ಚೆನ್ನೈ: ಇಂಗ್ಲೆಂಡ್ ವಿರುದ್ದದ 2ನೇ ಟೆಸ್ಟ್ನ ಮೂರನೇ ದಿನದಲ್ಲಿ ಫೀಲ್ಡಿಂಗ್ ವೇಳೆ ಶುಬ್ಮನ್ ಗಿಲ್ ಎಡಗೈಗೆ ಪೆಟ್ಟು ಮಾಡಿಕೊಂಡಿರುವುದರಿಂದ ನಾಲ್ಕನೇ ದಿನ ಫೀಲ್ಡಿಂಗ್ ಮಾಡಿರಲಿಲ್ಲ, ಇದೀಗ ಅವರು ಸ್ಕ್ಯಾನಿಂಗ್‌ಗೆ ಒಳಗಾಗಿದ್ದು 3ನೇ ಟೆಸ್ಟ್ಗೆ ಅನುಮಾನ ಎನ್ನಲಾಗುತ್ತಿದೆ.
ಗಾಯಗೊಂಡ ಅವರನ್ನು ಮುಂಜಾಗ್ರತಾ ಕ್ರಮವಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನ್ ಮಾಡಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
"ಶುಬ್ಮನ್ ಗಿಲ್ 3ನೇ ದಿನದಾಟದಲ್ಲಿ ಫೀಲ್ಡಿಂಗ್ ವೇಳೆ ಮೊಣಕೈಗೆ ಚೆಂಡು ಬಡಿದು ಗಾಯಗೊಂಡಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿದೆ. ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ಅವರ ಬಗ್ಗೆ ನಿಗಾವಹಿಸಿದೆ. ಅವರು ಇಂದಿನ ದಿನ ಇವತ್ತು ಫೀಲ್ಡಿಂಗ್‌ಗೆ ಇಳಿಯುವುದಿಲ್ಲ" ಎಂದು ಬಿಸಿಸಿಐ ಟ್ವೀಟ್ ಮಾಡುವ ಮೂಲಕ ತಿಳಿಸಿತ್ತು.
ಮೊದಲ ಟೆಸ್ಟ್ ಪಂದ್ಯದಲ್ಲಿ ಮಿಂಚಿದ್ದ ಶುಬ್ಮನ್ ಗಿಲ್ 2ನೇ ಟೆಸ್ಟ್ನಲ್ಲಿ ಎರಡು ಇನ್ನಿಂಗ್ಸ್ಗಳಲ್ಲಿ 0 ಮತ್ತು 14 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆದರೂ ಭಾರತ ತಂಡ ರೋಹಿತ್ ಶರ್ಮಾ ಅವರ ಶತಕ ಮತ್ತು ಅಶ್ವಿನ್ ಅವರ ಆಲ್ರೌಂಡರ್ ಆಡದ ನೆರವಿನಿಂದ 317 ರನ್ಗಳ ಜಯ ಸಾಧಿಸಿತ್ತು.
ಇದನ್ನು ಓದಿ: ಟೆಸ್ಟ್ ಗೆಲ್ಲುವುದಕ್ಕೆ ನಾವು ತೋರಿದ ಉತ್ಸಾಹ, ಪರಿಶ್ರಮ ಕಾರಣವೇ ಹೊರತು, ಟಾಸ್ ಅಲ್ಲ: ಕೊಹ್ಲಿ