ಹೈದರಾಬಾದ್: ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಸಂಸದ ಗೌತಮ್ ಗಂಭೀರ್ ಪ್ರಸ್ತುತ ಕ್ರಿಕೆಟ್ನಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟ್ಸ್ಮನ್ ಹೆಸರನ್ನು ಹೇಳಿದ್ದಾರೆ.
ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ಆಕರ್ಷಕ ಶತಕ ಸಿಡಿಸಿದ್ದ ಹಿಟ್ಮ್ಯಾನ್ ರೋಹಿತ್ ಶರ್ಮಾ ಕ್ರಿಕೆಟ್ ಲೋಕದ ಅತ್ಯುತ್ತಮ ಹಾಗೂ ಅಪಾಯಕಾರಿ ಬ್ಯಾಟ್ಸ್ಮನ್ ಎಂದಿದ್ದಾರೆ.
ಸೆಹ್ವಾಗ್ಗಿಂತಲೂ ರೋಹಿತ್ ಶರ್ಮಾ ಉತ್ತಮ ಬ್ಯಾಟ್ಸ್ಮನ್: ಪಾಕ್ ಮಾಜಿ ಬೌಲರ್ ಅಭಿಮತ
ಸ್ಫೋಟಕ ಇನ್ನಿಂಗ್ಸ್ ಆಡುವುದು ರೋಹಿತ್ಗೆ ಕರಗತವಾಗಿದೆ. ಟೆಸ್ಟ್ ಪಂದ್ಯದಲ್ಲೂ ಇದನ್ನೇ ಅನುಸರಿಸುವ ಸಾಧ್ಯತೆ ಇತ್ತು. ಆದರೆ, ಆ ಮಾದರಿ(ಟೆಸ್ಟ್ ಕ್ರಿಕೆಟ್)ಗೆ ಅಗತ್ಯವಿರುವ ಅತ್ಯುತ್ತಮ ಆಟವನ್ನು ರೋಹಿತ್ ಆಡಿ ತೋರಿಸಿದ್ದಾರೆ ಎಂದು 2011ರ ವಿಶ್ವಕಪ್ ಹೀರೋ ಗೌತಮ್ ಗಂಭೀರ್ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ರೋಹಿತ್ ಶರ್ಮಾ ಸದ್ಯದ ಅಪಾಯಕಾರಿ ಬ್ಯಾಟ್ಸ್ಮನ್ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ರೋಹಿತ್ ಸಹ ಸೆಹ್ವಾಗ್ರಂತೆ ಟೆಸ್ಟ್ ಪಂದ್ಯದ ಚೇಸಿಂಗ್ ವೇಳೆ ನಿರ್ಣಾಯಕರಾಗಬಲ್ಲರು, ಆದರೆ, ಅವರನ್ನು ಕಾಪಾಡಿಕೊಂಡು ಬೆಳೆಸುವ ಜವಾಬ್ದಾರಿ ತಂಡದ ಮೇಲಿದೆ ಎಂದು ಗೌತಿ ಅಭಿಪ್ರಾಯಪಟ್ಟಿದ್ದಾರೆ.
ದಯವಿಟ್ಟು ರೋಹಿತ್ರನ್ನು ಅವರ ಪಾಡಿಗೆ ಬಿಟ್ಟುಬಿಡಿ.. ಹೀಗೊಂದು ಮನವಿ ಮಾಡಿದ ಕೊಹ್ಲಿ..