ಮುಂಬೈ: ಇಂದು ಕ್ರಿಕೆಟರ್ ಆಗಬಯಸುವ ಕೋಟ್ಯಂತರ ಯುವ ಪೀಳಿಗೆಗೆ ಸಚಿನ್ ತೆಂಡೂಲ್ಕರ್ ಸ್ಪೂರ್ತಿಯಾಗಿದ್ದಾರೆ. ಆದರೆ, ಕ್ರಿಕೆಟ್ ದೇವರಿಗೆ ಅವರು ಕ್ರಿಕೆಟ್ ಆರಂಭಿಸಿದ ದಿನಗಳಲ್ಲಿ ಸುನೀಲ್ ಗವಾಸ್ಕರ್ ಪ್ರೇರಣೆಯಾಗಿದ್ದರು. ಇಂದು ಲಿಟ್ಲ್ ಮಾಸ್ಟರ್ ಗವಾಸ್ಕರ್ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟು 50 ವರ್ಷ ತುಂಬಿದ್ದು, ಸಚಿನ್ ವಿಶೇಷ ಸಂದೇಶದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಲೆಜೆಂಡರಿ ಸುನೀಲ್ ಗವಾಸ್ಕರ್ 1971 ಮಾರ್ಚ್ 6ರಂದು ವೆಸ್ಟ್ ಇಂಡೀಸ್ ವಿರುದ್ಧ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಇಂದು ಅವರು ಕ್ರಿಕೆಟ್ ವೃತ್ತಿ ಜೀವನ ಆರಂಭವಾಗಿ 50 ವರ್ಷ ತುಂಬಿದ ಹಿನ್ನಲೆ ತಮಗೆ ಮಾದರಿಯಾಗಿದ್ದ ಕ್ರಿಕೆಟಿಗನಿಗೆ ಸಚಿನ್ ಟ್ವೀಟ್ನಲ್ಲಿ ಹೃದಯಸ್ಪರ್ಶಿ ಸಂದೇಶವನ್ನು ಅರ್ಪಣೆ ಮಾಡಿದ್ದಾರೆ.
" 50 ವರ್ಷಗಳ ಹಿಂದೆ ಈ ದಿನ ಅವರು ಕ್ರಿಕೆಟ್ ಜಗತ್ತಿಗೆ ಬಿರುಗಾಳಿಯಂತೆ ಪ್ರವೇಶಿಸಿದ್ದರು. ಅವರು ತಮ್ಮ ಚೊಚ್ಚಲ ಸರಣಿಯಲ್ಲಿ ಬರೋಬ್ಬರಿ 774 ರನ್ ಗಳಿಸಿದ್ದರು. ಅವರು ಅಂದು ಬೆಳೆಯುತ್ತಿದ್ದ ನನ್ನಂತಹ ಪ್ರತಿಯೊಬ್ಬರಿಗೂ ನಾಯಕನಾಗಿದ್ದರು' ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.