ಕರ್ನಾಟಕ

karnataka

ETV Bharat / sports

ಆಸೀಸ್‌ ಹೋಪ್‌ಲೆಸ್‌... ಲಾರ್ಡ್ಸ್‌ನಲ್ಲಿ ಇಂಡೋ-ಆಂಗ್ಲೋ ಫೈನಲ್‌ ಬ್ಯಾಟಲ್! - Graeme Swanna Predicts Winner

ಈ ಸಲದ ಐಸಿಸಿ ವಿಶ್ವಕಪ್​ ಫೈನಲ್​​ನಲ್ಲಿ ಇಂಗ್ಲೆಂಡ್​-ಭಾರತ ಮುಖಾಮುಖಿಯಾಗಲಿದ್ದು, ಆಸ್ಟ್ರೇಲಿಯಾ ಸೆಮಿಫೈನಲ್​​ನಲ್ಲಿ ಹೊರಬೀಳಲಿದೆ ಎಂದು ಇಂಗ್ಲೆಂಡ್‌ನ ಮಾಜಿ ಆಪ್‌ ಸ್ಪಿನ್‌ ಬೌಲರ್‌ ಗ್ರ್ಯಾಮ್‌ ಸ್ವಾನ್‌ ಭವಿಷ್ಯ ನುಡಿದಿದ್ದಾರೆ.

ಲಾರ್ಡ್ಲ್‌ನಲ್ಲಿ ಇಂಡೋ-ಆಂಗ್ಲೋ ಫೈನಲ್‌ ಬ್ಯಾಟಲ್

By

Published : Jun 25, 2019, 5:13 PM IST

Updated : Jun 25, 2019, 7:22 PM IST

ಲಂಡನ್‌ :ವಿಶ್ವಕಪ್‌ನ ಈ ಸಾರಿ ಆಸ್ಟ್ರೇಲಿಯಾ ಗೆಲ್ಲೋದಕ್ಕೆ ಆಗಲ್ಲ. ಹಾಗಾದ್ರೇ ಯಾರು ಈ ಸಾರಿಯ ವರ್ಲ್ಡ್‌ಕಪ್‌ನ ಫೈನಲ್‌ನಲ್ಲಿ ಸೆಣೆಸಾಡ್ತಾರೆ ಅನ್ನೋದನ್ನ ಇಂಗ್ಲೆಂಡ್‌ನ ಮಾಜಿ ಆಪ್‌ ಸ್ಪಿನ್‌ ಬೌಲರ್‌ ಗ್ರ್ಯಾಮ್‌ ಸ್ವಾನ್‌ ಹೇಳ್ತಾರೆ ಕೇಳಿ.

ಗ್ರ್ಯಾಮ್‌ ಸ್ವಾನ್‌ಗೆ ತವರು ಇಂಗ್ಲೆಂಡ್‌ ಮೇಲೆಯೇ ಒಲವು..

ಇಂಗ್ಲೆಂಡ್​ ತಂಡ
ಇಂಗ್ಲೆಂಡ್‌ ಮಾಜಿ ಆಲ್‌ರೌಂಡರ್‌ ಗ್ರ್ಯಾಮ್‌ ಸ್ವಾನ್ ಈ ಸಾರಿಯ ವರ್ಲ್ಡ್‌ಕಪ್‌ ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಮಹಾಸಮರ ಅರ್ಧದಾರಿ ಸವೆಸಿದೆ. ಆಂಗ್ಲರನ್ನ ಮಣಿಸಿದ ಶ್ರೀಲಂಕಾ ತುಂಬಾ ಟೂರ್ನಿಯಲ್ಲಿ ಮಹತ್ತರ ತಿರುವು ಪಡೆದಿದೆ. ಸೈಮೀಸ್‌ ಆಸೆ ಇನ್ನೂ ಜೀವಂತವಿರಿಸಿಕೊಂಡಿದೆ. ನ್ಯೂಜಿಲೆಂಡ್, ಆಸೀಸ್‌, ಇಂಡಿಯಾ ಮತ್ತು ಇಂಗ್ಲೆಂಡ್‌ ತಂಡಗಳು ಸುಲಭವಾಗಿ ಅಂತಿಮ ನಾಲ್ಕರ ಘಟ್ಟಕ್ಕೆ ಸ್ಥಾನ ಕಲ್ಪಿಸಿಕೊಳ್ಳುವ ಆಸೆಗೆ ಲಂಕಾ ತಣ್ಣೀರೆರಚಿದೆ. ಆದರೆ, ಸಿಂಹಳೀಯರ ವಿರುದ್ಧ ಆಂಗ್ಲರು ಸೋತಿದ್ದರೂ ಸಹ ಜುಲೈ 14ರಂದು ಲಾರ್ಡ್ಸ್‌ನಲ್ಲಿ ನಡೆಯೋ ಫೈನಲ್‌ಗೆ ಇಯಾನ್‌ ಮೊರ್ಗಾನ್‌ ನೇತೃತ್ವದ ತಂಡ ಎಂಟ್ರಿ ಕೊಡುತ್ತಂತೆ.
ಗ್ರ್ಯಾಮ್‌ ಸ್ವಾನ್‌ ಭವಿಷ್ಯ

