ಕರ್ನಾಟಕ

karnataka

ETV Bharat / sports

ಹ್ಯಾಪಿ ಬರ್ತ್‌ಡೇ ರೋಹಿತ್​ ಶರ್ಮಾ: ಕ್ರಿಕೆಟ್​ ದಿಗ್ಗಜರಿಂದ ಹೃದಯಸ್ಪರ್ಶಿ ಶುಭಾಶಯ - ಬಿಸಿಸಿಐ

ಬಿಸಿಸಿಐ, ಐಸಿಸಿ ಸೇರಿದಂತೆ ಭಾರತದ ಹಲವು ಕ್ರಿಕೆಟಿಗರು ರೋಹಿತ್​ ಶರ್ಮಾ ಅವರ 33ನೇ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

ಹ್ಯಾಪಿ ಬರ್ತಡೇ ರೋಹಿತ್​ ಶರ್ಮಾ
ಹ್ಯಾಪಿ ಬರ್ತಡೇ ರೋಹಿತ್​ ಶರ್ಮಾ

By

Published : Apr 30, 2020, 1:30 PM IST

ಮುಂಬೈ:ಭಾರತ ಕ್ರಿಕೆಟ್​ನ ಆರಂಭಿಕ ಬ್ಯಾಟ್ಸ್​ಮನ್ ಹಾಗೂ ಸೀಮಿತ ಓವರ್​ ತಂಡದ ಉಪನಾಯಕ ರೋಹಿತ್​ ಶರ್ಮಾ ಇಂದು ತಮ್ಮ 33 ನೇ ಜನ್ಮದಿನ ಆಚರಿಸಿಕೊಳ್ತಿದ್ದು ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಶುಭಕೋರಿದ್ದಾರೆ.

ಪವರ್​ ಹಿಟ್ಟರ್​ ಎಂದೇ ಖ್ಯಾತಿ ಪಡೆದಿದ್ದ ಸುರೇಶ್​ ರೈನಾ ರೋಹಿತ್​ಗೆ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ರೋಹಿತ್​ ಶರ್ಮಾ ಫೋಟೋ ಟ್ವೀಟ್​ ಮಾಡಿರುವ ರೈನಾ ‘ಹ್ಯಾಪಿ ಬರ್ತ್‌ಡೇ, ರೋಹಿತ್, ಈ ಭೀಕರ ಸಮಯದಲ್ಲಿ ನಿನಗೂ ಮತ್ತು ನಿಮ್ಮ ಕುಟುಂಬಕ್ಕೂ ಆರೋಗ್ಯ ಮತ್ತು ಖುಷಿ ತರಲಿ. ಮನೆಯಲ್ಲಿ ಸುರಕ್ಷಿತವಾಗಿರು, ಕೇಕ್​ ತಯಾರಿಸು’ಎಂದು ಟ್ವೀಟ್​ ಮಾಡಿ ಶುಭ ಕೋರಿದ್ದಾರೆ.

ಭಾರತ ತಂಡದ ಕೋಚ್​ ರವಿಶಾಸ್ತ್ರಿ, ಹ್ಯಾಪಿ ಬರ್ತ್‌ಡೇ, ಶರ್ಮಾ! ನಿಮ್ಮ ಮುಂದಿನ ವರ್ಷಗಳಲ್ಲಿ ಉತ್ತಮವಾಗಿರಲಿ. ನಿಮಗೂ ಮತ್ತು ಕುಟುಂಬಕ್ಕೂ ಆರೋಗ್ಯ ಮತ್ತು ಖುಷಿ ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಕೂಡ ಟ್ವೀಟ್​ ಮೂಲಕ ಶುಭಕೋರಿದ್ದಾರೆ. ನಿಮಗೆ ನಿಮ್ಮ ಹಳೆಯ ಮತ್ತು ಹೊಸ ಹಾಗೂ ಒಳ್ಳೆಯ ಗೆಳೆಯರ ಕಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು, ಸಂತೋಷದಿಂದ ಮುನ್ನಡೆಯಿರಿ ಎಂದು ಬರೆದುಕೊಂಡಿದ್ದಾರೆ.

ಇನ್ನು ಕನ್ನಡಿಗ ಮಯಾಂಕ್​ ಅಗರ್​ವಾಲ್​, ನನ್ನ ಮೊದಲ ಟೆಸ್ಟ್​ ಶತಕ ಸಿಡಿಸಲು ರೋಹಿತ್​ ಶರ್ಮಾ ಸಲಹೆ ನೀಡಿದ ಸಂದರ್ಭವನ್ನು ಸ್ಮರಿಸುತ್ತಾ, ಹ್ಯಾಪಿ ಬರ್ತ್‌ಡೇ, ರೋಹಿತ್​, ಮತ್ತೆ ಇಂತಹ ಸಂದರ್ಭಕ್ಕೆ ಮರುಸೃಷ್ಠಿಸಲು ಕಾಯಲಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಯುವ ಕ್ರಿಕೆಟಿಗರಾದ ಖಲೀಲ್ ಅಹ್ಮದ್​, ಹನುಮ ವಿಹಾರಿ, ಕರಣ್ ಶರ್ಮಾ​ ಹಾಗೂ ಬಿಸಿಸಿಐ, ಐಸಿಸಿ ಹಾಗೂ ಕ್ರಿಕೆಟ್​ ಆಸ್ಟ್ರೇಲಿಯಾ, ಮುಂಬೈ ಇಂಡಿಯನ್ಸ್​ ತಮ್ಮ ಅಧಿಕೃತ ಟ್ವಿಟರ್​ ಮೂಲಕ ಹಿಟ್​ಮ್ಯಾನ್​ಗೆ ಶುಭಕೋರಿದ್ದಾರೆ.

2019 ರ ವಿಶ್ವಕಪ್​ನಲ್ಲಿ ವಿಶ್ವದಾಖಲೆಯ 5 ಶತಕ ಸೇರಿದಂತೆ 648 ರನ್​ಗಳಿಸಿದ್ದರು. ಭಾರತ ತಂಡದ ಉಪನಾಯಕನಾಗಿರುವ ಅವರು 224 ಏಕದಿನ ಪಂದ್ಯ, 108 ಟಿ20 ಹಾಗೂ 32 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ಒಟ್ಟಾರೆ ಮೂರು ಮಾದರಿಯ ಕ್ರಿಕೆಟ್​ನಿಂದ 14,029 ರನ್​ಗಳಿಸಿದ್ದಾರೆ.

ABOUT THE AUTHOR

...view details