ಕರ್ನಾಟಕ

karnataka

ETV Bharat / sports

ಡೆಲ್ಲಿ ವಿರುದ್ಧ ಆರ್​ಸಿಬಿ ಹೀನಾಯ ಸೋಲು.. ಬೇಸರ ವ್ಯಕ್ತಪಡಿಸಿದ ‘360’! - ಐಪಿಎಲ್​ 2020 ಸುದ್ದಿ,

ಡೆಲ್ಲಿ ವಿರುದ್ಧ ಹೀನಾಯ ಸೋಲು ಅನುಭವಿಸಿದ ಬಳಿಕ ಎಬಿ ಡಿವಿಲಿಯರ್ಸ್​ ಬೇಸರ ವ್ಯಕ್ತಪಡಿಸಿದ್ದಾರೆ.

IPL 2020, Indian Premier League, AB de Villiers, RCB vs DC, DC beat RCB, Delhi Capitals, ಬೇಸರ ವ್ಯಕ್ತ ಪಡಿಸಿದ ಎಬಿ ಡಿವಿಲಿಯರ್ಸ್​, ಆರ್​ಸಿಬಿ ಪಂದ್ಯದ ಬಗ್ಗೆ ಎಬಿ ಡಿವಿಲಿಯರ್ಸ್​ ಹೇಳಿಕೆ, ಎಬಿ ಡಿವಿಲಿಯರ್ಸ್​ ಸುದ್ದಿ, ಐಪಿಎಲ್​ 2020, ಐಪಿಎಲ್​ 2020 ಸುದ್ದಿ,
ಡೆಲ್ಲಿ ವಿರುದ್ಧ ಆರ್​ಸಿಬಿ ಹೀನಾಯ ಸೋಲು

By

Published : Oct 6, 2020, 2:07 PM IST

ದುಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್​ಗಳ ಹೀನಾಯ ಸೋಲು ಕಂಡ ಬಳಿಕ ತಮ್ಮ ಆಟದ ಬಗ್ಗೆ ಎಬಿ ಡಿವಿಲಿಯರ್ಸ್​ ಬೇಸರ ವ್ಯಕ್ತಪಡಿಸಿದ್ದಾರೆ.

ಡೆಲ್ಲಿ ವಿರುದ್ಧ ನಾವು ಬೇಗ ಹೊಂದಿಕೊಳ್ಳದ ಪರಿಣಾಮ ಭಾರಿ ಸೋಲು ಅನುಭವಿಸಬೇಕಾಯಿತು ಎಂದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಎಬಿ ಡಿವಿಲಿಯರ್ಸ್ ಬೇಸರ ಹೊರಹಾಕಿದ್ದಾರೆ.

ಡೆಲ್ಲಿ ವಿರುದ್ಧ ಆರ್​ಸಿಬಿ ಹೀನಾಯ ಸೋಲು

‘196 ರನ್‌ಗಳ ಗುರಿ ಬಹಳವಾಯ್ತು ಎಂದೆನಿಸಿತು. ಇದರ ಕೀರ್ತಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸಲ್ಲಬೇಕು. ಮೊದಲ ಆರು ಓವರ್‌ಗಳಲ್ಲಿ ಅವರು ಅತ್ಯುತ್ತಮ ಆರಂಭ ಪಡೆದರು. ಮಧ್ಯಮ ಓವರ್‌ಗಳಲ್ಲಿ ನಾವು ಕಮ್‌ಬ್ಯಾಕ್‌ ಮಾಡಿದ್ದೆವು. ಆದರೆ, ಕೊನೆಯ ಹಂತದಲ್ಲಿ ಡೆಲ್ಲಿ ಮೇಲುಗೈ ಸಾಧಿಸಿತು’ ಎಂದರು.

‘ಡೆಲ್ಲಿ ಆಟಗಾರರು ಬ್ಯಾಟಿಂಗ್‌ ಚೆನ್ನಾಗಿ ಮಾಡಿದರು. ನಾವು ಕೂಡ ಒಂದು ಹಂತದಲ್ಲಿ ಕಮ್‌ಬ್ಯಾಕ್‌ ಮಾಡಿದ್ದೆವು. ಆದರೆ, ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾಗಿದ್ದೇವೆ’ ಎಂದು ಹೇಳಿದರು.

