ಕರ್ನಾಟಕ

karnataka

ETV Bharat / sports

'ಗಿಲ್​ ಈಗಲ್ಲ ಎರಡು ವರ್ಷಗಳ ಹಿಂದೆಯೇ ಅವಕಾಶ ಪಡೆಯಬೇಕಿತ್ತು'

ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್​ ಆರಂಭಿಸಿದ ಗಿಲ್​ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಮಯಾಂಕ್​ ಅಗರ್​ವಾಲ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರೂ ಒತ್ತಡವನ್ನು ಮೆಟ್ಟಿ ನಿಂತು ಅದ್ಭುತವಾಗಿ ಇನ್ನಿಂಗ್ಸ್ ಕಟ್ಟಿದರು. ಪಂಜಾಬ್​ ಯುವ ಬ್ಯಾಟ್ಸ್​ಮನ್​ 38 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯ 28 ರನ್ ​ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.

By

Published : Dec 26, 2020, 10:44 PM IST

ಶುಬ್ಮನ್ ಗಿಲ್​
ಶುಬ್ಮನ್ ಗಿಲ್​

ಮೆಲ್ಬೋರ್ನ್​:ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಶುಬ್ಮನ್​ ಗಿಲ್​ ಮತ್ತು ಮೊಹಮ್ಮದ್ ಸಿರಾಜ್​ ಪದಾರ್ಪಣೆ ಮಾಡಿದ್ದಾರೆ. ಆದರೆ ಮಾಜಿ ವೇಗಿ ಅಜಿತ್ ಆಗರ್ಕರ್, ಯುವ ಬ್ಯಾಟ್ಸ್​ಮನ್​ ಶುಬ್ಮನ್​ ಗಿಲ್​ ಎರಡು ವರ್ಷಗಳ ಹಿಂದೆಯೇ ಅವಕಾಶ ಪಡೆಯಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್​ ಆರಂಭಿಸಿದ ಗಿಲ್​ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಮಯಾಂಕ್​ ಅಗರ್​ವಾಲ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರೂ ಒತ್ತಡವನ್ನು ಮೆಟ್ಟಿ ನಿಂತು ಅದ್ಭುತವಾಗಿ ಇನ್ನಿಂಗ್ಸ್ ಕಟ್ಟಿದರು. ಪಂಜಾಬ್​ ಯುವ ಬ್ಯಾಟ್ಸ್​ಮನ್​ 38 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯ 28 ರನ್​ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.

"ಅವರು (ಶುಬ್ಮನ್ ಗಿಲ್​) ಒಂದೆರಡು ವರ್ಷಗಳ ಹಿಂದೆಯೇ ಅವಕಾಶ ಪಡೆದಿರಬೇಕಿತ್ತು. ಅವರು ಆಗಲೇ ಸಿದ್ಧರಿದ್ದರು. ಅವರು ಅಂತಹ ಸಾಮರ್ಥ್ಯ ಪಡೆದಿರುವುದನ್ನು ನೀವು ಸ್ಪಷ್ಟವಾಗಿ ನೋಡಬಹುವುವು" ಎಂದು ಅಜಿತ್ ಅಗರ್ಕರ್​ ಹೇಳಿದ್ದಾರೆ.

ಈ ಸಣ್ಣ ಅವಧಿಯಲ್ಲಿ ಆಡುವುದು ಸುಲಭವಾಗುತ್ತಿರಲಿಲ್ಲ. ಆದರೆ ಗಿಲ್​ ಆಡಿದ ಪ್ರತಿಯೊಂದು ಚೆಂಡಿನಲ್ಲೂ ಆತ್ಮವಿಶ್ವಾಸ ಕಾಣುತ್ತಿತ್ತು. ಹೌದು, ಇಂತಹ ಒಂದು ಅವಕಾಶ, ಕೆಲವು ಅದೃಷ್ಟವನ್ನು ಕೂಡ ಆತ ಪಡೆದಿದ್ದಾನೆ. ಆಶಾದಾಯಕವಾಗಿ, ಅವನು ಹೀಗೆಯೇ ಮುಂದುವರೆಯಬಹುದು ಮತ್ತು ಮತ್ತಷ್ಟು ರನ್​ಗಳನ್ನು ಗಳಿಸಬಹುದು ಎಂದು ಅಗರ್ಕರ್​ ಹೇಳಿದ್ದಾರೆ.

ಇಂದಿನ ಪಂದ್ಯದ 4ನೇ ಓವರ್​ನಲ್ಲಿ ಪ್ಯಾಟ್​ ಕಮ್ಮಿನ್ಸ್​ ಓವರ್​ ಮತ್ತು ಸ್ಟಾರ್ಕ್​ ಓವರ್​ನಲ್ಲಿ ಒಂದೆರಡು ಬಾರಿ ಪೆಟ್ಟು ತಿಂದಿದ್ದರೂ ಜೊತೆಗೆ 5 ರನ್ ​ಗಳಿಸಿದ್ದ ವೇಳೆ 4ನೇ ಓವರ್​​ನಲ್ಲಿ ಜೀವದಾನ ಕೂಡ ಸಿಕ್ಕಿದೆ. ಇದರ ಸಂಪೂರ್ಣ ಲಾಭ ಪಡೆದ ಅವರು 5 ಆಕರ್ಷಕ ಬೌಂಡರಿ ಸಿಡಿಸಿ ಪೂಜಾರ ಜೊತೆಗೆ ಉತ್ತಮ ಜೊತೆಯಾಟ ನಡೆಸಿದ್ದಾರೆ.

ABOUT THE AUTHOR

...view details