ಕರ್ನಾಟಕ

karnataka

ETV Bharat / sports

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ನಿರ್ದೇಶಕನಾಗಿ ಗ್ರೇಮ್‌ ಸ್ಮಿತ್‌ ಆಯ್ಕೆ

ಬಿಸಿಸಿಐ ಮಾಜಿ ನಾಯಕ ಸೌರವ್​ ಗಂಗೂಲಿ ಅವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬೆನ್ನಲ್ಲೇ ಕ್ರಿಕೆಟ್​ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಗ್ರೇಮ್​ ಸ್ಮಿತ್​ ಅವರನ್ನು ಅಲ್ಲಿನ ಕ್ರಿಕೆಟ್‌ ಮಂಡಳಿಗೆ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದೆ.

raeme Smith CSA Director
raeme Smith CSA Director

By

Published : Dec 12, 2019, 5:54 PM IST

ಕೇಪ್​ಟೌನ್(ದಕ್ಷಿಣ ಆಫ್ರಿಕಾ)​: ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್‌ ಸ್ಮಿತ್‌ ಸಮಸ್ಯೆಗಳ ಆಗರವಾಗಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ (ಸಿಎಸ್‌ಎ) ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ದುರ್ವರ್ತನೆಯ ಆರೋಪದ ಮೇಲೆ ಹಾಲಿ ಸಿಎಸ್​ಎ ಚೀಫ್​ ಎಕ್ಸಿಕ್ಯೂಟಿವ್‌ ತಬಾಂಗ್‌ ಮೊರೊ ಅವರನ್ನು ಅಮಾನತು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ಮೂರು ತಿಂಗಳವರೆಗೆ ಸಿಎಸ್​ಎ ಡೈರೆಕ್ಟರ್​ ಆಗಿ ಕಾರ್ಯ ನಿರ್ವಹಿಸುವಂತೆ ಮಾಜಿ ನಾಯಕ ಸ್ಮಿತ್​ಗೆ ಮನವಿ ಮಾಡಲಾಗಿದೆ.

ನಾನು ಸಿಎಸ್​ಎ ನೆರವಿಗೆ ಸದಾ ಸಿದ್ದ. ಕಷ್ಟದ ಸಮಯದಲ್ಲಿ ಸಿಎಸ್​ಎನಲ್ಲಿ ಕಾರ್ಯನಿರ್ವಹಿಸುವುದಕ್ಕೆ ನನಗಿಷ್ಟ. ಈಗಾಗಲೇ ಈ ಕುರಿತು ಹಲವು ಬಾರಿ ಸಾರ್ವಜನಿಕವಾಗಿಯೇ ನಾನು ಹೇಳಿದ್ದೇನೆ. ಅದ್ರಲ್ಲೂ ಡೈರೆಕ್ಟರ್​ ಹುದ್ದೆಯನ್ನು ಕ್ರಿಕೆಟ್​ ಅಭಿವೃದ್ಧಿಪಡಿಸುವುದಕ್ಕೆ ಉಪಯೋಗಿಸುತ್ತೇನೆ ಎಂದು ಗ್ರೇಮ್​ ಸ್ಮಿತ್​ ತಿಳಿಸಿದ್ರು.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 15,000ಕ್ಕೂ ಹೆಚ್ಚು ರನ್​ಗಳಿಸಿರುವ ಗ್ರೇಮ್​ ಸ್ಮಿತ್​ ಕ್ಲಿಷ್ಠ ಪರಿಸ್ಥಿತಿಯಲ್ಲಿ ಸಿಎಸ್​ಎ ಕೈ ಹಿಡಿದಿರುವುದಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿಯ ಹೊಸ ಸಿಇಒ ಜಾಕ್ಸ್​ ಫಾಲ್ ಹರ್ಷ ವ್ಯಕ್ತಪಡಿಸಿದ್ದಾರೆ. ಸ್ಮಿತ್​ರ ನಾಯಕತ್ವ ಗುಣ ಹಾಗೂ ಜ್ಞಾನ ಕ್ರಿಕೆಟ್​ ಬೋರ್ಡ್​ ಅಭಿವೃದ್ಧಿಗೆ ಮಾರ್ಗದರ್ಶನವಾಗಲಿದೆ. ಈ ಮೂರು ತಿಂಗಳಲ್ಲಿ ಅವರಿಂದ ಉತ್ತಮ ಸಲಹೆ ಸೂಚನೆಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ABOUT THE AUTHOR

...view details