ಕರ್ನಾಟಕ

karnataka

ETV Bharat / sports

ರೋಹಿತ್​ ಶರ್ಮಾ ನನ್ನ ರೋಲ್ ಮಾಡೆಲ್:  ಪಾಕ್​ ಆಟಗಾರನ ಬಣ್ಣನೆ - ಅಂಡರ್​ 19 ಆಟಗಾರ ಹೈದರ್​ ಅಲೀ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲಿ, ರೋಲ್ ಮಾಡೆಲ್‌ಗಳಿಗೆ ಸಂಬಂಧಿಸಿದಂತೆ, ನನ್ನ ರೋಲ್ ಮಾಡೆಲ್ ರೋಹಿತ್ ಶರ್ಮಾ. ನಾನು ಅವರನ್ನು ಒಬ್ಬ ಆಟಗಾರನಾಗಿ ನಿಜವಾಗಿಯೂ ಇಷ್ಟಪಡುತ್ತೇನೆ. ಅವರಂತೆ ಆಕ್ರಮಣಕಾರಿ ಆರಂಭವನ್ನು ಭಯಸುತ್ತೇನೆ ಎಂದು ಹೇಳಿದ್ದಾರೆ.

Haider Ali says 'match-winner' Rohit Sharma is his 'role model'
ರೋಹಿತ್​ ಶರ್ಮಾ ನನ್ನ ರೋಲ್ ಮಾಡೆಲ್ ಎಂದ ಹೈದರ್​ ಅಲೀ

By

Published : Jun 19, 2020, 11:39 AM IST

ಲಾಹೋರ್ : ಇಂಗ್ಲೆಂಡ್ ಪ್ರವಾಸಕ್ಕಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಪಾಕಿಸ್ತಾನದ ಯುವ ಕ್ರಿಕೆಟರ್​​​ ಹೈದರ್ ಅಲಿ, ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ನನ್ನ ರೋಲ್ ಮಾಡೆಲ್ ಎಂದು ಹೇಳಿದ್ದಾರೆ.

ಅಂಡರ್​-19 ಆಟಗಾರರಾಗಿರುವ ಅಲಿ, 2019-20 ಸೀಸನ್​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ 2020-21ರ ಸೀಸನ್​ಗೂ ಆಯ್ಕೆಯಾಗಿದ್ದಾರೆ. ಕಳೆದ ಜೂನ್​ನಲ್ಲಿ ನಡೆದ ಅಂಡರ್​ -19 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಒಟ್ಟು 317 ರನ್ ಗಳಿಸಿ ಮಿಂಚಿದ್ದ ಅಲಿ, ಪಾಕಿಸ್ತಾನ ಸೂಪರ್​ ಲೀಗ್​ ಪೇಶ್ವರ್​ ಝಲ್ಮಿ ಪರ ಒಂಬತ್ತು ಪಂದ್ಯಗಳಲ್ಲಿ 239 ರನ್ ಗಳಿಸಿದ್ದರು.

ಹೈದರ್​ ಅಲಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲಿ, ರೋಲ್ ಮಾಡೆಲ್‌ಗಳಿಗೆ ಸಂಬಂಧಿಸಿದಂತೆ, ನನ್ನ ರೋಲ್ ಮಾಡೆಲ್ ರೋಹಿತ್ ಶರ್ಮಾ. ನಾನು ಅವರನ್ನು ಒಬ್ಬ ಆಟಗಾರನಾಗಿ ನಿಜವಾಗಿಯೂ ಇಷ್ಟಪಡುತ್ತೆ. ಅವರಂತೆ ಆಕ್ರಮಣಕಾರಿ ಆರಂಭವನ್ನು ಭಯಸುತ್ತೇನೆ ಎಂದು ಹೇಳಿದ್ದಾರೆ.

ರೋಹಿತ್​ ಶರ್ಮಾ

ಅವರು ಎಲ್ಲ ಮೂರು ಸ್ವರೂಪದ ಪಂದ್ಯಗಳಿಗೂ ಹೊಂದಿಕೊಳ್ಳುವಂತಹ ಆಟಗಾರ. ಅವರು 50 ರನ್ ಪಡೆದಾಗ 100 ಮತ್ತು ನೂರು ಪಡೆದಾಗ 150 - 200 ರ ಬಗ್ಗೆ ಯೋಜನೆ ಮಾಡುತ್ತಾರೆ. ಅದನ್ನೇ ನಾನೂ ಮಾಡಲು ಭಯಸುತ್ತೇನೆ. ದೊಡ್ಡ ಗುರಿಯ ಬಗ್ಗೆ ಯೋಚಿಸುವ ಮತ್ತು ಅಲ್ಲಿಗೆ ತಲುಪಿದಾಗ ಇನ್ನೂ ದೊಡ್ಡ ಗುರಿಯನ್ನು ಬೆನ್ನಟ್ಟಿ ಆಟ ಮುಗಿಸುವ ಅವರೇ ನಿಜವಾದ ಪಂದ್ಯ ವಿಜೇತ ಎಂದು ರೋಹಿತ್​ ಶರ್ಮಾ ಅವರನ್ನು ಹಾಡಿ ಹೊಗಳಿದ್ದಾರೆ.

ABOUT THE AUTHOR

...view details