ಹೈದರಾಬಾದ್ : ತನ್ನ ನಾಯಕತ್ವದ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದ ಮಹೇಂದ್ರ ಸಿಂಗ್ ಧೋನಿ, 15 ವರ್ಷಗಳ ಕಾಲ ಟೀಂ ಇಂಡಿಯಾದ ಪರ ಆಡಿದ್ದಾರೆ. ಈ ಮೂಲಕ ಐಸಿಸಿ ಶ್ರೇಯಾಂಕದಲ್ಲಿ ಹಲವು ವರ್ಷಗಳ ಕಾಲ ಧೋನಿ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿದ್ದರು.
2005 ಪಾಕಿಸ್ತಾನ ಮತ್ತು 148 ರನ್
ತನ್ನ ಮೊದಲ ನಾಲ್ಕು ಏಕದಿನ ಇನ್ನಿಂಗ್ಸ್ಗಳಲ್ಲಿ ವಿಫಲವಾದ ಬಳಿಕ 2005 ರಲ್ಲಿ ವಿಶಾಖಪಟ್ಟಣಂನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಈ ಏಕದಿನ ಪಂದ್ಯದಲ್ಲಿ, ಧೋನಿ ಅದ್ಭುತ ಆರಂಭ ಮಾಡಿದರು. ಸ್ಫೋಟಕ ಬ್ಯಾಟಿಂಗ್ ಮೂಲಕ 15 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ಕೇವಲ 123 ಎಸೆತಕ್ಕೆ 148 ರನ್ ಗಳಿಸಿದರು. ಈ ಮೂಲಕ 50 ಓವರ್ಗಳಲ್ಲಿ 9 ವಿಕೆಟ್ಗೆ 356 ರನ್ ಗಳಿಸಿ 58 ರನ್‌ಗಳಿಂದ ಭಾರತ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು.
ಪಾಕಿಸ್ತಾನ ವಿರುದ್ಧ ಏಕದಿನ ಪಂದ್ಯ 2005 ಶ್ರೀಲಂಕಾ ಮತ್ತು 183 ರನ್
ಧೋನಿ ತಮ್ಮ ವೃತ್ತಿ ಜೀವನದ ಅತ್ಯಧಿಕ ಸ್ಕೋರ್ ಗಳಿಸಿದ್ದು 2005 ರಲ್ಲಿ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ. ಪ್ರಸ್ತುತ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ 298 ರನ್ ಗಳಿಸಿತ್ತು. ಕುಮಾರ ಸಂಗಕ್ಕಾರ ಶತಕ ದಾಖಲಿಸಿದ್ದರು. ಶ್ರೀಲಂಕಾ ನೀಡಿದ ಗುರಿ ಬೆನ್ನಟ್ಟಿ ಭಾರತದ ಪರ ಫೀಲ್ಡಿಗಿಳಿದ ಧೋನಿ 15 ಬೌಂಡರಿ 10 ಸಿಕ್ಸರ್ ಬಾರಿಸುವ ಮೂಲಕ 145 ಎಸೆತಗಳಲ್ಲಿ 183 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು.
2007 ಆಫ್ರಿಕಾ XI ಮತ್ತು 139 ರನ್
2007 ರ ಏಷ್ಯಾ ಇಲೆವೆನ್ ಪಂದ್ಯದಲ್ಲಿ 97 ಎಸೆತಗಳಿಗೆ 139 ರನ್ ಗಳಿಸುವ ಮೂಲಕ ಧೋನಿ ಆಫ್ರಿಕಾ ಇಲೆವೆನ್ ಬೌಲರ್ಗಳ ಬೆವರಿಳಿಸಿದ್ದರು. ಈ ಪಂದ್ಯದಲ್ಲಿ ಧೋನಿ 15 ಬೌಂಡರಿ 5 ಸಿಕ್ಸರ್ ಬಾರಿಸಿದ್ದರು. ಆದರೆ, ಆಫ್ರಿಕಾ ಇಲೆವೆನ್ ಈ ಪಂದ್ಯವನ್ನು 13 ರನ್‌ಗಳಿಂದ ಗೆದ್ದುಕೊಂಡಿತು.
