ಲಾಹೋರ್:ಪಾಕಿಸ್ತಾನದ ಹಿರಿಯ ಆಟಗಾರರಾದ ಮುಹಮ್ಮದ್ ಹಫೀಜ್ ಮತ್ತು ಶೋಯೆಬ್ ಮಲಿಕ್ ಅವರು, ಮುಂಬರುವ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಲಿದ್ದಾರೆ ಎಂದು ಪಾಕಿಸ್ತಾನದ ಮುಖ್ಯ ಕೋಚ್ ಮಿಸ್ಬಾ-ಉಲ್-ಹಕ್ ಸ್ಪಷ್ಟಪಡಿಸಿದ್ದಾರೆ.
ಲಾಹೋರ್ನಲ್ಲಿ ಮಾತನಾಡಿದ ಅವರು, 2019ರ ಏಕದಿನ ವಿಶ್ವಕಪ್ನಿಂದ ತಂಡವು ನಿರ್ಗಮಿಸಿದ ನಂತರ, ಅವರಿಬ್ಬರನ್ನು ಪುನಃ ಬಾಂಗ್ಲಾದೇಶ ವಿರುದ್ಧದ ನಡೆದ ಟಿ-20 ಸರಣಿಗೆ ಕರೆಸಿಕೊಳ್ಳಲಾಯಿತು. ಅವರು ಆಗ ಉತ್ತಮ ಪ್ರದರ್ಶನ ನೀಡಿದ್ದರು. ಮುಂದೆಯೂ ಪಾಕಿಸ್ತಾನ ಕ್ರಿಕೆಟ್ಗೆ ಅವರಿಬ್ಬರು ಕೊಡುಗೆ ನೀಡಬೇಕಿದೆ ಎಂದರು. ಒಬ್ಬ ಆಟಗಾರ ಫಿಟ್ ಆಗಿರುವವರೆಗೂ, ತನ್ನ ತಂಡಕ್ಕೆ ಕೊಡುಗೆ ನೀಡಬಲ್ಲನು ಎಂದರು.