ಕರ್ನಾಟಕ

karnataka

ETV Bharat / sports

ಭಾರತದ ಈ ಆಟಗಾರನಂತೆ ಕ್ರಿಕೆಟ್​ ಆಡಬೇಕೆಂಬ ಆಸೆ ವ್ಯಕ್ತಪಡಿಸಿದ ಗವಾಸ್ಕರ್​

ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿರುವ ಸುನಿಲ್ ಗವಾಸ್ಕರ್​ ತಾವೂ ಕ್ರಿಕೆಟ್ ಆಡುತ್ತಿದ್ದ ದಿನಗಳಲ್ಲಿ ಆತ್ಮವಿಶ್ವಾಸದ ಕೊರತೆಯಿಂದ ಸುಲಭವಾಗಿ ಬ್ಯಾಟಿಂಗ್​ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಸುನಿಲ್ ಗವಾಸ್ಕರ್​
ಸುನಿಲ್ ಗವಾಸ್ಕರ್​

By

Published : Aug 23, 2020, 5:19 PM IST

ಮುಂಬೈ:ಭಾರತ ಕ್ರಿಕೆಟ್​ನ ದಂತಕತೆ, ಟೆಸ್ಟ್​ ಕ್ರಿಕೆಟ್​ನಲ್ಲಿ 10 ಸಾವಿರ ರನ್​ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್​ಮನ್​ ಆಗಿರುವ ಸುನಿಲ್ ಗವಾಸ್ಕರ್​ಗೆ ಪ್ರಸ್ತುತ ಟೀಮ್​ ಇಂಡಿಯಾದ ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್​ ಶರ್ಮಾರಂತೆ ಬ್ಯಾಟಿಂಗ್ ಮಾಡಲು ಇಷ್ಟಪಡುತ್ತೇನೆಂದು ತಿಳಿಸಿದ್ದಾರೆ.

ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿರುವ ಸುನಿಲ್ ಗವಾಸ್ಕರ್​ ತಾವೂ ಕ್ರಿಕೆಟ್ ಆಡುತ್ತಿದ್ದ ದಿನಗಳಲ್ಲಿ ಆತ್ಮವಿಶ್ವಾಸದ ಕೊರತೆಯಿಂದ ಸುಲಭವಾಗಿ ಬ್ಯಾಟಿಂಗ್​ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ರೋಹಿತ್​ ಶರ್ಮಾ

"ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರೆ, ಅದು ಟೆಸ್ಟ್​ ಆಗಿರಲಿ ಅಥವಾ ಏಕದಿನ ಕ್ರಿಕೆಟ್​ ಆಗಿರಲಿ. ಅವರು ಮೊದಲ ಓವರ್​ನಲ್ಲೇ ದಂಡಿಸಲು ಶುರುಮಾಡುತ್ತಾರೆ. ನನಗೆ ಆ ರೀತಿ ಆಡಬೇಕೆಂಬ ಆಸೆಯಿದೆ. ಸಂದರ್ಭ ಮತ್ತು ನನ್ನ ಸಾಮರ್ಥ್ಯದ ಬಗ್ಗೆ ನನ್ನಲ್ಲಿದ್ದ ಆತ್ಮವಿಶ್ವಾಸದ ಕೊರತೆ ನನಗೆ ಆ ರೀತಿ ಬ್ಯಾಟಿಂಗ್​ ಮಾಡಲು ಅನುಮತಿಸಲಲಿಲ್ಲ"

ಆದರೆ ನಾನು ಅದನ್ನು ಮುಂದಿನ ಪೀಳಿಗೆಯ ಆಟಗಾರರಿಂದ ನೋಡಿ ಸಂತೋಷ ಪಡುತ್ತಿದ್ದೇನೆ. ಬರುವ ಪೀಳಿಗೆಯ ಆಟಗಾರರಲ್ಲೂ ನಾನು ನೋಡಲು ಬಯಸುತ್ತೇನೆ. ಏಕೆಂದರೆ ಅಲ್ಲಿ ಆಟದಲ್ಲಿ ಪ್ರಗತಿ ಕಂಡುಬಂದಿರುತ್ತದೆ ಎಂದು ಗವಾಸ್ಕರ್​ ತಿಳಿಸಿದ್ದಾರೆ.

ಪ್ರಸ್ತುತ ಭಾರತ ಟೆಸ್ಟ್​ ತಂಡದ ಬೌಲರ್​ಗಳನ್ನು ಮೆಚ್ಚಿಕೊಂಡಿರುವ ಅವರು, ಕೊಹ್ಲಿ ನೇತೃತ್ವದ ಭಾರತ ತಂಡದ ಭಾರತ ಇತಿಹಾಸದ ಸಾರ್ವಕಾಲಿಕ ಟೆಸ್ಟ್​ ತಂಡ ಎಂದು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details