ಕರ್ನಾಟಕ

karnataka

By

Published : Nov 26, 2019, 2:05 PM IST

ETV Bharat / sports

ವಿದಾಯಕ್ಕೂ ಮೊದಲೇ ಆಸೀಸ್​ ಆಯ್ಕೆ ಸಮಿತಿಗೆ ಸೇರಲಿದ್ದಾನೆ ಈ ಕ್ರಿಕೆಟಿಗ!

37 ವರ್ಷದ ಜಾರ್ಜ್​ ಬೈಲಿ ಇನ್ನೂ ಕ್ರಿಕೆಟ್​ನಲ್ಲಿ ಸಕ್ರಿಯರಾಗಿದ್ದಾರೆ. ಟಿ20 ಬಿಗ್​ಬ್ಯಾಶ್​ನಲ್ಲಿ ಹೋಬರ್ಟ್​ ಹರಿಕೇನ್ಸ್​ ತಂಡದ ಪರ ಆಡುತ್ತಿದ್ದಾರೆ. ಜೊತೆಗೆ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ತಸ್ಮೇನಿಯಾ ತಂಡದ ಪರ ಇನ್ನೂ ಆಡುತ್ತಿದ್ದಾರೆ.

George Bailey new australia selector
George Bailey new australia selector

ಸಿಡ್ನಿ: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಜಾರ್ಜ್​ ಬೈಲಿ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಆಯ್ಕೆ ಸಮಿತಿಗೆ ಆಯ್ಕೆಯಾಗುವ ಸಾಧ್ಯತೆ ಇದೆ.

37 ವರ್ಷದ ಜಾರ್ಜ್​ ಬೈಲಿ ಇನ್ನೂ ಕ್ರಿಕೆಟ್​ನಲ್ಲಿ ಸಕ್ರಿಯರಾಗಿದ್ದಾರೆ. ಟಿ20 ಬಿಗ್​ಬ್ಯಾಶ್​ನಲ್ಲಿ ಹೋಬರ್ಟ್​ ಹರಿಕೇನ್ಸ್​ ತಂಡದ ಪರ ಆಡುತ್ತಿದ್ದಾರೆ. ಜೊತೆಗೆ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ತಸ್ಮೇನಿಯಾ ತಂಡದ ಪರ ಇನ್ನೂ ಆಡುತ್ತಿದ್ದಾರೆ.

ಇದೀಗ ಕೋಚ್​ ಜಸ್ಟಿನ್​ ಲ್ಯಾಂಗರ್​ ಹಾಗೂ ಆಯ್ಕೆ ಸಮಿತಿ ಅಧ್ಯಕ್ಷ ಟ್ರೇವರ್​ ಹೋನ್ಸ್​ ಅವರ ಜೊತೆ ಆಯ್ಕೆಸಮಿತಿಯಲ್ಲಿ ಆಯ್ಕೆಗಾರನಾಗಲಿದ್ದಾರೆ ಎಂದು ತಿಳಿದುಬಂದಿದೆ. ಕ್ರಿಕೆಟ್​ನಲ್ಲಿ ನಿವೃತ್ತಿಗೂ ಮೊದಲೇ ಆಯ್ಕೆ ಸಮಿತಿ ಸದಸ್ಯನಾಗುತ್ತಿರುವುದು ಇದೇ ಮೊದಲೇನಲ್ಲ. ಇವರಿಗೂ ಮೊದಲೇ ಡಾನ್​ ಬ್ರಾಡ್ಮನ್​ ಹಾಗೂ ಮೈಕಲ್​ ಕ್ಲಾರ್ಕ್​ ಅವರೂ ಕೂಡ ತಂಡದ ನಾಯಕನಾಗಿದ್ದಾಲೇ ಆಯ್ಕೆ ಸಮಿತಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

ಬೈಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರ 5 ಟೆಸ್ಟ್​, 90 ಏಕದಿನ ಪಂದ್ಯ ಹಾಗೂ 30 ಟಿ20 ಪಂದ್ಯಗಳನ್ನಾಡಿದ್ದಾರೆ.

ABOUT THE AUTHOR

...view details