ಏಷ್ಯಾ ಇಲೆವೆನ್ನಲ್ಲಿ ಆಫ್ರಿಕಾ ವಿರುದ್ಧ 139 ರನ್ ಗಳಿಸಿದಾಗ 2011 ಶ್ರೀಲಂಕಾ ಮತ್ತು 91 ರನ್
2011 ರ ವಿಶ್ವಕಪ್ ಚಾಂಪಿಯನ್ಸ್ ರೋಚಕ ಪಂದ್ಯದಲ್ಲಿ ಭಾರತ -ಶ್ರೀಲಂಕಾ ಮುಖಾಮಖಿಯಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಭಾರತಕ್ಕೆ 275 ರನ್ ಗುರಿ ನೀಡಿತ್ತು. ಭಾರತದ ಪರ ಬ್ಯಾಟಿಂಗ್ ಮಾಡಿದ ಸಚಿನ್ ಮತ್ತು ಸೆಹ್ವಾಗ್ ಬೇಗನೆ ಪೆವಿಲಿಯನ್ಗೆ ಮರಳಿದರು. ಹೀಗಾಗಿ ಟೀಂ ಇಂಡಿಯಾದ ಮೇಲೆ ಒತ್ತಡ ಹೆಚ್ಚಾಯಿತು. ಈ ವೇಳೆ ಗೌತಮ್ ಗಂಭೀರ್ 97 ರನ್ ಗಳಿಸುವ ಮೂಲಕ ತಂಡವನ್ನು ಟ್ರ್ಯಾಕ್ಗೆ ತಂದರು. ಕೊನೆಯದಾಗಿ ಫೀಲ್ಡಿಗಿಳಿದ ಧೋನಿ 91 ಎಸೆತಗಳಲ್ಲಿ ಅಜೇಯ ಇನ್ನಿಂಗ್ಸ್ ಆಡಿ 8 ಬೌಂಡರಿ 2 ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಈ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 6 ರನ್‌ಗಳಿಂದ ಜಯಗಳಿಸಿ, ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಳ್ಳುವ ಮೂಲಕ ವಾಂಖೆಡೆ ಕ್ರೀಡಾಂಗಣದಲ್ಲಿ ಇತಿಹಾಸ ನಿರ್ಮಿಸಿತ್ತು.
ಧೋನಿ ಅದ್ಭುತ ಸಿಕ್ಸರ್ ಬಾರಿಸಿದಾಗ ಯುವಿ ಪ್ರತಿಕ್ರಿಯೆ 2013 ಆಸ್ಟ್ರೇಲಿಯಾ ಮತ್ತು 224 ರನ್
ಚೆನ್ನೈನ ಎಂ.ಎ.ಚಿದಂಬರಂ ಮೈದಾನದಲ್ಲಿ ನಡೆದ 2012-13 ರ ಬೊರ್ಡೆಲ್ -ಗವಾಸ್ಕರ್ ಸರಣಿಯ ಮೊದಲ ಪಂದ್ಯದಲ್ಲಿ 265 ಎಸೆತಕ್ಕೆ 24 ಬೌಂಡರಿ ಮತ್ತು 6 ಸಿಕ್ಸರ್ ಬಾರಿಸುವ ಮೂಲಕ ಧೋನಿ ಮೊದಲ ಬಾರಿ ಟೆಸ್ಟ್ ಪಂದ್ಯದಲ್ಲಿ ದ್ವಿಶಕ ಬಾರಿಸಿದ್ದರು. ಈ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 8 ವಿಕೆಟ್‌ಗಳಿಂದ ಸೋಲಿಸಿತ್ತು.