ಟೀಂ ಇಂಡಿಯಾ ಎಲ್ಲ ಹಂತದಲ್ಲೂ ಪರ್ಫೆಕ್ಟಾಗಿದೆಯಂತೆ!
ಪಾಕ್‌ ವಿರುದ್ಧ ಸರ್ವತೋಮುಖ ಅಮೋಘ ಆಟ ಪ್ರದರ್ಶಿಸಿದ ಟೀಂ ಇಂಡಿಯಾ ಎಲ್ಲ ವಿಧದಲ್ಲೂ ಫೈನಲ್‌ಗೆ ಪ್ರವೇಶಿಸುವ ಅರ್ಹತೆ ಹೊಂದಿದೆ. ಆದರೂ ಇಂಗ್ಲೆಂಡ್‌ ಮಾತ್ರ ಫೈನಲ್‌ಗೆ ಲಗ್ಗೆ ಹಾಕಲಿದೆ. 'ಆಸೀಸ್‌ ವಿರುದ್ಧದ ಇವತ್ತಿನ ಪಂದ್ಯದಲ್ಲೂ ಇಂಗ್ಲೆಂಡ್‌ಗೆ ನಾನು ಸಪೋರ್ಟ್ ಮಾಡುವೆ. ಲಂಕಾ ವಿರುದ್ಧ ಸೋತ ಮೇಲೆ ಆಂಗ್ಲರ ತಂಡ ಈಗ ಮತ್ತಷ್ಟು ಒಕ್ಕಟ್ಟಾಗಿದೆ. ತುಂಬಾ ಸಂಪ್ರದಾಯ ಪಾಲನೆ ತಂಡಕ್ಕೆ ಮುಳುವಾಗಿದೆ. ಎಲ್ಲ ಅಡೆೆತಡೆ ಮೆಟ್ಟಿ ಆಸೀಸ್‌ಗೆ ಇಂಗ್ಲೆಂಡ್‌ ಪಂಚ್‌ ಕೊಡುತ್ತೆ' ಅಂತಾ ಹೇಳಿದ್ದಾರೆ ಸ್ವಾನ್‌.

ಗ್ರ್ಯಾಮ್‌ ಸ್ವಾನ್‌

ಜೋಶ್​​ ಬಟ್ಲರ್‌.. ಜೋರಾಗಿ ರನ್‌ ಮಳೆಯನ್ನೇ ಸುರಿಸಬಲ್ಲರು!

ಇಂಗ್ಲೆಂಡ್​ ಅಭ್ಯಾಸ
ಜೋಶ್​ ಬಟ್ಲರ್‌ ವಿಶ್ವಕಪ್‌ನಲ್ಲಿ ಜಬರ್ದಸ್ತಾಗಿ ಆಡಿದ್ದಾರೆ. ಆಸೀಸ್‌ ಬೌಲರ್‌ಗಳನ್ನ ಸಮರ್ಥವಾಗಿ ಎದುರಿಸಿ, ಆಟ ಎಂಜಾಯ್ ಮಾಡ್ತಾರೆ. ಜೋ ಒಳ್ಳೇ ಬ್ಯಾಟ್ಸ್‌ಮೆನ್‌. ಫೈನಲ್‌ ಪ್ರವೇಶಿಸಿದ್ರೇ ಲಾರ್ಡ್ಸ್‌ನಲ್ಲಿ ಜೋ ರನ್‌ ಹೊಳೆಯೇ ಹರಿಸುತ್ತಾರೆ. ವಿಶೇಷ ಬ್ಯಾಟಿಂಗ್‌ನಿಂದ ಗಮನ ಸೆಳಿಯುತ್ತಾರಂತೆ.
ಟೀಂ ಇಂಡಿಯಾ ಸಂಭ್ರಮ

