​ ಸ್ಪೋರ್ಟ್ಸ್‌ನ ಐಪಿಎಲ್​ ಮೆಮೋರಿ ಶೋನಲ್ಲಿ ಭಾಗವಹಿಸಿದ್ದರು. ವಿರಾಟ್​ ಕೊಹ್ಲಿ 2008ರಲ್ಲಿ ದಿಗ್ಗಜ ಸನತ್​ ಜಯಸೂರ್ಯ ಅವರ ಬೌಲಿಂಗ್​ನಲ್ಲಿ ಮುಂದೆ ನುಗ್ಗಿ ಸಿಕ್ಸರ್​ ಸಿಡಿಸಿದ್ದ ಘಟನೆಯನ್ನು ಶೋನಲ್ಲಿ ಸ್ಮರಿಸಿಕೊಂಡಿದ್ದಾರೆ.

ಅಂದು ಸಚಿನ್​ ಪಂದ್ಯದಿಂದ ಹೊರಗುಳಿದಿದ್ದರಿಂದ ಮುಂಬೈ ಇಂಡಿಯನ್ಸ್​ ತಂಡವನ್ನು ನಾನೇ ಮುನ್ನಡೆಸಿದ್ದೆ. ಸನತ್​ ಜಯಸೂರ್ಯ ಬೌಲಿಂಗ್​ನಲ್ಲಿ ವಿರಾಟ್​ ಮುನ್ನುಗ್ಗಿ ಸಿಕ್ಸರ್​ ಸಿಡಿಸಿದ್ದರು. ಆತನ ಕಣ್ಣಲ್ಲಿ ಜಯಸೂರ್ಯ ಅವರ ಬೌಲಿಂಗ್​ನಲ್ಲಿ ಆಡುತ್ತಿದ್ದೇನೆ ಎಂಬ ಭಯವಿರಲಿಲ್ಲ. ಅದು ಆತ ಭವಿಷ್ಯದಲ್ಲಿ ದೊಡ್ಡ ಸ್ಟಾರ್​ ಆಗುತ್ತಾನೆಂದು ಸಾಬೀತು ಪಡಿಸಿತ್ತು ಎಂದು 12 ವರ್ಷಗಳ ಹಿಂದಿನ ಘಟನೆ ನೆನಪಿಸಿ ಕೊಹ್ಲಿಯನ್ನು ಹೊಗಳಿದ್ದಾರೆ.

2008ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದಾಗಿನಿಂದಲೂ ವಿರಾಟ್​ ಕೊಹ್ಲಿ ಆರ್​ಸಿಬಿ ಪರವೇ ಆಡುತ್ತಿದ್ದಾರೆ. ಐಪಿಎಲ್​ ಇತಿಹಾಸದಲ್ಲಿ ಒಂದೇ ತಂಡದಲ್ಲಿ ಆಡುತ್ತಿರುವ ಏಕೈಕ ಕ್ರಿಕೆಟಿಗರಾಗಿರುವ ವಿರಾಟ್​ ಕೊಹ್ಲಿ, 177 ಪಂದ್ಯಗಳಲ್ಲಿ 5 ಶತಕ ಸಹಿತ 5412 ರನ್​ಗಳಿಸಿದ್ದಾರೆ.

ABOUT THE AUTHOR

...view details