ದುಬೈ:ಕಿಂಗ್ಸ್ ಇಲೆವೆನ್ ತಂಡದ ದುಬಾರಿ ವಿದೇಶಿ ಕ್ರಿಕೆಟಿಗನಾಗಿರುವ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ 13ನೇ ಆವೃತ್ತಿಯಲ್ಲಿ ಬರೋಬ್ಬರಿ ನೂರು ಎಸೆತಗಳನ್ನೆದುರಿಸಿದರೂ ಒಂದೂ ಸಿಕ್ಸರ್ ಸಿಡಿಸಿಲ್ಲ ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ.
100 ಎಸೆತಗಳನ್ನಾಡಿದರೂ ಒಂದೂ ಸಿಕ್ಸರ್ ಸಿಡಿಸದ ಮಾಕ್ಸ್ವೆಲ್: ಪಡೆದಿದ್ದು ಬರೋಬ್ಬರಿ 10.75 ಕೋಟಿ ರೂ. - ಐಪಿಎಲ್ 2020
13ನೇ ಐಪಿಎಲ್ನಲ್ಲಿ 1,5,13,11,11,7,10,0,32,12 ರನ್ಗಳಿಸಿದ್ದಾರೆ. ಇದರಲ್ಲಿ 3 ಪಂದ್ಯಗಳಲ್ಲಿ ನಾಟೌಟ್ ಆಗಿ ಉಳಿದಿದ್ದಾರೆ.
ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ 2019ರ ಡಿಸೆಂಬರ್ನಲ್ಲಿ ನಡೆದ ಹರಾಜಿನಲ್ಲಿ 10.75 ಕೋಟಿ ರೂ. ನೀಡಿ ಖರೀದಿಸಿದೆ. ಆದರೆ, ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರುವ ಮೂಲಕ ಅಷ್ಟು ದೊಡ್ಡ ಮೊತ್ತ ಪಡೆದರೂ ಅದಕ್ಕೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ.
ಮ್ಯಾಕ್ಸ್ವೆಲ್ ಕಳೆದ 11 ಇನ್ನಿಂಗ್ಸ್ಗಳಲ್ಲಿ ಒಂದು ಅರ್ಧಶತಕ ಸಿಡಿಸಿಲ್ಲ. ಅವರು 13ನೇ ಐಪಿಎಲ್ನಲ್ಲಿ 1,5,13,11,11,7,10,0,32,12 ರನ್ಗಳಿಸಿದ್ದಾರೆ. ಇದರಲ್ಲಿ 3 ಪಂದ್ಯಗಳಲ್ಲಿ ನಾಟೌಟ್ ಆಗಿ ಉಳಿದಿದ್ದಾರೆ. ಇಷ್ಟು ವೈಫಲ್ಯ ಅನುಭವಿಸಿದರೂ ಪಂಜಾಬ್ ತಂಡ ಅವರನ್ನೇ ಎಲ್ಲಾ ಪಂದ್ಯಗಳಲ್ಲೂ ಅವಕಾಶ ಕೊಡುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ.