ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ ಅಬ್ಬರದ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದರು. ತಾವು ಎದುರಿಸಿದ 31 ಎಸೆತಗಳಲ್ಲಿ 70 ರನ್ಗಳಿಕೆ ಮಾಡಿರುವ ಅವರು, ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದರು.
ಇಂದಿನ ಪಂದ್ಯದಲ್ಲಿ ಅವರು 8 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದರು. ನ್ಯೂಜಿಲ್ಯಾಂಡ್ ತಂಡದ ಜೇಮ್ಸ್ ನೀಶಮ್ ಎಸೆದ 17ನೇ ಓವರ್ಗಲ್ಲಿ 2 ಸಿಕ್ಸರ್ ಸೇರಿದಂತೆ 28ರನ್ಗಳಿಕೆ (4,6,4,4,4,6)ಮಾಡಿರುವ ಮ್ಯಾಕ್ಸ್‌ವೆಲ್, ಎಲ್ಲ ಎಸೆತಗಳನ್ನೂ ಬೌಂಡರಿ ಗೆರೆ ದಾಟಿಸಿದ್ದಾರೆ.
ಜತೆಗೆ ಇದೇ ಓವರ್‌ನಲ್ಲಿ ಅವರು ಸಿಡಿಸಿದ ಸಿಕ್ಸರ್ವೊಂದು ನೇರವಾಗಿ ಪ್ರೇಕ್ಷಕರು ಕುಳಿತುಕೊಳ್ಳುವ ಸ್ಟ್ಯಾಂಡ್ನ ಆಸನಕ್ಕೆ ಬಡಿಯಿತು. ಪರಿಣಾಮ ಆಸನ ಮುರಿದು ಹೋಗಿದೆ.