ಕರ್ನಾಟಕ

karnataka

ETV Bharat / sports

ಪಾಗಲ್​ ಕ್ಯಾ... ಇನ್ನೊಂದು ರನ್​​ ತೆಗೆದುಕೊಳ್ಳೋಣ ಎಂದ ಪಾಕ್​ ಬ್ಯಾಟ್ಸ್​​ಮನ್​ಗೆ ಬೈದ ಅಫ್ರಿದಿ! - ಬ್ರಂಪ್ಟನ್ ವೋಲ್ವ್ಸ್ ತಂಡ

ಪಾಗಲ್​ ಕ್ಯಾ... ಇನ್ನೊಂದು ರನ್​ ತೆಗೆದುಕೊಳ್ಳೋಣ ಎಂದ ಪಾಕ್​ ಬ್ಯಾಟ್ಸ್​​ಮನ್​ಗೆ ಅಫ್ರಿದಿ ಬೈದಿರುವ ವಿಡಿಯೋ ಇದೀಗ ವೈರಲ್​ ಆಗಿದೆ.

ಪಾಕ್​ ಬ್ಯಾಟ್ಸ್​​ಮನ್​ಗೆ ಬೈದ ಆಫ್ರಿದಿ

By

Published : Jul 31, 2019, 4:46 PM IST

Updated : Jul 31, 2019, 5:04 PM IST

ಹೈದರಾಬಾದ್​​: ಗ್ಲೋಬಲ್​​ ಟಿ-20 ಕೆನಡ್​ ಟೂರ್ನಿಯಲ್ಲಿ ಪಾಕ್​​ನ ಬೂಮ್​ ಬೂಮ್​ ಅಫ್ರಿದಿ ಕೇವಲ 40 ಎಸೆತಗಳಲ್ಲಿ 81ರನ್​ ಸಿಡಿಸಿ ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಿದರು. ಈ ವೇಳೆ ಇನ್ನಿಂಗ್ಸ್​​ವೊಂದರ ಕೊನೆ ಓವರ್​​ನ ಲಾಸ್ಟ್​ ಎಸೆತದಲ್ಲಿ ಇನ್ನೊಂದು ರನ್​ ತೆಗೆದುಕೊಳ್ಳೋಣ ಎಂದು ಕೇಳಿರುವ ಎದುರಾಳಿ ಬ್ಯಾಟ್ಸ್​​ಮನ್​​ಗೆ ಪಾಗಲ್​ ಹೂ ಕ್ಯಾ ಎಂದ ಬೈಯ್ದಿದ್ದಾರೆ.

ಬ್ರಂಪ್ಟನ್ ವೋಲ್ವ್ಸ್ ತಂಡದ ಪರ ಬ್ಯಾಟ್​ ಬೀಸಿದ ಶಾಹಿದ್​ ಅಫ್ರಿದಿ ನಿನ್ನೆಯ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದು, 11 ಬೌಂಡರಿ ಹಾಗೂ 5 ಸಿಕ್ಸರ್​ ಸೇರಿದಂತೆ 81ರನ್​ಗಳಿಕೆ ಮಾಡಿದರು. ಇನ್ನು ಕೊನೆಯ ಓವರ್​​ನ ಲಾಸ್ಟ್​ ಎಸೆತದಲ್ಲಿ ಅಫ್ರಿದಿ ಕೇವಲ ಒಂದು ರನ್​ಗಳಿಸಲು ಮಾತ್ರ ಶಕ್ತವಾದರು. ಈ ವೇಳೆ ಇನ್ನೊಬ್ಬ ಬ್ಯಾಟ್ಸ್​​ಮನ್​ ವಹಾಬ್​ ರಿಯಾಜ್​​ ಇನ್ನೊಂದು ರನ್​ ಪಡೆದುಕೊಳ್ಳಬಹುದೇ? ಎಂದು ಕೇಳಿದ್ದಾರೆ. ಅದಕ್ಕೆ ಆಕ್ರೋಶಗೊಂಡ ಅಫ್ರಿದಿ, ಪಾಗಲ್​ ಕ್ಯಾ? ಬೌಲಿಂಗ್​ ಕೌನ್​ ಕರೇಗಾ? ಎಂದು ಪ್ರಶ್ನೆ ಮಾಡಿದ್ದಾರೆ.

ಬ್ರಂಪ್ಟನ್ ವೋಲ್ವ್ಸ್ ಪರ ಅಫ್ರಿದಿ 81ರನ್​ಗಳ ನೆರವಿನಿಂದ 5ವಿಕೆಟ್​ ನಷ್ಟಕ್ಕೆ 207ರನ್​ಗಳಿಕೆ ಮಾಡಿತ್ತು. ಇದರ ಬೆನ್ನತ್ತಿದ್ದ ರಾಯಲ್ಸ್​ ತಂಡ 9ವಿಕೆಟ್​ನಷ್ಟಕ್ಕೆ 180ರನ್​ ಮಾತ್ರಗಳಿಕೆ ಮಾಡಿ, 27ರನ್​ಗಳ ಸೋಲು ಕಾಣುವಂತಾಯಿತು.

ಸದ್ಯ ಅಫ್ರಿದಿ ಮಾತನಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

Last Updated : Jul 31, 2019, 5:04 PM IST

ABOUT THE AUTHOR

...view details