ಕರ್ನಾಟಕ

karnataka

ETV Bharat / sports

ತಂಡವನ್ನು ಬಿಟ್ಟು ಹೋಗಲು ದುಃಖವಾಗುತ್ತಿದೆ, ಮುಂದಿನ 2 ಪಂದ್ಯಗಳಿಗೆ ಶುಭವಾಗಲಿ: ಕೆ.ಎಲ್.ರಾಹುಲ್​

ನೆಟ್ಸ್​ನಲ್ಲಿ ಅಭ್ಯಾಸ ಮಾಡುತ್ತಿದ್ದ ವೇಳೆ ಮಣಿಕಟ್ಟು ಗಾಯಕ್ಕೆ ತುತ್ತಾಗಿರುವ ರಾಹುಲ್​ಗೆ ಮೂರು ವಾರಗಳ ವಿಶ್ರಾಂತಿ ಅಗತ್ಯವಿರುವುದರಿಂದ ಆಸ್ಟ್ರೇಲಿಯಾ ಸರಣಿಯಿಂದ ಹೊರ ಬಂದಿದ್ದಾರೆ. ಅವರು ಶೀಘ್ರದಲ್ಲೇ ಭಾರತಕ್ಕೆ ಮರಳಲಿದ್ದು, ಬೆಂಗಳೂರಿನ ರಾಷ್ಟ್ರಿಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಿಲಿದ್ದಾರೆ.

ಕೆಎಲ್ ರಾಹುಲ್​
ಕೆಎಲ್ ರಾಹುಲ್​

By

Published : Jan 6, 2021, 7:10 PM IST

ಸಿಡ್ನಿ:ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಸರಣಿಯಿಂದ ಹೊರ ಬಿದ್ದಿರುವ ಭಾರತ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಕೆ.ಎಲ್.ರಾಹುಲ್,​ ತಂಡ ಬಿಟ್ಟು ಹೋಗುತ್ತಿರುವುದಕ್ಕೆ ಬೇಸರವಾಗಿತ್ತಿದೆ. ಆದರೆ ಮುಂದಿನ ಪಂದ್ಯಗಳಿಗೆ ಶುಭವಾಗಲಿ ಎಂದಿದ್ದಾರೆ.

ನೆಟ್ಸ್​ನಲ್ಲಿ ಅಭ್ಯಾಸ ಮಾಡುತ್ತಿದ್ದ ವೇಳೆ ಮಣಿಕಟ್ಟು ಗಾಯಕ್ಕೆ ತುತ್ತಾಗಿರುವ ರಾಹುಲ್​ಗೆ ಮೂರು ವಾರಗಳ ವಿಶ್ರಾಂತಿ ಅಗತ್ಯವಿರುವುದರಿಂದ ಆಸ್ಟ್ರೇಲಿಯಾ ಸರಣಿಯಿಂದ ಹೊರ ಬಂದಿದ್ದಾರೆ. ಅವರು ಶೀಘ್ರದಲ್ಲೇ ಭಾರತಕ್ಕೆ ಮರಳಲಿದ್ದು, ಬೆಂಗಳೂರಿನ ರಾಷ್ಟ್ರಿಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಿಲಿದ್ದಾರೆ.

"ತಂಡವನ್ನು ಬಿಟ್ಟು ಹೋಗುವುದಕ್ಕೆ ದುಃಖವಾಗುತ್ತಿದೆ. ಆದರೆ ಮುಂದಿನ ಪಂದ್ಯಗಳಿಗೆ ನಮ್ಮ ಹುಡುಗರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ" ಎಂದು ರಾಹುಲ್​ ಟ್ವೀಟ್​ ಮಾಡಿದ್ದಾರೆ.

ಮೊದಲೆರಡು ಪಂದ್ಯಗಳಲ್ಲಿ ರಾಹುಲ್​ ಕಣಕ್ಕಿಳಿದಿರಲಿಲ್ಲ. 3ನೇ ಟೆಸ್ಟ್​ನಲ್ಲಿ ಅವಕಾಶ ಸಿಗಬಹುದೆಂಬ ನಿರೀಕ್ಷೆಯಿಲ್ಲಿದ್ದರು. ಆದರೆ ಬಿಸಿಸಿಐ ಶನಿವಾರ ಎಂಸಿಜಿಯಲ್ಲಿ ಅಭ್ಯಾಸ ಮಾಡುತ್ತಿದ್ದ ವೇಳೆ ರಾಹುಲ್ ಗಾಯಗೊಂಡು ಇಡೀ ಸರಣಿಯಿಂದ ಹೊರ ಬಿದ್ದಿದ್ದಾರೆ ಎಂದು ಹೇಳಿಕೆ ಬಿಡುಗಡೆ ಮಾಡಿತ್ತು.

ಬಾರ್ಡರ್​ ಗವಾಸ್ಕರ್​ ಸರಣಿಯ ಮೂರನೇ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ನಾಳೆಯಿಂದ ಆರಂಭವಾಗಲಿದೆ. ಭಾರತ ತಂಡಕ್ಕೆ ರೋಹಿತ್ ಕಮ್​ಬ್ಯಾಕ್ ಮಾಡಿದ್ದರೆ, ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್​ ವಾರ್ನರ್ ಸೇರಿಕೊಂಡಿರುವುದರಿಂದ ಈ ಪಂದ್ಯ ಭಾರಿ ಕುತೂಹಲ ಮೂಡಿಸಿದೆ. ​ ​

ಇದನ್ನು ಓದಿ:ಹೊಸದನ್ನು ಕಲಿಯುವ ಅಶ್ವಿನ್ ಜಾಣ್ಮೆ​, ಜಡೇಜಾ ಬ್ಯಾಟಿಂಗ್ ಸುಧಾರಣೆ ತಂಡದ ದೊಡ್ಡ ಬಲ: ರಹಾನೆ

ABOUT THE AUTHOR

...view details