ಕಿವೀಸ್‌ಗೆ ಇನ್ನೂ ಬಿಸಿ ತಾಕಿಲ್ಲ, ಇಂಡಿಯಾ ವಿರುದ್ಧ ಮಿಸ್ಸಾಯ್ತು!
ಪಾಕ್‌ ಮತ್ತು ಶ್ರೀಲಂಕಾ ವಿರುದ್ಧ ಸೋತ ಮೇಲೆ ಇಂಗ್ಲೆಂಡ್‌ 8 ಪಾಯಿಂಟ್ಸ್‌ ಪಡೆದು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. 3ರಲ್ಲಿ ಕನಿಷ್ಠ 2 ಪಂದ್ಯ ಗೆದ್ದರೂ ಸೆಮಿಫೈನಲ್‌ ಪ್ರವೇಶ ಪಕ್ಕಾ. ಆದರೆ, ಇಂಗ್ಲೆಂಡ್‌ ಮತ್ತು ಇಂಡಿಯಾ ಫೈನಲ್ ಪ್ರವೇಶಿಸುವ ಬಗ್ಗೆ ಕಾನ್ಫಿಡೆಂಟಾಗಿರುವ ಸ್ವಾನ್‌ ಆಸ್ಟ್ರೇಲಿಯಾ ಬಗ್ಗೆ ಹೆಚ್ಚಿನ ಹೋಪ್‌ ಇರಿಸಿಲ್ಲ. ಮೈಕೆಲ್‌ ಸ್ಟಾರ್ಕ್‌ ಲಂಕಾ ವಿರುದ್ಧ ಅಬ್ಬರಿಸಲೇ ಇಲ್ಲ. ಹಾಗೇ ಇಂಗ್ಲೆಂಡ್‌ ಮತ್ತು ಇಂಡಿಯಾ ಜತೆಗೂ ಸ್ಟಾರ್ಕ್ ಕ್ಲಿಕ್ ಆಗಲ್ವಂತೆ. ನ್ಯೂಜಿಲೆಂಡ್‌ ಈವರೆಗೂ ಕಠಿಣ ಸವಾಲಾಗಬಲ್ಲ ತಂಡಗಳ ಜತೆಗೆ ಆಡಿಲ್ಲ. ಕಿವೀಸ್‌ ಸಾಮರ್ಥ್ಯ ಇನ್ನೂ ಪರೀಕ್ಷೆಗೊಳಪಟ್ಟಿಲ್ಲ. ಆದರೆ, ಟೀಂ ಇಂಡಿಯಾ ವಿರುದ್ಧ ಪಂದ್ಯ ಮಳೆಗೆ ರದ್ದಾಯ್ತು. ಬ್ಲ್ಯಾಕ್‌ ಕ್ಯಾಪ್‌ ಬಾಯ್ಸ್‌ ಟಫ್‌ ಎನಿಸುವ ತಂಡದ ಎದುರು ಸೆಣೆಸಿಲ್ಲ. ಎಲ್ಲವನ್ನೂ ನೋಡಿದ್ರೇ ಇಂಡೋ-ಆಂಗ್ಲೋ ಕದನವೇ ಪಕ್ಕಾ ಅಂತಾ ಗ್ರ್ಯಾಮ್‌ ಸ್ವಾನ್‌.

ಟೀಂ ಇಂಡಿಯಾ ಅಭ್ಯಾಸ
Last Updated : Jun 25, 2019, 7:22 PM IST

For All Latest Updates

ABOUT THE AUTHOR

...view details