ಮುಂಬೈ:ಭಾರತ ತಂಡದ ಆಲ್ರೌಂಡರ್ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಮತ್ತೊಬ್ಬ ಭಾರತೀಯ ಬೌಲರ್ ಮನ್ಪ್ರೀತ್ ಗೋನಿ ಬಿಸಿಸಿಐ ವ್ಯಾಪ್ತಿಗೆ ಒಳಪಡುವ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಕೆನಡಾದಲ್ಲಿ ನಡೆಯುವ ಗ್ಲೋಬಲ್ ಟಿ-20 ಲೀಗ್ನಲ್ಲಿ ಅವಕಾಶ ಬಂದಿರುವುದರಿಂದ ಗೋನಿ ಬಿಸಿಸಿಐ ವ್ಯಾಪ್ತಿಗೆ ಒಳಪಡುವ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ಹೊರ ಬಂದಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಇದೇ ಕಾರಣದಿಂದ ಯುವರಾಜ್ ಕೂಡಾ ನಿವೃತ್ತಿ ಘೋಷಿಸಿದ್ದರು.