ಕರ್ನಾಟಕ

karnataka

ETV Bharat / sports

ಸಚಿನ್​ರನ್ನು ಡಕ್​ಔಟ್​ ಮಾಡಿದ್ದ ಕ್ಷಣ ನೆನೆದ್ರೆ ಈಗಲೂ ನನಗೆ ರೋಮಾಂಚನ : ಭುವನೇಶ್ವರ್​ - Bhuvaneshwar kumar

ರಣಜಿ ಕ್ರಿಕೆಟ್‌ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ಅವರಂತಹ ಬ್ಯಾಟ್ಸ್​ಮನ್​ರನ್ನು ಡಕ್​ಔಟ್​ ಮಾಡಿದ್ದು ನನ್ನ ಪಾಲಿಗೆ ವಿಶೇಷ ಕ್ಷಣವಾಗಿತ್ತು. ಆ ಕ್ಷಣವನ್ನು ನೆನೆದರೆ ಈಗಲೂ ನನಗೆ ರೋಮಾಂಚನವಾಗುತ್ತಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ..

Bhuvneshwar Kumar
ಭುವನೇಶ್ವರ್​ ಕುಮಾರ್​

By

Published : Jun 30, 2020, 5:03 PM IST

ನವದೆಹಲಿ :ರಣಜಿ ಕ್ರಿಕೆಟ್​ನಲ್ಲಿ ಬ್ಯಾಟಿಂಗ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರನ್ನು ಡಕ್​ಔಟ್​ ಮಾಡಿದ್ದ ಕ್ಷಣವನ್ನು ನೆನೆದರೆ ನನಗೆ ಈಗಲು ರೋಮಾಂಚನವಾಗುತ್ತದೆ ಎಂದು ಭಾರತ ಸ್ವಿಂಗ್​ ಸ್ಪೆಷಲಿಸ್ಟ್​ ಭುವನೇಶ್ವರ್​ ಕುಮಾರ್​ ಹೇಳಿಕೊಂಡಿದ್ದಾರೆ.

2009ರ ರಣಜಿ ಋತುವಿನಲ್ಲಿ ಮುಂಬೈ ಮತ್ತು ಉತ್ತರಪ್ರದೇಶಗಳ ನಡುವಿನ ಪಂದ್ಯದಲ್ಲಿ 19 ವರ್ಷದ ಭುವನೇಶ್ವರ್​ ಕುಮಾರ್​ ಸಚಿನ್ ತೆಂಡೂಲ್ಕರ್ ಅವರನ್ನು ಡಕ್‌ಔಟ್​ ಮಾಡಿದ್ದರು. ಇದು ರಣಿಜಿ ಇತಿಹಾಸದಲ್ಲೇ ಸಚಿನ್​ರ ಮೊದಲ ಡಕ್‌ಔಟ್​ ಪ್ರದರ್ಶನವಾಗಿತ್ತು. ಯುವ ಬೌಲರ್​ ತಮ್ಮ ಸ್ಪೆಲ್‌ನ 14ನೇ ಎಸೆತದಲ್ಲಿ ಸಚಿನ್​ರನ್ನು ಔಟ್​ ಮಾಡುವಲ್ಲಿ ಯಶಸ್ವಿಯಾಗಿದ್ದರು.

ರಣಜಿ ಕ್ರಿಕೆಟ್‌ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ಅವರಂತಹ ಬ್ಯಾಟ್ಸ್​ಮನ್​ರನ್ನು ಡಕ್​ಔಟ್​ ಮಾಡಿದ್ದು ನನ್ನ ಪಾಲಿಗೆ ವಿಶೇಷ ಕ್ಷಣವಾಗಿತ್ತು. ಆ ಕ್ಷಣವನ್ನು ನೆನೆದರೆ ಈಗಲೂ ನನಗೆ ರೋಮಾಂಚನವಾಗುತ್ತಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

"ಸಚಿನ್ ವಿಕೆಟ್ ಪಡೆಯುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಆ ವಿಶೇಷ ಕ್ಷಣವನ್ನು ನಾನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅಂತಹ ಸಂದರ್ಭಗಳನ್ನು ನಾವು ಅನುಭವಿಸಲು ಮಾತ್ರ ಸಾಧ್ಯ ಹೊರತು, ವಿವರಿಸುವುದು ಸಾಧ್ಯವಿಲ್ಲ" ಎಂದು ಭುವಿ ಹೇಳಿದ್ದಾರೆ.

ಈ ಸಾಧನೆಯ ಶ್ರೇಯ ಅಂದಿನ ಉತ್ತರಪ್ರದೇಶ ತಂಡದ ನಾಯಕರಾಗಿದ್ದ ಮೊಹಮ್ಮದ್​ ಕೈಫ್​ಗೆ ಸಲ್ಲಬೇಕು. ಅವರು ಫೀಲ್ಡ್​ ಸೆಟ್​ ಮಾಡಿದ್ದರಿಂದ ಸಚಿನ್​ ಕ್ಯಾಚ್​ ಪಡೆಯಲು ಸಾಧ್ಯವಾಯಿತು ಎಂದು ಏಕದಿನ ಕ್ರಿಕೆಟ್​ನಲ್ಲಿ 132 ವಿಕೆಟ್​, ಟೆಸ್ಟ್​ನಲ್ಲಿ 63 ವಿಕೆಟ್​ ಪಡೆದಿರುವ ಭುವನೇಶ್ವರ್​ ಕುಮಾರ್​ ತಿಳಿಸಿದ್ದಾರೆ.

ABOUT THE AUTHOR

...view details