‘ಕೆಲ ಕ್ಯಾಚ್‌ಗಳು ಡ್ರಾಪ್​ ಆದವು. ಫೀಲ್ಡಿಂಗ್‌ನಲ್ಲಿ ಕೆಲ ತಪ್ಪುಗಳನ್ನು ಮಾಡಲಾಯಿತು. ಇದರಿಂದ 20 ರಿಂದ 30 ರನ್‌ಗಳನ್ನು ಬಿಟ್ಟುಕೊಡಬೇಕಾಯಿತು. ಬ್ಯಾಟಿಂಗ್‌ನಲ್ಲಿಯೂ ನಾವು ಚೆನ್ನಾಗಿ ಪ್ರದರ್ಶನ ತೋರಲಿಲ್ಲ’ ಎಂದು ಸೋಲಿಗೆ ಕಾರಣಗಳನ್ನು ಬಿಚ್ಚಿಟ್ಟರು.

‘ಎರಡನೇ ಇನ್ನಿಂಗ್ಸ್‌ನಲ್ಲಿ ಸ್ವಲ್ಪ ಮಂಜು ಇದ್ದು, ಡೆಲ್ಲಿಗೆ ಬೌಲಿಂಗ್‌ ಮಾಡಲು ಕಷ್ಟವಾಗಬಹುದು ಎಂದು ತಿಳಿಯಲಾಗಿತ್ತು. ಆದರೆ, 40 ಓವರ್‌ಗಳವರೆಗೂ ಮಂಜು ಇರಲಿಲ್ಲ. ಮೈದಾನ ಒಣಗಿದ ರೀತಿಯಲ್ಲೇ ಇತ್ತು. ಆದರೆ, ಮಂಜು ಪಂದ್ಯದ ಮೇಲೆ ಪರಿಣಾಮ ಬೀರಬಹುದೆಂಬ ಕಾರಣದಿಂದ ಮೊದಲು ಫೀಲ್ಡಿಂಗ್‌ ಆಯ್ದುಕೊಂಡೆವು’ ಎಂದು ಎಬಿಡಿ ತಿಳಿಸಿದರು.

‘ಯಜ್ವೇಂದ್ರ ಚಹಲ್‌ ವಿಶ್ವ ದರ್ಜೆಯ ಬೌಲರ್‌. ಪ್ರಸಕ್ತ ಟೂರ್ನಿಯ ಅತ್ಯುತ್ತಮ ಬೌಲರ್‌ಗಳಲ್ಲಿ ಅವರು ಒಬ್ಬರಾಗಿದ್ದಾರೆ. ವಿರಾಟ್‌ ಕೊಹ್ಲಿಗೆ ಸಾಕಷ್ಟು ಆಯ್ಕೆಗಳಿವೆ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಯಾರು ಅತ್ಯುತ್ತಮವಾಗಿ ಬೌಲಿಂಗ್‌ ಮಾಡುತ್ತಾರೆ ಎಂಬುದು ದೊಡ್ಡ ವಿಷಯ. ಬೌಲಿಂಗ್‌ ಬದಲಾವಣೆ ವಿಚಾರದಲ್ಲಿ ನಾನು ಕೂಡ ಕೊಹ್ಲಿಯ ಭಾಗವಾಗಿದ್ದೇನೆ. ಆದರೆ, ಇದು ನಮಗೆ ಸಹಕಾರವಾಗಲಿಲ್ಲ’ ಎಂದರು.

‘ವಾಷಿಂಗ್ಟನ್‌ ಸುಂದರ್‌ ಬೌಲಿಂಗ್‌ ಅದ್ಭುತವಾಗಿದೆ. ಮೊದಲ ಭೇಟಿಯಾದಾಗಿನಿಂದಲೂ ಅವರು ಅತ್ಯುತ್ತಮವಾಗಿ ಬೌಲಿಂಗ್‌ ಮಾಡುತ್ತಿದ್ದಾರೆ. ಅವರ ಗೇಮ್‌ ಪ್ಲಾನ್‌ ಸ್ಪಷ್ಟವಾಗಿದೆ. ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡುವುದನ್ನು ಅವರು ಇಷ್ಟಪಡುತ್ತಾರೆ. ಹೊಸ ಚೆಂಡಿನಲ್ಲಿ ಏನು ಮಾಡಬೇಕೋ ಅದು ಅವರಿಗೆ ಸ್ಪಷ್ಟವಾಗಿದೆ’ ಎಂದು ಎಬಿ ಡಿವಿಲಿಯರ್ಸ್ ತಿಳಿಸಿದರು.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್​ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 196 ರನ್ ​ಗಳಿಸಿತ್ತು. 197 ರನ್​ಗಳ ಗುರಿ ಬೆನ್ನಟ್ಟಿದ ರಾಯಲ್​ ಚಾಲೆಂಜರ್ಸ್​ 137 ರನ್​ಗಳಿಗೆ ತನ್ನ ಆಟವನ್ನು ಮುಗಿಸಿ 59 ರನ್​ಗಳಿಂದ ಸೋಲುಂಡಿತು.

ABOUT THE AUTHOR

...view details