ಕರ್ನಾಟಕ

karnataka

By

Published : Jul 7, 2019, 9:28 AM IST

ETV Bharat / sports

38ನೇ ವಸಂತಕ್ಕೆ ಕಾಲಿಟ್ಟ ಧೋನಿ: ಮಾಹಿಗೆ ಸೆಹ್ವಾಗ್ ಸ್ಪೆಷಲ್ ವಿಶ್

38ನೇ ವಸಂತಕ್ಕೆ ಕಾಲಿರಿಸಿದ ಟೀಂ ಇಂಡಿಯಾ ಮಾಜಿ ನಾಯಕ, ಹಾಲಿ ವಿಕೆಟ್​ ಕೀಪರ್​ ಮಹೇಂದ್ರ ಸಿಂಗ್​ ಧೋನಿಗೆ ಹಲವು ಕ್ರಿಕೆಟ್​ ಆಟಗಾರರು ಶುಭಾಶಯ ತಿಳಿಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಮಾಜಿ ಕ್ರಿಕೆಟರ್​ ವಿರೇಂದ್ರ ಸೆಹ್ವಾಗ್​ ಸ್ಪೆಷಲ್​ ಆಗಿ ವಿಶ್​ ಮಾಡಿದ್ದಾರೆ.

ಮಾಹಿಗೆ ವಿರೇಂದ್ರ ಸೆಹ್ವಾಗ್ ಸ್ಪೆಷಲ್ ವಿಶ್

ಹೈದರಾಬಾದ್​: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಟೀಂ ಇಂಡಿಯಾಕ್ಕೆ 2 ವಿಶ್ವಕಪ್​ ಗೆಲ್ಲಿಸಿಕೊಟ್ಟ ನಾಯಕನಿಗೆ ಭಾರತ ತಂಡದ ಸಹ ಆಟಗಾರರು ವಿಶ್​ ಮಾಡಿದ್ದಾರೆ.

ಮಾಜಿ ಕ್ರಿಕೆಟ್ ಆಟಗಾರ ವಿರೇಂದ್ರ ಸೆಹ್ವಾಗ್​ ಅವರು ಧೋನಿ ಜನುಮದಿನಕ್ಕೆ ಸ್ಪೆಷಲ್​ ವಿಶ್​ ಮಾಡಿದ್ದಾರೆ. ಪ್ರಂಚದಲ್ಲಿ ಇರುವ ಖಂಡಗಳು 7, ಕಾಮನಬಿಲ್ಲಿನಲ್ಲಿ ಇರುವ ಬಣ್ಣಗಳು 7, ಒಂದು ವಾರಕ್ಕೆ 7 ದಿನಗಳು, ಸಂಗೀತದ ಸ್ವರಗಳು 7, ಪ್ರಪಂಚದ ಅದ್ಭುತಗಳೂ 7. 7ನೇ ತಿಂಗಳ 7ನೇ ತಾರೀಖಿನಂದು ಜನಿಸಿರುವ ಕ್ರಿಕೆಟ್​ ಪ್ರಪಂಚದ ಅದ್ಭುತ ಮಹೇಂದ್ರ ಸಿಂಗ್​ ಧೋನಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದಿದ್ದಾರೆ.

ಮಾಜಿ ಆಟಗಾರ ಮೊಹಮ್ಮದ್​ ಕೈಫ್ ಕೂಡ ಟ್ವೀಟ್​ ಮಾಡಿದ್ದು, 2004ರಲ್ಲಿ ಇಬ್ಬರೂ ಒಟ್ಟಿಗೆ ಬಂಗ್ಲಾದೇಶದ ವಿರುದ್ಧದ ಟೂರ್ನಿಯಲ್ಲಿ ಪಾಲ್ಗೊಂಡಿದ್ದೆವು. ನಂತರ ಪಾಕ್​ ವಿರುದ್ಧದ ಟೂರ್ನಿಗೆ ಆಯ್ಕೆಯಾದೆವು. ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ 148 ರನ್​ ಸಿಡಿಸಿದ್ದ ಧೋನಿ ಮತ್ತೆ ಹಿಂದಿರುಗಿ ನೋಡಲಿಲ್ಲ. ಅವರು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದಾರೆ. ಲೈಫ್​ ಟೈಮ್​ ಪ್ಲೇಯರ್​ ಮತ್ತು ನಾಯಕನಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ವಿಶ್​ ಮಾಡಿದ್ದಾರೆ.

ಧೋನಿ ಹುಟ್ಟುಹಬ್ಬಕ್ಕೆ ಒಂದು ದಿನ ಮೊದ್ಲೇ ವಿಶ್​ ಮಾಡಿದ್ದ ಐಸಿಸಿ, 3 ನಿಮಿಷಗಳ ವಿಡಿಯೋ ಮಾಡಿ ತನ್ನ ಅಧಿಕೃತ​ ಟ್ವಿಟ್ಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದೆ. ಧೋನಿ ಎಂಬ ಹೆಸರು ಭಾರತ ಕ್ರಿಕೆಟ್​ ದಿಕ್ಕನ್ನ ಬದಲಿಸಿತು. ಆ ಹೆಸರು ಪ್ರಪಂಚದ ಲಕ್ಷಾಂತರ ಯುವ ಕ್ರಿಕೆಟಿಗರಿಗೆ ಸ್ಪೂರ್ತಿ, ಆ ಹೆಸರಿನ ಜೊತೆ ನಿರಾಕರಿಸಲಾಗದ ಪರಂಪರೆ ಇದೆ. ಎಂ.ಎಸ್​.​ ಧೋನಿ ಅಂದ್ರೆ ಕೇವಲ ಅದೊಂದು ಹೆಸರಲ್ಲ ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದೆ.

ಭಾರತ ಕ್ರಿಕೆಟ್​ ತಂಡಕ್ಕೆ 15 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಮಹೇಂದ್ರ ಸಿಂಗ್​ ಧೋನಿ ವಿಶ್ವ ಕ್ರಿಕೆಟ್​ನಲ್ಲಿ ಯಶಸ್ವಿ ನಾಯಕ, ಚಾಣಾಕ್ಷ ವಿಕೆಟ್​ ಕೀಪರ್​ ಹಾಗೂ ಬೆಸ್ಟ್​ ಫಿನಿಷರ್​ ಎಂದು ಖ್ಯಾತಿ ಗಳಿಸಿದ್ದಾರೆ.

ABOUT THE AUTHOR

...view details